ಭಾರತಕ್ಕೆ ಬಂತು 'ಆರ್ಕ್ ವ್ಯೂ' ಡಿಸ್‌ಪ್ಲೇ ಒಳಗೊಂಡ ಸ್ಮಾರ್ಟ್‌ವಾಚ್! ಬೆಲೆ ಮಾತ್ರ ತುಂಬಾ ಕಡಿಮೆ?
ನಾಯ್ಸ್ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಇದಕ್ಕೆ ತಕ್ಕಂತೆ ನಾಯ್ಸ್ ಸಂಸ್ಥೆ ಕೂಡ ಹಲವು ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಭಾರತದಲ್ಲಿ ತನ್ನ ಮತ್ತೊಂದು ಹೊಸ ಕಲರ್ ಫಿಟ್ ಹೆಕ್ಸಾ ಎಂಬ ಹೊಸ ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ.
ಹೌದು, ನಾಯ್ಸ್ ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಆರ್ಕ್ ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಕರ್ವ್ಡ್ ಬಾಡಿ ಡಿಸೈನ್ ಎಲ್ಲರ ಗಮನಸೆಳೆಯುವಂತಿದ್ದು, ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ ಫೀಚರ್ಸ್ ಹೇಗಿದೆ?
ನಾಯ್ಸ್ (Noise ) ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 360 x 360 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 600 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರಲಿದ್ದು, ಸ್ಪಷ್ಟವಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಇದಲ್ಲದೆ ಡಿಸ್‌ಪ್ಲೇ ಆಲ್‌ವೇಸ್ ಆನ್ ಫೀಚರ್ಸ್ ಹೊಂದಿದ್ದು ಸಮಯ ಮತ್ತು ಅಧಿಸೂಚನೆಗಳನ್ನು ತ್ವರಿತವಾಗಿ ಪರಿಶೀಲಿಸಲು ಸುಲಭಗೊಳಿಸುತ್ತದೆ.
ಇನ್ನು ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ ಚೌಕಾಕಾರದ ಮುಂಭಾಗ ಮತ್ತು ಸರಾಗವಾಗಿ ಬಾಗಿದ ದೇಹದಿಂದ ಎದ್ದು ಕಾಣುಲಿದೆ. ಇದರ ಮತ್ತೊಂದು ವಿಶೇಷತೆ ಎಂದರೆ 'ಆರ್ಕ್ ವ್ಯೂ' ಡಿಸ್‌ಪ್ಲೇಯನ್ನು ಹೊಂದಿರುವುದು. ಇನ್ನು ಈ ಸ್ಮಾರ್ಟ್ ವಾಚ್ ಬಳಕೆದಾರರಿಗೆ 100ಕ್ಕೂ ಹೆಚ್ಚು ಆಯ್ಕೆಗಳೊಂದಿಗೆ ವಾಚ್ ಫೇಸ್‌ಗಳನ್ನು ಹೊಂದಿದೆ. ಇದು ನಿಮ್ಮ ವಾಚ್ ಪೇಸ್ ಲುಕ್ ಅನ್ನು ಬದಲಾಯಿಸುವುದಕ್ಕೆ ಅನುಮತಿಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಾವು ಇಷ್ಟಪಡುವ ಶೈಲಿಯ ವಾಚ್‌ಫೇಸ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ ಹೆಲ್ತ್‌ಗೆ ಸಂಬಂಧಿಸಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ, ರಕ್ತದ ಆಮ್ಲಜನಕದ ಮಟ್ಟಗಳು, ನಿದ್ರೆಯ ಗುಣಮಟ್ಟ ಮತ್ತು ಒತ್ತಡವನ್ನು ಪರೀಕ್ಷಿಸುವ ಸಾಧನಗಳನ್ನು ಹೊಂದಿದೆ. ವಿವಿಧ ವ್ಯಾಯಾಮಗಳು ಮತ್ತು ಕ್ರೀಡೆಗಳನ್ನು ಪತ್ತೆಹಚ್ಚಲು ವಿಭಿನ್ನ ವಿಧಾನಗಳನ್ನು ಹೊಂದಿದೆ. ಇದಲ್ಲದೆ NoiseFit ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ವಾಚ್ Android ಮತ್ತು iPhone ಎರಡೂ ಸಾಧನಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನು ನಾಯ್ಸ್‌ಫಿಟ್ ಅಪ್ಲಿಕೇಶನ್ ಅಧಿಸೂಚನೆಗಳು, ಹವಾಮಾನ, ಜ್ಞಾಪನೆಗಳು, ಕ್ಯಾಮರಾ ಮತ್ತು ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ಪಡೆದಿದೆ. ಅಲ್ಲದೆ ಕ್ಯಾಲ್ಕುಲೇಟರ್ ಅನ್ನು ತೋರಿಸುವಂತಹ ಹೆಚ್ಚಿನ ಫೀಚರ್ಸ್‌ಗಳನ್ನು ಸಹ ಸೇರಿಸಲಿದೆ. ಹಾಗೆಯೇ ಸ್ಮಾರ್ಟ್ ವಾಚ್ ನೀರು ಮತ್ತು ಧೂಳಿನ ವಿರುದ್ಧ ಹೋರಾಡಲಿದ್ದು, ಹೊರಾಂಗಣ ಬಳಕೆಗೆ ಉತ್ತಮವಾಗಿದೆ.

ಇದಲ್ಲದೆ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಅನ್ನು ಸಹ ಬೆಂಬಲಿಸಲಿದ್ದು, ಸಂಪರ್ಕಕ್ಕಾಗಿ ನಾಯ್ಸ್‌ನ ಸೆಲ್ಪ್ ಟೆಕ್ನಾಲಜಿಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ
ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್ ಭಾರತದಲ್ಲಿ ಜನವರಿ 24 ರಿಂದ ಸೇಲ್ ಆಗಲಿದೆ. ಈ ಸ್ಮಾರ್ಟ್‌ವಾಚ್ ನಾಯ್ಸ್ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 2,499ರೂ ಆರಂಭಿಕ ಬೆಲೆಯಲ್ಲಿ ದೊರೆಯಲಿದೆ. ಇದನ್ನು ನಾಯ್ಸ್ ವೆಬ್‌ಸೈಟ್ ಮೂಲಕ ಮೊದಲ 300 ಖರೀದಿದಾರರು ಹೆಚ್ಚುವರಿಯಾಗಿ 300ರೂ ರಿಯಾಯಿತಿ ಪಡೆಯಲಿದ್ದಾರೆ. ಈ ವಾಚ್ ಟೀಲ್ ಬ್ಲೂ, ಕ್ಲಾಸಿಕ್ ಬ್ರೌನ್ (ಲೆದರ್), ಕ್ಲಾಸಿಕ್ ಬ್ಲ್ಯಾಕ್ (ಲೆದರ್), ಮತ್ತು ಜೆಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ.


Click it and Unblock the Notifications








