ನಾಯ್ಸ್ ಕಂಪೆನಿಯಿಂದ ಆಪಲ್‌ವಾಚ್ ಮಾದರಿಯ ಹೊಸ ವಾಚ್ ಬಿಡುಗಡೆ!
ಸ್ವದೇಶಿ ಸ್ಮಾರ್ಟ್‌ವಾಚ್ ಬ್ರ್ಯಾಂಡ್ ನಾಯ್ಸ್ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಭಾರತದ ಮಾರುಕಟ್ಟೆಯಲ್ಲಿ ನಾಯ್ಸ್ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಯುವಜನರ ನೆಚ್ಚಿನ ಆಯ್ಕೆಯ ಬ್ರ್ಯಾಂಡ್ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ನಾಯ್ಸ್ ಕಲರ್‌ಫಿಟ್ ಪ್ರೊ 4 ಜಿಪಿಎಸ್ ವಾಚ್ ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ವಾಚ್ ಆಪಲ್ ವಾಚ್ ಮಾದರಿಯ ವಿನ್ಯಾಸವನ್ನೇ ಹೊಂದಿದ್ದು, ಯುವಜನರನ್ನು ಸೆಳೆಯುತ್ತಿದೆ.

ಹೌದು, ನಾಯ್ಸ್ ಕಂಪೆನಿ ಆಪಲ್ ವಾಚ್ ಮಾದರಿಯ ನಾಯ್ಸ್ ಕಲರ್‌ಫಿಟ್ ಪ್ರೊ 4 GPS ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಮಕರ ಸಂಕ್ರಾಂತಿ ಸಂಭ್ರಮದಲ್ಲಿ ಕೊಡುಗೆ ನೀಡೋರಿಗೆ ಉತ್ತಮ ಆಯ್ಕೆಯಾಗಿದೆ. ಇದು ಟ್ರೂ ಸಿಂಕ್ ಟೆಕ್ನಾಲಜಿಯನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಅವಕಾಶ ನೀಡಲಿದೆ. ಇನ್ನಳಿದಂತೆ ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ನಾಯ್ಸ್ ಕಲರ್‌ಫಿಟ್ ಪ್ರೊ 4 ಜಿಪಿಎಸ್ ಸ್ಮಾರ್ಟ್‌ವಾಚ್ ಆಪಲ್ ವಾಚ್ ಮಾದರಿಯನ್ನೇ ಹೊಂದಿದೆ. ಈ ಸ್ಮಾರ್ಟ್‌ವಾಚ್ ಕಲರ್‌ಫಿಟ್ ಪ್ರೊ 4 ಆಲ್ಫಾ ವಿನ್ಯಾಸವನ್ನು ಪಡೆದಿದೆ. ಇದು 1.85-ಇಂಚಿನ TFT LCD ಸ್ಕ್ರೀನ್ ಹೊಂದಿದೆ. ಈ ಡಿಸ್‌ಪ್ಲೇ 240 x 284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ 100 ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಇದು ಯುವಜನತೆಗೆ ತಕ್ಕಂತ ವಿನ್ಯಾಸವನ್ನು ಪಡೆದಿರೋದು ಹೈಲೈಟ್ ಆಗಿದೆ.

ಇನ್ನು ನಾಯ್ಸ್ ಕಲರ್‌ಫಿಟ್ ಪ್ರೊ 4 ಜಿಪಿಎಸ್ ಸ್ಮಾರ್ಟ್‌ವಾಚ್ ನಾಯ್ಸ್ ಟ್ರೂ ಸಿಂಕ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಜೋಡಣೆ ಮತ್ತು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಎಫೆಕ್ಟಿವ್ ಆಗಿ ಬಳಸುವುದಕ್ಕೆ ಅವಕಾಶ ನೀಡಲಿದ್ದು, ಪವರ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಈ ಸ್ಮಾರ್ಟ್‌ವಾಚ್ 24×7 ಹಾಟ್‌ಬೀಟ್ ಮಾನಿಟರಿಂಗ್, SpO2 ಟ್ರ್ಯಾಕರ್, ಸ್ಲಿಪ್ ಟ್ರ್ಯಾಕಿಂಗ್ ಮತ್ತು ಒತ್ತಡ ನಿರ್ವಹಣೆ ಮಾಡುವ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಸಹ ಒಳಗೊಂಡಿದ.
ನಾಯ್ಸ್ ಕಲರ್‌ಫಿಟ್ ಪ್ರೊ 4 ಜಿಪಿಎಸ್ ಸ್ಮಾರ್ಟ್‌ವಾಚ್ ಕಸ್ಟಮೈಸ್ಡ್ ಆಗಿರುವ 150 ಕಸ್ಟಮ್ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಇನ್‌ಬಿಲ್ಟ್ ಕ್ಯಾಲ್ಕುಲೇಟರ್, ನೋಟಿಫಿಕೇಶನ್ ಡಿಸ್‌ಪ್ಲೇ, ವೆದರ್ ಮತ್ತು ಸ್ಟಾಕ್ ಅಪ್ಡೇಟ್ಸ್, ಮ್ಯೂಸಿಕ್ ಕಂಟ್ರೋಲ್, ರಿಮೈಂಡರ್, ಕ್ಯಾಮೆರಾ ಕಂಟ್ರೋಲ್, ಸ್ಮಾರ್ಟ್ ಡಿಎನ್‌ಡಿ, ಇನ್ಸಟಂಟ್ ರಿಪ್ಲೇಯನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ 100 ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ನೀರು ಮತ್ತು ಧೂಳಿನಿಂದ ರಕ್ಷಿಸುವ ಸಲುವಾಗಿ IP68 ರೇಟಿಂಗ್ ಅನ್ನು ಪಡೆದುಕೊಂಡಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 4 ಜಿಪಿಎಸ್ ಸ್ಮಾರ್ಟ್‌ವಾಚ್ 250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 7 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಾಗಿದೆ. ಪ್ರಸ್ತುತ ಈ ಸ್ಮಾರ್ಟ್‌ವಾಚ್ ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಇಂದಿನಿಂದ ಮಾರುಕಟ್ಟೆಯಲ್ಲಿ ಸೇಲ್ ಆಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್ ಚಾರ್ಕೋಲ್ ಬ್ಲಾಕ್, ಡೀಪ್ ವೈನ್, ಮಿಂಟ್ ಗ್ರೀನ್, ಸಿಲ್ವರ್ ಗ್ರೇ, ಸನ್‌ಸೆಟ್ ಆರೆಂಜ್, ಟೀಲ್ ಬ್ಲೂ, ರೋಸ್ ಪಿಂಕ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಸದ್ಯ ಈ ಸ್ಮಾರ್ಟ್ ವಾಚ್ ಅನ್ನು gonoise.com ಮತ್ತು ಅಮೆಜಾನ್.ಇನ್ ಮೂಲಕ ಮಾರಾಟವಾಗಲಿದೆ.


Click it and Unblock the Notifications








