ಭಾರತಕ್ಕೆ ಎಂಟ್ರಿ ಕೊಟ್ಟ ನಾಯ್ಸ್ ಬಡ್ಸ್ VS104 ಮ್ಯಾಕ್ಸ್; ಬೆಲೆ ಎಷ್ಟು? ವಿಶೇಷತೆ ಏನು?
ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾದಂತೆ ಇಯರ್‌ಫೋನ್‌ಗಳು ಕೂಡ ಡಿಮ್ಯಾಂಡ್ ಪಡೆದುಕೊಂಡಿವೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಫೋನ್ ಕೊಡುವುದನ್ನು ನಿಲ್ಲಿಸಿದ ನಂತರ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಇಯರ್‌ಫೋನ್‌ಗಳ ಸಖತ್ ಸೌಂಡ್ ಮಾಡುತ್ತಿವೆ. ಇದರಲ್ಲಿ ನಾಯ್ಸ್ ಕಂಪೆನಿ ಕೂಡ ಒಂದಾಗಿದ್ದು, ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.
ಹೌದು, ನಾಯ್ಸ್ ಕಂಪೆನಿ ವಿಭಿನ್ನ ಮಾದರಿಯ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ ತನ್ನ ಹೊಸ ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್ ಒಳಗೊಂಡಿದ್ದು, ಕೈ ಗೆಟಕುವ ಬೆಲೆಯನ್ನು ಹೊಂದಿದೆ. ಹಾಗಾದ್ರೆ ಈ ಹೊಸ ಇಯರ್‌ಬಡ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ವಿಶೇಷತೆ ಏನು?
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಪ್ರೀಮಿಯಂ ಆಡಿಯೋ ಅನುಭವವನ್ನು ನೀಡಲಿದೆ. ಇದಕ್ಕಾಗಿ 13mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್ ಬ್ಲೂಟೂತ್ 5.3 ಆನ್‌ಬೋರ್ಡ್ ಜೊತೆಗೆ ಹೈಪರ್ ಸಿಂಕ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದರಿಂದ ನೀವು ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್ ಮುಚ್ಚಳವನ್ನು ತೆರೆದ ತಕ್ಷಣವೇ ನಿಮ್ಮ ಸ್ಮಾರ್ಟ್‌ಫೊನ್‌ನೊಂದಿಗೆ ಇಯರ್‌ಬಡ್ಸ್‌ಗಳನ್ನು ಕನೆಕ್ಟ್ ಮಾಡಲಿದೆ.
ಇನ್ನು ಈ ಇಯರ್‌ಬಡ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದರಿಂದ ನಿಮ್ಮ ಸುತ್ತಮತ್ತಲಿನ ಶಬ್ದವನ್ನು 25 dB ವರೆಗೆ ಕಡಿತಗೊಳಿಸುತ್ತದೆ. ಈ ಕಾರಣಕ್ಕಾಗಿ ನೀವು ಇಯರ್‌ಬಡ್ಸ್ ಅನ್ನು ಧರಿಸಿಕೊಂಡಾಗ ಅಹ್ಲಾದಕರ ಹಾಗೂ ತಲ್ಲೀನಗೊಳಿಸುವ ಆಲಿಸುವ ಅನುಭವವನ್ನು ಪಡೆದುಕೊಳ್ಳಬಹುದು. ಜೊತೆಗೆ ನಿಮ್ಮ ಇಯರ್‌ಬಡ್ಸ್‌ಗಳನ್ನು ತೆಗೆಯದೆಯೇ ಹೊರಗಿನ ಶಬ್ದಗಳನ್ನು ಕೇಳುವುದಕ್ಕೆ ಅನುಮತಿಸುವ ಪಾರದರ್ಶಕತೆ ಮೋಡ್ ಅನ್ನು ಸಹ ಹೊಂದಿದೆ.
ಇದಲ್ಲದೆ ಈ ಇಯರ್‌ಬಡ್ಸ್ ಕರೆಗಳು ಮತ್ತು ವರ್ಚುವಲ್ ಮೀಟಿಂಗ್‌ಗಳ ಸಮಯದಲ್ಲಿ ಸ್ಪಷ್ಟ ಸಂವಹನಕ್ಕಾಗಿ ಕ್ವಾಡ್ ಮೈಕ್ ಮತ್ತು ಎನ್ವಿರಾನ್‌ಮೆಂಟಲ್ ನಾಯ್ಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇನ್ನು ಗೇಮರ್‌ಗಳ ಅನುಕೂಲಕ್ಕಾಗಿ ಅಂದರೆ ಗೇಮಿಂಗ್ ಮತ್ತು ವೀಡಿಯೊಗಳನ್ನು ವೀಕ್ಷಿಸಲು ಕಡಿಮೆ ಲೇಟೆನ್ಸಿ ಮೋಡ್ ಅನ್ನು ಸಹ ಹೊಂದಿದೆ. ಇದಿಷ್ಟೇ ಅಲ್ಲ ಈ ಇಯರ್‌ಬಡ್ಸ್ 50ms ವರೆಗೆ ಆಡಿಯೊ ಸಿಂಕ್ರೊನೈಸೇಶನ್ ಅನ್ನು ನೀಡಲಿದೆ.
ಇನ್ನು ನಾಯ್ಸ್ ಬಡ್ಸ್ VS104 ಮ್ಯಾಕ್ಸ್ 45 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ. ಇದಕ್ಕಾಗಿ ಇನ್‌ಸ್ಟಾಚಾರ್ಜ್ ಟೆಕ್ನಾಲಜಿಯನ್ನು ನೀಡಲಿದ್ದು, 10 ನಿಮಿಷದ ಚಾರ್ಜಿಂಗ್ ಟೈಂನಲ್ಲಿ ಮೂರು ಗಂಟೆಗಳ ಬ್ಯಾಟರಿ ಟೈಂ ನೀಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್ IPX5 ವಾಟರ್ ಪ್ರೂಫ್ ವ್ಯವಸ್ಥೆಯನ್ನು ಹೊಂದಿದ್ದು, ನಿಮ್ಮ ಕಿವಿಗಳ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಸೀಮಿತ ಅವಧಿಗೆ 1,699 ರೂಪಾಯಿಗಳ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಪ್ರಿ ಆರ್ಡರ್‌ಗೆ ಲಭ್ಯವಿದ್ದು, ಆಗಸ್ಟ್ 3 ರಿಂದ ಅಮೆಜಾನ್ ಇಂಡಿಯಾ ಸೈಟ್ ಮೂಲಕ ಸೇಲ್ ಆಗಲಿದೆ.
ನಾಯ್ಸ್ ಕಂಪೆನಿ ಇತ್ತೀಚಿಗೆ ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರಿಂದ ಬಳಕೆದಾರರು ಸಿಂಗಲ್ ಟ್ಯಾಪ್ ಮೂಲಕ ಡಿವೈಸ್ ಅನ್ನು ಆಲರ್ಟ್ ಮಾಡಬಹುದಾಗಿದೆ. ಇದು ಸ್ಮಾರ್ಟ್‌ವಾಚ್ ಮೇಲಿನ ಬಲಭಾಗದಲ್ಲಿ ಸಂಪೂರ್ಣ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ವಾಚ್ ಬಳಕೆದಾರರಿಗೆ ಹೆಲ್ತ್ ಫೀಚರ್ಸ್ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಹಾರ್ಟ್‌ಬೀಟ್ ಮಾನಿಟರ್, SpO2 ಸೆನ್ಸಾರ್ ಮತ್ತಯ ಮಹಿಳೆಯರ ಆರೋಗ್ಯದ ವಿಚಾರವಾಗಿ ಅನೇಕ ಹೆಲ್ತ್ ಟ್ರ್ಯಾಕರ್‌ಗಳನ್ನು ಹೊಂದಿದೆ.


Click it and Unblock the Notifications








