ನಾಯ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?
ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ನಾಯ್ಸ್ ಸಂಸ್ಥೆಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಯುವಜನರ ಆಶಯಗಳಿಗೆ ಅನುಗುಣವಾಗಿ ನಾಯ್ಸ್ ಕಂಪೆನಿ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ನಾಯ್ಸ್ ಕಂಪೆನಿ ಹೊಸ ನಾಯ್ಸ್ ಕಲರ್‌ಫಿಟ್ ಐಕಾನ್ 2 ಎಲೈಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಹೌದು, ನಾಯ್ಸ್ ಕಲರ್‌ಫಿಟ್ ಐಕಾನ್ 2 ಎಲೈಟ್ ಆವೃತ್ತಿಯ ಸ್ಮಾರ್ಟ್‌ವಾಚ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್, ನೀರು ಮತ್ತು ದೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಇದಲ್ಲದೆ ಈ ಡಿವೈಸ್ ಅನ್ನು ಎರಡು ಫಿನಿಶ್‌ಗಳಲ್ಲಿ ನೀಡಲಾಗುತ್ತಿದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಕಲರ್‌ಫಿಟ್ ಐಕಾನ್ 2 ಎಲೈಟ್ ಆವೃತ್ತಿ ಸ್ಮಾರ್ಟ್‌ವಾಚ್
ನಾಯ್ಸ್ ಕಲರ್‌ಫಿಟ್ ಐಕಾನ್ 2 ಎಲೈಟ್ ಆವೃತ್ತಿ ಸ್ಮಾರ್ಟ್‌ವಾಚ್ 1.8 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 368x448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಒಳಗೊಂಡಿದೆ. ಇದು ಆಲ್‌ವೇಸ್ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಲೋಹದ ಚಾಸಿಸ್ ಮತ್ತು ಪಟ್ಟಿಗಳೊಂದಿಗೆ ಬರುತ್ತದೆ.
ನಾಯ್ಸ್ ಕಲರ್‌ಫಿಟ್ ಐಕಾನ್ 2 ಎಲೈಟ್ ಆವೃತ್ತಿ ಸ್ಮಾರ್ಟ್‌ವಾಚ್ ತಿರುಗುವ ಕಿರೀಟದ ರೂಪದಲ್ಲಿ ಸಿಂಗಲ್ ಫಿಸಿಕಲ್ ಬಟನ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಧೂಳು ಅಥವಾ ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಹಗಲು ಮತ್ತು ರಾತ್ರಿಯ ಸಮಯದ ಸ್ಪಷ್ಟತೆ ಎರಡರಲ್ಲೂ ಸಂಪೂರ್ಣವಾಗಿ ಓದುವಂತೆ ಮಾಡುತ್ತದೆ. ಹೆಚ್ಚುವರಿಯಾಗಿ ಈ ಸ್ಮಾರ್ಟ್‌ವಾಚ್ ಬಳಕೆದಾರರಿಗೆ 150ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವಾಚ್‌ಫೇಸ್‌ಗಳನ್ನು ಕಸ್ಟ್‌ಮೈಸ್ ಮಾಡಲಿದೆ.
ಇನ್ನು ಈ ಸ್ಮಾರ್ಟ್‌ವಾಚ್ 100+ ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹಾರ್ಟ್ ಬೀಟ್ ಸೆನ್ಸಾರ್, SpO2, ನಿದ್ರೆ, ಒತ್ತಡ, ಉಸಿರಾಟದ ಅಭ್ಯಾಸ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಡೈಲಿ ರಿಮೈಂಡರ್ ಮತ್ತು ವೆದರ್ ಅಪ್ಡೇಟ್‌ಗಾಗಿ ಉತ್ಪಾದಕತೆಯ ಸೂಟ್ ಅನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ವಾಚ್ AI ವಾಯ್ಸ್ ಅಸಿಸ್ಟೆಂಟ್ ಬೆಂಬಲದೊಂದಿಗೆ ಬರಲಿದೆ. ಇದು ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿಗೆ ಕೂಡ ಬೆಂಬಲವನ್ನು ನೀಡಲಿದೆ.
ನಾಯ್ಸ್ ಸಂಸ್ಥೆಯ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಹೊಂದಿದೆ. ಇದಕ್ಕಾಗಿ ಇನ್‌ಬಿಲ್ಟ್ ಮೈಕ್ ಮತ್ತು ಸ್ಪೀಕರ್‌ಗಳೊಂದಿಗೆ ಬರಲಿದೆ. ಇದು ತ್ವರಿತ ಡಯಲ್ ಪ್ಯಾಡ್, 10 ಸಂಪರ್ಕಗಳ ಸಂಗ್ರಹಣೆ ಮತ್ತು ಕಾಲ್ ಹಿಸ್ಟರಿಯನ್ನು ಸಹ ಹೊಂದಿದೆ. ಇತರ ಸ್ಮಾರ್ಟ್ ಫೀಚರ್ಸ್‌ಗಳಲ್ಲಿ ಕ್ಯಾಮೆರಾ ಕಂಟ್ರೋಲ್, ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್, ಸ್ಮಾರ್ಟ್ ನೋಟಿಫಿಕೇಶನ್ ಮತ್ತು ಇನ್‌ಬಿಲ್ಟ್ ಗೇಮ್ಸ್‌ಗಳನ್ನು ಒಳಗೊಂಡಿವೆ. ಇದಲ್ಲದೆ ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ನಾಯ್ಸ್ ಕಲರ್‌ಫಿಟ್ ಐಕಾನ್ 2 ಎಲೈಟ್ ಆವೃತ್ತಿಯ ಸ್ಮಾರ್ಟ್‌ವಾಚ್ ಭಾರತದಲ್ಲಿ 1,999 ರೂ ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಎಲೈಟ್ ಬ್ಲಾಕ್ ಮತ್ತು ಎಲೈಟ್ ಸಿಲ್ವರ್ ರೂಪಾಂತರದ ಆಯ್ಕೆಗಳಲ್ಲಿ ನೀಡಲಿದೆ. ಈ ಎರಡು ಆಯ್ಕೆಗಳನ್ನು ಸಹ ಕಂಪೆನಿಯ ಅಧಿಕೃತ GoNoise ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.


Click it and Unblock the Notifications








