Home
ಸುದ್ದಿಜಾಲ

60 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಈ ಇಯರ್‌ಬಡ್ಸ್‌! ಇದರ ಬೆಲೆ ತುಂಬಾ ಕಡಿಮೆ!

ನಾಯ್ಸ್‌ ಕಂಪೆನಿಯ ಇಯರ್‌ಬಡ್ಸ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಯುವಜನರ ಆಶಯಗಳಿಗೆ ಸೂಕ್ತವಾದ ರೀತಿಯ ವಿನ್ಯಾಸವೇ ಇದಕ್ಕೆ ಕಾರಣ ಎನ್ನಬಹುದು. ವಿವಿಧ ಮಾದರಿಯ ಇಯರ್‌ಬಡ್ಸ್‌ಗಳ ಮೂಲಕ ಯುವಜನರ ದಿಲ್‌ ಗೆದ್ದಿರುವ ನಾಯ್ಸ್‌ ಕಂಪೆನಿ ಇದೀಗ ಹೊಸ ಔರಾ ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ನಾಯ್ಸ್‌ ಔರಾ ಬಡ್ಸ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಇಯರ್‌ಫೋನ್‌ ಲಾಂಗ್‌ ಟೈಂ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವುದು ಇದರ ಮೇನ್‌ ಹೈಲೈಟ್‌ ಆಗಿದೆ. ಇನ್ನು ಇಯರ್‌ಬಡ್ಸ್‌ ಸ್ಪ್ಲಾಶ್‌ ಮತ್ತು ಬೆವರಿನಿಂದ ರಕ್ಷಣೆಗಾಗಿ IPX5-ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇದು ಆರಾಮದಾಯಕವಾದ ಫಿಟ್‌ಗಾಗಿ ಸಿಲಿಕೋನ್ ಇಯರ್ ಟಿಪ್ಸ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

60 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಈ ಇಯರ್‌ಬಡ್ಸ್‌! ಬೆಲೆ ತುಂಬಾ ಕಡಿಮೆ!

ನಾಯ್ಸ್ ಔರಾ ಬಡ್ಸ್ ಫೀಚರ್ಸ್‌ ಹೇಗಿದೆ?
ನಾಯ್ಸ್ ಔರಾ ಬಡ್ಸ್ ಕರ್ಣೀಯ ಪಟ್ಟೆಗಳನ್ನು ಹೊಂದಿರುವ ಕಾಂಡವನ್ನು ಹೊಂದಿದೆ. ಅಲ್ಲದೆ ಆರಾಮದಾಯಕವಾದ ಫಿಟ್‌ಗಾಗಿ ಸಿಲಿಕೋನ್ ಇಯರ್ ಟಿಪ್ಸ್ ಅನ್ನು ಒಳಗೊಂಡಿದೆ. ಇದರಿಂದ ಇಯರ್‌ಫೋನ್‌ಗಳ ಕಾಂಡದ ಮೇಲೆ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ವಿವಿಧ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಇದು 12mm ಪಾಲಿಮರ್ ಕಾಂಪೋಸಿಟ್ ಡ್ರೈವರ್‌ನೊಂದಿಗೆ ಸಜ್ಜುಗೊಂಡಿದೆ. ಇದಲ್ಲದೆ ಕರೆಗಳಲ್ಲಿ ಸ್ಪಷ್ಟ ಗುಣಮಟ್ಟಕ್ಕಾಗಿ ಕ್ವಾಡ್-ಮೈಕ್ ಎಕೋ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಸಹ ಹೊ೦ದಿದೆ.

60 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಈ ಇಯರ್‌ಬಡ್ಸ್‌! ಬೆಲೆ ತುಂಬಾ ಕಡಿಮೆ!

ಇನ್ನು ನಾಯ್ಸ್ ಔರಾ ಬಡ್ಸ್ ಆಡಿಯೊ ಡಿವೈಸ್‌ ಗೇಮಿಂಗ್ ಉದ್ದೇಶಗಳಿಗಾಗಿ 50ms ಕಡಿಮೆ ಲೇಟೆನ್ಸಿ ಮೋಡ್ ಅನ್ನು ಒಳಗೊಂಡಿದೆ. ಇದು ಹೈಪರ್ ಸಿಂಕ್ ಸಂಪರ್ಕ ತಂತ್ರಜ್ಞಾನವನ್ನು ಹೊಂದಿರುವುದರಿಂದ ಇಯರ್‌ಫೋನ್‌ಗಳನ್ನು ತ್ವರಿತವಾಗಿ ಜೋಡಿಸಬಹುದು. ಹೆಚ್ಚುವರಿಯಾಗಿ, ಇವುಗಳನ್ನು ಬ್ಲೂಟೂತ್ 5.3 ಮೂಲಕ ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇನ್ನು ಇಯರ್‌ಬಡ್ಸ್‌ ಒಟ್ಟು 60 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ ಎನ್ನಲಾಗಿದೆ. ಜೊತೆಗೆ ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 150 ನಿಮಿಷಗಳ ಪ್ಲೇಬ್ಯಾಕ್ ಟೈಂ ನೀಡಲಿದೆ ಎಂದು ವರದಿಯಾಗಿದೆ.

ನಾಯ್ಸ್‌ ಔರಾ ಬಡ್ಸ್‌ ಸ್ಪ್ಲಾಶ್ ಮತ್ತು ಬೆವರಿನಿಂದ ರಕ್ಷಣೆಗಾಗಿ IPX5-ರೇಟಿಂಗ್‌ ಹೊಂದಿದೆ. ಇದರಿಂದ ವ್ಯಾಯಾಮ, ವರ್ಕ್‌ಔಟ್‌ ಸಮಯದಲ್ಲಿಯೂ ಸಹ ಧರಿಸುವುದಕ್ಕೆ ತೊಂದರೆಯಾಗುವುದಿಲ್ಲ. ಇದು ನಿಮ್ಮ ಕಿವಿಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ ಹೊಂದಿರುವುದರಿಂದ ಅತ್ಯುತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಕರೆಗಳನ್ನು ಕೂಡ ಕಂಟ್ರೋಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ.

60 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಈ ಇಯರ್‌ಬಡ್ಸ್‌! ಬೆಲೆ ತುಂಬಾ ಕಡಿಮೆ!

ಇನ್ನು ಭಾರತದಲ್ಲಿ ನಾಯ್ಸ್ ಔರಾ ಬಡ್ಸ್‌1,399 ರೂ ಬೆಲೆಯನ್ನು ಹೊಂದಿದೆ. ಇದು ಅಮೆಜಾನ್‌ ಮತ್ತು ನಾಯ್ಸ್‌ ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ನವೆಂಬರ್ 23 ರಿಂದ ಖರೀದಿಗೆ ಬರಲಿದೆ. ಇದನ್ನು ನೀವು ಔರಾ ವೈಟ್, ಔರಾ ಬ್ಲೂ ಮತ್ತು ಔರಾ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚೆಗೆ ನಾಯ್ಸ್‌ಫಿಟ್‌ ಎವೊಲ್ವ್‌ 4 ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಕ್ರಿಯಾತ್ಮಕ ಕ್ರೌನ್‌ ಬಟನ್‌ ಹಾಗೂ ಪುಶ್ ಬಟನ್‌ನೊಂದಿಗೆ ರೌಂಡ್ ಡಯಲ್ ವಿನ್ಯಾಸವನ್ನು ಹೊಂದಿದ್ದು, ಸಿಲಿಕೋನ್ ಮತ್ತು ಮೆಟಾಲಿಕ್ ಸೇರಿದಂತೆ ಡ್ಯುಯಲ್ ಸ್ಟ್ರಾಪ್ ಆಯ್ಕೆಗಳೊಂದಿಗೆ ಪ್ರೀಮಿಯಂ ಸೌಲಭ್ಯ ಪಡೆದಿದೆ. ಈ ಸ್ಮಾರ್ಟ್‌ವಾಚ್‌ 1.46 ಇಂಚಿನ ದೊಡ್ಡ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ನೀವು ಎಂತಹುದೇ ಪರಿಸರದಲ್ಲಿ ಇದ್ದರೂ ಸಹ ಯಾವುದೇ ಸಮಸ್ಯೆ ಇಲ್ಲದೆ ವಾಚ್‌ ಬಳಕೆ ಮಾಡಬಹುದು. ಜೊತೆಗೆ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಆಯ್ಕೆಯೊಂದಿಗೆ 100+ ವಾಚ್‌ ಫೇಸ್‌ ಆಯ್ಕೆಯನ್ನು ಈ ವಾಚ್‌ನಲ್ಲಿ ಕಾಣಬಹುದು.

Best Mobiles in India

English summary
Noise Aura Buds With 60-Hour Battery Life Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+