Home
ಸುದ್ದಿಜಾಲ

Noise: ನಾಯ್ಸ್‌ ಸಂಸ್ಥೆಯಿಂದ ಹೊಸ ವಾಚ್‌ ಅನಾವರಣ! ಫೀಚರ್ಸ್‌ ಮಾತ್ರ ಬೆಂಕಿ!

ಭಾರತದ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ನಾಯ್ಸ್‌ ಸಂಸ್ಥೆಯ ಡಿವೈಸ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ತನ್ನ ವಿಭಿನ್ನ ವಿಶಿಷ್ಟ ಶೈಲಿಯ ಸ್ಮಾರ್ಟ್‌ವಾಚ್‌ಗಳಿಂದಾಗಿ ನಾಯ್ಸ್‌ ಸಂಸ್ಥೆ ಸೈ ಎನಿಸಿಕೊಂಡಿದೆ. ಅದಕ್ಕೆ ಇಂಬುಕೊಡುವಂತೆ ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ನಾಯ್ಸ್‌ (noise) ಕಂಪೆನಿ ಭಾರತದಲ್ಲಿ ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ ColorFit ಸರಣಿಗೆ ಹೊಸ ಸೇರ್ಪಡೆಯಾಗಿದೆ. ಇನ್ನು ಸ್ಮಾರ್ಟ್ ವಾಚ್ 10 ದಿನದ ಬ್ಯಾಟರಿ ಬಾಳಿಕೆ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಫ್ರೇಮ್‌ನೊಂದಿಗೆ ಬರುತ್ತದೆ. ಹಾಗಾದ್ರೆ ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ ಪೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Noise: ನಾಯ್ಸ್‌ ಸಂಸ್ಥೆಯಿಂದ ಹೊಸ ವಾಚ್‌ ಅನಾವರಣ! ಫೀಚರ್ಸ್‌ ಮಾತ್ರ ಬೆಂಕಿ!

ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ ಮಲ್ಟಿ ಅಪ್ಲಿಕೇಶನ್‌ಗಳು ಮತ್ತು ಸೆಟ್ಟಿಂಗ್ಸ್‌ನಲ್ಲಿ ನ್ಯಾವಿಗೇಟ್ ಮಾಡಲು ಕಿರೀಟವನ್ನು ಸಹ ಹೊಂದಿದೆ. ಇದು ಸ್ಕ್ವಾರಿಶ್ ವಿನ್ಯಾಸವನ್ನು ಹೊಂದಿದ್ದು, ಮೆಟಲ್‌ ಚೌಕಟ್ಟಿನೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ವಾಚ್‌ 1.85 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ವಾಚ್‌ ಬ್ಲೂಟೂತ್ ಕರೆಗೆ ಬೆಂಬಲವನ್ನು ನೀಡಲಿದೆ. ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಹೊಂದಿದ್ದು, ಸ್ಪೀಕರ್ ಹೊಂದಿದೆ.

Noise: ನಾಯ್ಸ್‌ ಸಂಸ್ಥೆಯಿಂದ ಹೊಸ ವಾಚ್‌ ಅನಾವರಣ! ಫೀಚರ್ಸ್‌ ಮಾತ್ರ ಬೆಂಕಿ!

ಇದಲ್ಲದೆ ಸ್ಮಾರ್ಟ್‌ವಾಚ್‌ ವಿಸ್ತೃತ ಕಾಲ್‌ ಶ್ರೇಣಿಯನ್ನು ಬೆಂಬಲಿಸುತ್ತದೆ ಎಂದು ವೆರಿಯೆಬಲ್ಸ್‌ ಬ್ರ್ಯಾಂಡ್ ಹೇಳಿಕೊಂಡಿದೆ. ಇದು 100 ಕ್ಕೂ ಹೆಚ್ಚು ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇನ್ನು ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಜೊತೆಗೆ ತಿರುಗುವ ಕ್ರೌನ್, ಪುಶ್ ಬಟನ್ನಂತಹ ಫಿಸಿಕಲ್‌ ಬಟನ್‌ಗಳನ್ನು ಒಳಗೊಂಡಿದೆ. ಈ ವಾಚ್‌ ಆಂಡ್ರಾಯ್ಡ್, ಐಒಎಸ್ ಡಿವೈಸ್‌ಗಳನ್ನು ಬೆಂಬಲಿಸಲಿದೆ.

ಇನ್ನು ಸ್ಮಾರ್ಟ್‌ವಾಚ್‌ ನಾಯ್ಸ್ ಹೆಲ್ತ್ ಸೂಟ್, ಸ್ಲಿಪ್‌ ಟ್ರ್ಯಾಕಿಂಗ್, SpO2, 24 x 7 ಹೃದಯ ಬಡಿತ ಟ್ರ್ಯಾಕಿಂಗ್, ಒತ್ತಡ ಮಾಪನ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕರ್ ಅನ್ನು ಒಳಗೊಂಡಿದೆ.
ಇದರಲ್ಲಿ ಧ್ವನಿ ಸಹಾಯಕ ಬೆಂಬಲ, ಸ್ಟೇನ್‌ಲೆಸ್ ಸ್ಟೀಲ್ ನಿರ್ಮಾಣ, 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳಿಗೆ ಬೆಂಬಲ, ಸ್ವಯಂಚಾಲಿತ ತಾಲೀಮು ಪತ್ತೆ ಅನ್ನು ಹೊಂದಿದೆ. ಜೊತೆಗೆ ಕ್ಯಾಮರಾ ಮತ್ತು ಸಂಗೀತ ನಿಯಂತ್ರಣ, ಎಚ್ಚರಿಕೆ, ಕ್ಯಾಲ್ಕುಲೇಟರ್ ಮತ್ತು ತ್ವರಿತ ಪ್ರತ್ಯುತ್ತರವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ 10 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

Noise: ನಾಯ್ಸ್‌ ಸಂಸ್ಥೆಯಿಂದ ಹೊಸ ವಾಚ್‌ ಅನಾವರಣ! ಫೀಚರ್ಸ್‌ ಮಾತ್ರ ಬೆಂಕಿ!

ಭಾರತದಲ್ಲಿ ಬೆಲೆ ಎಷ್ಟಿದೆ?

ನಾಯ್ಸ್‌ ಕಲರ್‌ಫಿಟ್‌ ಕ್ರೋಮ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ 5,000ರೂಪಾಯಿಗಳ ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಇದನ್ನು ನಾಯ್ಸ್ ಇಂಡಿಯಾದ ಆನ್‌ಲೈನ್ ಸ್ಟೋರ್ ಮೂಲಕ ಜನವರಿ 19ರಿಂದ ಖರೀದಿಸಬಹುದಾಗಿದೆ. ಇದಲ್ಲದೆ 500 ರೂ.ಗಳ ಬೆಲೆಯ ಮುಂಗಡ-ಆರ್ಡರ್ ಪಾಸ್‌ಗೆ ನಾಯ್ಸ್‌ ಸಹ ನಿಬಂಧನೆಯನ್ನು ಹೊಂದಿದೆ. ಪಾಸ್‌ನೊಂದಿಗೆ ಸ್ಮಾರ್ಟ್‌ವಾಚ್ ಅನ್ನು ಖರೀದಿಸುವ ಗ್ರಾಹಕರು 4,000ರೂಪಾಯಿಗಳ ರಿಯಾಯಿತಿ ದರದಲ್ಲಿ ಪಡೆಯಬಹುದು.

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚಿಗೆ ನಾಯ್ಸ್‌ ವಾಯೇಜ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು ಇ-ಸಿಮ್‌ ಆಕ್ಟಿವ್‌ ಮಾಡಿರುವ ಸ್ಮಾರ್ಟ್‌ವಾಚ್‌ ಆಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದು ಏರ್‌ಟೆಲ್ ಮತ್ತು ಜಿಯೋ ಇಸಿಮ್‌ಗಳಿಗೆ ಹೊಂದಿಕೆಯಾಗಲಿದೆ. ಜೊತೆಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ಸಹ ನೀಡಲಿದೆ.

ನಾಯ್ಸ್ ವಾಯೇಜ್ ಸ್ಮಾರ್ಟ್‌ವಾಚ್‌ 1.4-ಇಂಚಿನ ರೆಟಿನಾ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 454 x 454 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆಇದೆ. ಇದು ಮೆಟಾಲಿಕ್ ಬಿಲ್ಡ್ ಮತ್ತು ಬಲಭಾಗದಲ್ಲಿ ಎರಡು ಬಟನ್‌ಗಳನ್ನು ಹೊಂದಿರುವ ವೃತ್ತಾಕಾರದ ಸ್ಮಾರ್ಟ್‌ವಾಚ್ ಆಗಿದೆ. ಇದರಲ್ಲಿ ಸ್ಟೇನ್ ಲೆಸ್ ಸ್ಟೀಲ್ ರೌಂಡ್ ಬೆಜೆಲ್ ಕೂಡ ನೀಡಲಾಗಿದೆ.

Best Mobiles in India

English summary
Noise ColorFit Chrome Smartwatch With 10-day battery life Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+