Home
ಸುದ್ದಿಜಾಲ

ನಾಯ್ಸ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಬೆಲೆ ಕೇವಲ 4,499 ರೂ. ಮಾತ್ರ!

ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ನಾಯ್ಸ್‌ ಕಂಪೆನಿ ಮುಂಚೂಣಿಯಲ್ಲಿದೆ. ಸ್ಟೈಲಿಶ್‌ ಲುಕ್‌ ಹಾಗೂ ಟ್ರೆಂಡಿ ಡಿಸೈನ್‌ ಮೂಲಕ ನಾಯ್ಸ್‌ ಸ್ಮಾರ್ಟ್‌ವಾಚ್‌ಗಳು ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟುಹಾಕಿವೆ. ಸದ್ಯ ಇದೀಗ ನಾಯ್ಸ್‌ ಕಂಪೆನಿ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 3 ಲಾಂಚ್‌ ಮಾಡಿದ್ದು, ಹೊಸ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ.

ಹೌದು, ನಾಯ್ಸ್‌ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು ಆಪಲ್‌ ವಾಚ್‌ ಮಾದರಿಯ ವಿನ್ಯಾಸವನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಇದರಲ್ಲಿ ನೀವು 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಕಾಣಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾಯ್ಸ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಬೆಲೆ ಕೇವಲ 4,499 ರೂ.ಮಾತ್ರ

ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಆಪಲ್ ವಾಚ್‌ ಮಾದರಿಯ ವಿನ್ಯಾಸವನ್ನು ಹೊಂದಿದೆ. ಇದು 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಸಿಂಗಲ್‌ ಟ್ಯಾಪ್ ಮೂಲಕ ಡಿವೈಸ್‌ ಅನ್ನು ಆಲರ್ಟ್‌ ಮಾಡಬಹುದಾಗಿದೆ. ಜೊತೆಗೆ ಸ್ಕ್ರೀನ್‌ ಮೇಲೆ ನಿಮ್ಮ ಕೈಗಳನ್ನು ಇರಿಸುವ ಮೂಲಕ ಡಿಸ್‌ಪ್ಲೇಯನ್ನು ಆಫ್ ಮಾಡಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಮೇಲಿನ ಬಲಭಾಗದಲ್ಲಿ ಸಂಪೂರ್ಣ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಬಟನ್ ಸಹ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಹೆಲ್ತ್‌ ಫೀಚರ್ಸ್‌ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಹಾರ್ಟ್‌ಬೀಟ್‌ ಮಾನಿಟರ್‌, SpO2 ಸೆನ್ಸಾರ್‌ ಮತ್ತಯ ಮಹಿಳೆಯರ ಆರೋಗ್ಯದ ವಿಚಾರವಾಗಿ ಅನೇಕ ಹೆಲ್ತ್‌ ಟ್ರ್ಯಾಕರ್‌ಗಳನ್ನು ಹೊಂದಿದೆ. ಹಾಗೆಯೇ ಸ್ಲಿಪ್‌ ಮಾನಿಟರ್‌ ಮತ್ತು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದಲ್ಲದೆ ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಸ್ಪೀಕರ್ ಅನ್ನು ಹೊಂದಿದೆ. ಇದಕ್ಕಾಗಿ ಮೈಕ್ರೊಫೋನ್‌ ಅನ್ನು ಸಹ ಪಡೆದಿದೆ. ಇನ್ನು ಸ್ಥಿರ ಸಂಪರ್ಕ, ದೀರ್ಘ ಶ್ರೇಣಿ ಮತ್ತು ಬ್ಲೂಟೂತ್ ಕರೆಗಾಗಿ ಸುಲಭ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ ವೆದರ್‌ ರಿಪೊರ್ಟ್‌, ಸ್ಟಾಕ್ ಅಪ್ಡೇಟ್ಸ್‌, ಕ್ಯಾಲ್ಕುಲೇಟರ್, ಮ್ಯೂಸಿಕ್‌ ಕಂಟ್ರೋಲ್‌, ರಿಮೈಂಡರ್‌, ನೋಟಿಫಿಕೇಶನ್‌ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಏಳು ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ನೀಡಲಿದೆ.

ನಾಯ್ಸ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಬೆಲೆ ಕೇವಲ 4,499 ರೂ.ಮಾತ್ರ

ಭಾರತದಲ್ಲಿ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಬೆಲೆ 4,499 ರೂ. ಆಗಿದೆ. ಇದು ಜೆಟ್ ಬ್ಲ್ಯಾಕ್, ಟೀಲ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್, ಕ್ಲಾಸಿಕ್ ಟ್ಯಾನ್ ಬ್ರೌನ್, ಕ್ಲಾಸಿಕ್ ಡಾರ್ಕ್ ಬ್ರೌನ್, ಬ್ಲ್ಯಾಕ್ ಎಲೈಟ್ ಎಡಿಷನ್, ಸಿಲ್ವರ್ ಎಲೈಟ್ ಎಡಿಷನ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ನೀವು ನಾಯ್ಸ್‌ ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ನಿಂದ ಮೇ 2 ರಿಂದ ಖರೀದಿಸಬಹುದಾಗಿದೆ.

ಇದಲ್ಲದೆ ನಾಯ್ಸ್‌ ಕಂಪೆನಿ ಹೊಸದಾಗಿ ನಾಯ್ಸ್‌ಫಿಟ್‌ ಕ್ರ್ಯೂ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ವಾಚ್‌ ಮೂಲಕವೇ ನಿಮ್ಮ ಸ್ಮಾರ್ಟ್‌ಫೋನ್‌ ಕರೆಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದರೊಂದಿಗೆ ಸ್ಟೆಪ್‌ ಟ್ರ್ಯಾಕಿಂಗ್‌, ಹಾರ್ಟ್‌ಬೀಟ್‌ ಸೆನ್ಸಾರ್‌ ಮತ್ತು SpO2 ಮಾನಿಟರಿಂಗ್‌ ಸೆನ್ಸಾರ್‌ ಅನ್ನು ಬೆಂಬಲಿಸಲಿದೆ. ಇನ್ನು ನಾಯ್ಸ್‌ಫಿಟ್‌ ಕ್ರ್ಯೂ ಸ್ಮಾರ್ಟ್‌ವಾಚ್‌ 1.38 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ರೇಟಿಂಗ್‌ ಅನ್ನು ಒಳಗೊಂಡಿದೆ.

Best Mobiles in India

English summary
Noise Colorfit Ultra 3 Launched In India: specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+