Home
ಸುದ್ದಿಜಾಲ

ಭಾರತದಲ್ಲಿ ನಾಯ್ಸ್ ಬಡ್ಸ್ N1 ಇಯರ್‌ಫೋನ್‌ ಲಾಂಚ್‌: ಶೈನಿ ಫಿನಿಶ್‌ ವಿಶೇಷ!

ನಾಯ್ಸ್‌ ಕಂಪೆನಿಯ ಇಯರ್‌ಬಡ್ಸ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್‌ಬಡ್ಸ್‌ಗಳಿಂದಾಗಿ ಟೆಕ್‌ ವಲಯದಲ್ಲಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸದಾಗಿ ನಾಯ್ಸ್ ಬಡ್ಸ್ N1 ಅನ್ನು ಬಿಡುಗಡೆ ಮಾಡಿದೆ. ಇದು ಬ್ರ್ಯಾಂಡ್‌ನ ಹಿಯರಬಲ್ಸ್ ಪೋರ್ಟ್‌ಫೋಲಿಯೊಗೆ ಹೊಸ ಸೇರ್ಪಡೆಯಾಗಿದೆ.

ಹೌದು, ನಾಯ್ಸ್ ಬಡ್ಸ್ N1 ಇಯರ್‌ಬಡ್ಸ್‌ ಭಾರತಕ್ಕೆ ಎಂಟ್ರಿ ನೀಡಿದೆ. ಇದು ಇನ್-ಇಯರ್ ವಿನ್ಯಾಸ ಮತ್ತು ಶೈನಿ ಫಿನಿಶ್‌ ಅನ್ನು ಹೊಂದಿದೆ. ಇದು ಇಎನ್‌ಸಿ ಕ್ವಾಡ್ ಮೈಕ್ರೊಫೋನ್ ಸೆಟಪ್‌ ಅನ್ನು ಒಳಗೊಂಡಿದೆ. ಜೊತೆಗೆ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ. ಹಾಗಾದ್ರೆ ಹೊಸ ನಾಯ್ಸ್‌ ಬಡ್ಸ್‌ N1 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ನಾಯ್ಸ್ ಬಡ್ಸ್ N1 ಇಯರ್‌ಫೋನ್‌ ಲಾಂಚ್‌: ಶೈನಿ ಫಿನಿಶ್‌ ವಿಶೇಷ!

ನಾಯ್ಸ್ ಬಡ್ಸ್ N1 ಫೀಚರ್ಸ್‌ ಹೇಗಿದೆ?
ನಾಯ್ಸ್ ಬಡ್ಸ್ N1 ಮೊಬೈಲ್ ಗೇಮರ್‌ಗಳಿಗೆ ಅತ್ಯಗತ್ಯವಾಗಿರುವ 40ms ನ ಕಡಿಮೆ ಲೇಟೆನ್ಸಿ ಮೋಡ್ ಅನ್ನು ನೀಡುತ್ತದೆ. ಇನ್ನು ಈ ಇಯರ್‌ಬಡ್ಸ್‌ಗಳ ಬಾಡಿ ಟಚ್‌ ಕಂಟ್ರೋಲ್‌ ಫಂಕ್ಷನ್‌ ಅನ್ನು ಸಹ ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಚಾರ್ಜಿಂಗ್ ಕೇಸ್‌ನೊಂದಿಗೆ 40 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಿಂದ 2 ಗಂಟೆಗಳವರೆಗೆ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇದಕ್ಕಾಗಿ ಬ್ರ್ಯಾಂಡ್ ಇನ್‌ಸ್ಟಾಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ.

ಇನ್ನು ಈ ಇಯರ್‌ಫೋನ್‌ ಇನ್-ಇಯರ್ ವಿನ್ಯಾಸ ಮತ್ತು ಶೈನಿ ಫಿನಿಶ್‌ ಹೊಂದಿರುವುದರಿಂದ ಯುವಕರ ಗಮನಸೆಳೆದಿದೆ. ಇದು ಇಎನ್‌ಸಿ ಕ್ವಾಡ್ ಮೈಕ್ರೊಫೋನ್ ಸೆಟಪ್‌ನೊಂದಿಗೆ ಬರಲಿದ್ದು, ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದಲ್ಲದೆ ಈ ಇಯರ್‌ಫೋನ್‌ ಕಂಪನಿಯಿಂದ 1 ವರ್ಷದ ವಾರಂಟಿಯೊಂದಿಗೆ ಬರುತ್ತವೆ. ಇದಲ್ಲದೆ ವಿಶೇಷವಾಗಿ ಇಯರ್‌ಫೋನ್‌ ಡ್ಯುಯಲ್ ಪೇರಿಂಗ್ ಫಂಕ್ಷನ್ ಮತ್ತು ದೈಹಿಕವಾಗಿ ಸಕ್ರಿಯವಾಗಿರುವ ಬಳಕೆದಾರರಿಗೆ ಬೆವರು ನಿರೋಧಕ ವಿನ್ಯಾಸವನ್ನು ಒಳಗೊಂಡಿವೆ.

ಭಾರತದಲ್ಲಿ ನಾಯ್ಸ್ ಬಡ್ಸ್ N1 ಇಯರ್‌ಫೋನ್‌ ಲಾಂಚ್‌: ಶೈನಿ ಫಿನಿಶ್‌ ವಿಶೇಷ!

ನಾಯ್ಸ್‌ ಬಡ್ಸ್‌ N1 ಬೆಲೆ ಮತ್ತು ಲಭ್ಯತೆ
ನಾಯ್ಸ್‌ ಬಡ್ಸ್‌ N1 ಇಯರ್‌ಬಡ್ಸ್‌ ಭಾರತದಲ್ಲಿ 999ರೂ ಬೆಲೆಯನ್ನು ಹೊಂದಿದೆ. ಇದು ಫಾರೆಸ್ಟ್ ಗ್ರೀನ್, ಐಸ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಮಾರಾಟವು 20 ಫೆಬ್ರವರಿ 2024 ರಂದು ಪ್ರಾರಂಭವಾಗುತ್ತದೆ. ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ಬಡ್ಸ್ ಕ್ಸೆರೋ ಬಿಡುಗಡೆಯಾದ ನಂತರ Noise Buds N1 ಆಗಮಿಸುತ್ತದೆ.

ಇದಲ್ಲದೆ ನಾಯ್ಸ್‌ ಕಂಪೆನಿ ತೀರಾ ಇತ್ತೀಚಿಗೆ Noise Buds Xero ಬಡ್ಸ್‌ ಬಿಡುಗಡೆ ಮಾಡಿದೆ. ಇದು ಸ್ಟೈಲಿಶ್‌ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದಕ್ಕೆ ಸೂಕ್ತವಾದ ರೀತಿಯ ವಿನ್ಯಾಸದಲ್ಲಿ ಬಿಡುಗಡೆ ಮಾಡಲಾಗಿದೆ. ಅದರಂತೆ ಈ ಇಯರ್‌ಬಡ್‌ಗಳು 50dB ವರೆಗಿನ ಶಬ್ದ ಕಡಿತದೊಂದಿಗೆ ಅಡಾಪ್ಟಿವ್ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಅನ್ನು ನೀಡುತ್ತವೆ. ಇದು ಸುತ್ತಮುತ್ತಲಿನ ಆಧಾರದ ಮೇಲೆ ವೈಯಕ್ತೀಕರಿಸಿದ ಧ್ವನಿ ನಿಯಂತ್ರಣಕ್ಕಾಗಿ ಮೂರು ANC ವಿಧಾನಗಳನ್ನು (ಪಾರದರ್ಶಕ, ಬೆಳಕು ಮತ್ತು ಆಳವಾದ) ಒದಗಿಸುತ್ತದೆ.

ಇದಲ್ಲದೆ ಹೆಚ್ಚುವರಿಯಾಗಿ, ಈ ಇಯರ್‌ಬಡ್ಸ್‌ ಸೌಂಡ್‌ + ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಇದು ನಿಮ್ಮ ಫೋನ್‌ ಕಾಲ್‌ ಗುಣಮಟ್ಟವನ್ನು ಸುಧಾರಿಸಲಿದ್ದು, ಸ್ಪಷ್ಟ ಸಂವಹನವನ್ನು ಖಾತ್ರಿಗೊಳಿಸುತ್ತದೆ. ಜೊತೆಗೆ ಗೇಮರುಗಳಿಗಾಗಿ ಮತ್ತು ವೀಡಿಯೊ ಉತ್ಸಾಹಿಗಳಿಗೆ ಬಡ್ಸ್ ಝೀರೋ 50ms ವರೆಗಿನ ಕಡಿಮೆ ಲೇಟೆನ್ಸಿ ಮೋಡ್ ಅನ್ನು ನೀಡಲಿದೆ. ಇದು ತಡೆರಹಿತ ಆಡಿಯೊ-ವಿಶ್ಯುಯಲ್ ಸಿಂಕ್‌ ನೀಡಲಿದೆ. ಇದಕ್ಕಾಗಿ ಆಡಿಯೊ ವಿಳಂಬವನ್ನು ಕಡಿಮೆ ಮಾಡಲಿದೆ. ಜೊತೆಗೆ ಹೆಚ್ಚುವರಿಯಾಗಿ, ಇನ್-ಇಯರ್ ಡಿಟೆಕ್ಷನ್ ಬೆಂಬಲವು ಉಪಯುಕ್ತತೆಯನ್ನು ಹೆಚ್ಚಿಸಲಿದೆ.

Best Mobiles in India

English summary
Noise Buds N1 TWS with 40 hr playback Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+