ಇದು ಸ್ಮಾರ್ಟ್‌ವಾಚ್ ಜಮಾನ! ನಾಯ್ಸ್ ಸಂಸ್ಥೆಯ ಈ ವಾಚ್ ಅಬ್ಬರಿಸೋದು ಗ್ಯಾರಂಟಿ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ನಾಯ್ಸ್ ಕಂಪೆನಿ ಸುನಾಮಿಯಂತೆ ಅಬ್ಬರಿಸುತ್ತಿದೆ. ಒಂದರ ಹಿಂದೆ ಒಂದರಂತೆ ಹತ್ತು ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣಗೊಳಿಸುತ್ತಾ ಬಂದಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಭಾರತದಲ್ಲಿ ಹೊಸ ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ.
ಹೌದು, ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಫ್ಲಾಟ್ ಎಡ್ಜ್ ವಿನ್ಯಾಸವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಹೆಲ್ತ್ ಸೂಟ್, ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ. ಇದು ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್3 ವಾಚ್ ಡಿಸೈನ್ ಹೇಗಿದೆ?
ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ 1.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 100+ ಕಸ್ಟಮೈಸ್ಟ್ ವಾಚ್‌ಫೇಸ್‌ಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಯಾವಾಗಲೂ ಆನ್ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದೆ. ಇದರ ಸ್ಕ್ವೇರ್ ಆಕಾರದ ಡಯಲ್ ಎಲ್ಲರನ್ನು ಗಮನಸೆಳೆಯುವಂತಿದೆ. ಇದರೊಂದಿಗೆ ಕ್ರಿಯಾತ್ಮಕ ಕ್ರೌನ್ ಕೂಡ ಆಕರ್ಷಕವಾಗಿದ್ದು, ಬ್ಲೂಟೂತ್ v5.3 ಬೆಂಬಲವನ್ನು ಸಹ ಪಡೆದುಕೊಂಡಿದೆ.

ಇನ್ನು ಈ ಸ್ಮಾರ್ಟ್‌ವಾಚ್ ಟ್ರೂ ಸಿಂಕ್ ಟೆಕ್ನಾಲಜಿಯೊಂದಿಗೆ ಬ್ಲೂಟೂತ್ ಕಾಲಿಂಗ್ ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್ ಕರೆಗಳನ್ನು ಸ್ಮಾರ್ಟ್‌ವಾಚ್ ಮೂಲಕವೇ ಕಂಟ್ರೋಲ್ ಮಾಡಬಹುದಾಗಿದೆ. ಇದು 100+ ಕಸ್ಟಮೈಸ್ಡ್ ವಾಚ್ ಫೇಸ್‌ಗಳನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿಯೂ ಸಹ ಹೆಲ್ತ್ ಫೀಚರ್ಸ್‌ಗಳಿಗೆ ಪ್ರಾದಾನ್ಯತೆ ನೀಡಲಾಗಿದೆ. ಅದರಂತೆ ವಾಚ್ 24×7 ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ, ಸ್ತ್ರೀ ಸೈಕಲ್ ಟ್ರ್ಯಾಕರ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಇನ್ನು ಸ್ಮಾರ್ಟ್‌ವಾಚ್ ಅಧಿಸೂಚನೆ ಪ್ರದರ್ಶನ, ಜ್ಞಾಪನೆಗಳು, ಅಲಾರ್ಮ್, ಕ್ಯಾಮೆರಾ ನಿಯಂತ್ರಣ, ಸಂಗೀತ ನಿಯಂತ್ರಣ, ಕ್ಯಾಲ್ಕುಲೇಟರ್, ವೆದರ್ ಅಪ್ಡೇಟ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ, ಆದರೆ ಬ್ಲೂಟೂತ್ ಕರೆಯೊಂದಿಗೆ 2 ದಿನಗಳವರೆಗೆ ಬ್ಯಾಕ್‌ಅಪ್ ನೀಡಲಿದೆ. ಈ ಸ್ಮಾರ್ಟ್ ವಾಚ್ ನಾಯ್ಸ್ ಹೆಲ್ತ್ ಸೂಟ್ ಅಪ್ಲಿಕೇಶನ್ ಬೆಂಬಲಿಸಲಿದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ ಭಾರತದಲ್ಲಿ 2,499ರೂ ಬೆಲೆಯನ್ನು ಹೊಂದಿದೆ. ಇದು ಮಿಂಟ್ ಗ್ರೀನ್, ಸ್ಪೇಸ್ ಬ್ಲೂ, ರೋಸ್ ಪಿಂಕ್, ಜೆಟ್ ಬ್ಲಾಕ್ ಮತ್ತು ಡೀಪ್ ವೈನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಸ್ಮಾರ್ಟ್‌ವಾಚ್ ಇಂದಿನಿಂದ (ನ. 7) ನಾಯ್ಸ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ.
ಇನ್ನು ಇತ್ತೀಚಿಗೆ ನಾಯ್ಸ್ ಕಂಪೆನಿ ಭಾರತದಲ್ಲಿ ಹೊಸ ಸ್ಮಾರ್ಟ್‌ರಿಂಗ್ ಲೂನಾ ರಿಂಗ್ ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ ಉಂಗುರ ಮಾತ್ರವಲ್ಲ ನಿಮ್ಮ ಹೃದಯ ಬಡಿತವನ್ನು ಕೂಡ ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ರಿಂಗ್ ಟೆಂಪ್‌ರೇಚರ್ ಅನ್ನು ಕೂಡ ಅಳೆಯುವ ಕ್ಯಾಪಾಸಿಟಿ ಪಡೆದಿದೆ. ಸ್ಮಾರ್ಟ್ ರಿಂಗ್ ಇನ್‌ಫ್ರಾರೆಡ್ ಫೋಟೋಪ್ಲೆಥಿಸ್ಮೋಗ್ರಫಿ (PPG) ಸೆನ್ಸಾರ್‌ಗಳು, ಸ್ಕಿನ್ ಟೆಂಪ್‌ರೇಚರ್ ಸೆನ್ಸಾರ್‌ಗಳು ಮತ್ತು 3 ಆಕ್ಸಿಸ್ ಅಕ್ಸಿಲೆರೊಮೀಟರ್‌ನಂತಹ ಅಡ್ವಾನ್ಸ್ ಸೆನ್ಸಾರ್‌ಗಳನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ಬೆರಳಿನಿಂದ ಆಪ್ಟಿಕಲ್ ಸೆನ್ಸಾರ್‌ಗಳ ಜೋಡಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಮೂರು ಉಬ್ಬುಗಳ ಜೊತೆಗೆ ಮೂರು ಎಲ್ಇಡಿಗಳು ಮತ್ತು ಎರಡು ಪಿಡಿಗಳನ್ನು ಸಂಯೋಜಿಸುವ ಆಪ್ಟೋಮೆಕಾನಿಕಲ್ ವಿನ್ಯಾಸವನ್ನು ಬಳಸಿದೆ.


Click it and Unblock the Notifications








