ಭಾರತದಲ್ಲಿ ನಾಯ್ಸ್ ಕಲರ್‌ಫಿಟ್ ಲೂಪ್ ಸ್ಮಾರ್ಟ್‌ವಾಚ್ ಬಿಡುಗಡೆ! ಬೆಲೆ ಎಷ್ಟು?
ಸ್ಮಾರ್ಟ್‌ವಾಚ್ ವಿಭಾಗದಲ್ಲಿ ನಾಯ್ಸ್ ಕಂಪೆನಿಯ ಡಿವೈಸ್‌ಗಳು ಸಖತ್ ಕ್ರೇಜ್ ಸೃಷ್ಟಿಸಿವೆ. ತನ್ನ ವಿಭಿನ್ನ ಲುಕ್ ಹಾಗೂ ಡಿಸೈನ್ ಮೂಲಕ ಗ್ರಾಹಕರ ಗಮನಸೆಳೆದಿದೆ. ಇದಕ್ಕೆ ತಕ್ಕಂತೆ ನಾಯ್ಸ್ ಕಂಪೆನಿ ಕೂಡ ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ನಾಯ್ಸ್ ಕಲರ್‌ಫಿಟ್ ಲೂಪ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ ಬಳಕೆದಾರರಿಗಾಗಿ ಹಲವು ಅಗತ್ಯ ಆರೋಗ್ಯ ಸಂಬಂಧಿತ ಮತ್ತು ಅನುಕೂಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಹೌದು, ನಾಯ್ಸ್ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್ ಕಲರ್‌ಫಿಟ್ ಲೂಪ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ನ ಡಿಸ್‌ಪ್ಲೇ 550 ನಿಟ್ಸ್ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇದು 200 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಿದ ವಾಚ್ ಫೇಸ್‌ಗಳನ್ನು ಹೊಂದಿದ್ದು, 390mAh ಬ್ಯಾಟರಿಯನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ IP68-ರೇಟೆಡ್ ಧೂಳು ಮತ್ತು ನೀರು ನಿರೋಧಕವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಕಲರ್‌ಫಿಟ್ ಲೂಪ್ ವಾಚ್ 1.85 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 284 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಮತ್ತು 550 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ IP68-ರೇಟೆಡ್ ಡಸ್ಟ್ ಮತ್ತು ವಾಟರ್ ಪ್ರೂಫ್ ವ್ಯವಸ್ಥೆಯನ್ನು ಹೊಂದಿದೆ. ಇದು 200ಕ್ಕೂ ಹೆಚ್ಚು ಕಸ್ಟಮೈಸ್ ಮಾಡಿದ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಸ್ಕೇರ್ ಡಯಲ್ ಅನ್ನು ಹೊಂದಿದೆ.

ನಾಯ್ಸ್ ಕಲರ್‌ಫಿಟ್ ಲೂಪ್ ಹಲವು ಅನುಕೂಲಕರ ಹೆಲ್ತ್ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಹಾರ್ಟ್‌ಬೀಟ್ ಸೆನ್ಸಾರ್, SpO2 ಮಾನಿಟರ್ ಮತ್ತು ಋತುಚಕ್ರದ ಟ್ರ್ಯಾಕರ್ ಅನ್ನು ಹೊಂದಿದೆ. ಇದಲ್ಲದೆ ಸ್ಲಿಪ್ ಮಾನಿಟರ್, ಒತ್ತಡದ ಮಟ್ಟಗಳು ಮತ್ತು ಉಸಿರಾಟದ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡುವ ಫೀಚರ್ಸ್‌ಗಳನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ 130 ಕ್ರೀಡಾ ವಿಧಾನಗಳಿಗೆ ಬೆಂಬಲವನ್ನು ನೀಡಲಿದೆ.

ಇನ್ನು ನಾಯ್ಸ್ ಕಲರ್‌ಫಿಟ್ ಲೂಪ್ ಸ್ಮಾರ್ಟ್‌ವಾಚ್ ಇನ್‌ಬಿಲ್ಟ್ ಮೈಕ್ ಮತ್ತು ಸ್ಪೀಕರ್ ಮತ್ತು ಬ್ಲೂಟೂತ್ ಕಾಲ್‌ಗೋಸ್ಕರ್ ಸಿಂಗಲ್ ಚಿಪ್ ಅನ್ನು ಹೊಂದಿದೆ. ಇದು ಸ್ಥಿರ ಸಂಪರ್ಕ, ಡಯಲ್ ಪ್ಯಾಡ್, ಇತ್ತೀಚಿನ ಲಾಗ್‌ಗಳು ಮತ್ತು 10 ಕನೆಕ್ಟಿವಿಟಿಗಳನ್ನು ನೀಡಲಿದೆ. ಈ ಸ್ಮಾರ್ಟ್ ವಾಚ್ 390mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 7 ದಿನಗಳ ಬಾಳಿಕೆಯನ್ನು ನೀಡಲಿದೆ. ಇದರೊಂದಿಗೆ ನೋಟಿಫಿಕೇಶನ್ ಡಿಸ್‌ಪ್ಲೇ, DND ಮೋಡ್, ವೆದರ್ ಅಪ್ಡೇಟ್ ಸೇರಿದಂತೆ ಹಲವು ಅನುಕೂಲಕರ ಫೀಚರ್ಸ್ ಒಳಗೊಂಡಿದೆ.

ಈ ಸ್ಮಾರ್ಟ್‌ವಾಚ್ ಪ್ರಸ್ತುತ ಭಾರತದಲ್ಲಿ 2,499 ರೂ. ಬೆಲೆಯನ್ನು ಪಡೆದುಕೊಂಡಿದೆ. ಇದು ಜೆಟ್ ಬ್ಲಾಕ್, ಮಿಡ್ನೈಟ್ ಬ್ಲೂ, ಆಲಿವ್ ಗ್ರೀನ್, ಮಿಸ್ಟ್ ಗ್ರೇ, ಡೀಪ್ ವೈನ್ ಮತ್ತು ರೋಸ್ ಪಿಂಕ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ ಸ್ಮಾರ್ಟ್ ವಾಚ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.

ಇದಲ್ಲದೆ ನಾಯ್ಸ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ನಾಯ್ಸ್‌ಫಿಟ್ ಕೋರ್ 2 ಸ್ಮಾರ್ಟ್ ವಾಚ್ ಪರಿಚಯಿಸಿದೆ. ಇದು SpO2 ಮಾನಿಟರ್, ನಿರಂತರ ಹೃದಯ ಬಡಿತ ಮಾನಿಟರಿಂಗ್ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ 1.28-ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, 100 ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳನ್ನು ನೀಡಲಿದೆ.


Click it and Unblock the Notifications








