ಅಮೆಜಾನ್‌ನಲ್ಲಿ ನಾಯ್ಸ್ ಕಂಪನಿಯ ಈ ಸ್ಮಾರ್ಟ್‌ವಾಚ್‌ಗೆ ಬಿಗ್ ಡಿಸ್ಕೌಂಟ್!
ನಾಯ್ಸ್ ಸಂಸ್ಥೆಯು ಇತ್ತೀಚಿಗೆ ತನ್ನ ಸ್ಮಾರ್ಟ್‌ವಾಚ್ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿರುವ 'ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3' (Noise ColorFit Ultra 3) ಸ್ಮಾರ್ಟ್‌ವಾಚ್ ಆಕರ್ಷಕ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ. ಇದೀಗ ಈ ಸ್ಮಾರ್ಟ್‌ವಾಚ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ.
ಹೌದು, ನಾಯ್ಸ್ ಕಂಪೆನಿ ಹೊಸ 'ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3' ವಾಚ್ ಅಮೆಜಾನ್ ವೆಬ್‌ಸೈಟ್‌ನಲ್ಲಿ 44% ನಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಡಿಸ್ಕೌಂಟ್ ನಿಂದಾಗಿ 7,999ರೂ. ಪ್ರೈಸ್ ಟ್ಯಾಗ್ ಹೊಂದಿರುವ ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್ 4,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಹಲವು ಭಿನ್ನ ಕಲರ್ ಆಯ್ಕೆ ಗಳಲ್ಲಿ ಲಭ್ಯ.

ಅಂದಹಾಗೆ ಈ ಸ್ಮಾರ್ಟ್‌ವಾಚ್ ವೆದರ್ ರಿಪೊರ್ಟ್, ಸ್ಟಾಕ್ ಅಪ್ಡೇಟ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಕಂಟ್ರೋಲ್, ರಿಮೈಂಡರ್, ನೋಟಿಫಿಕೇಶನ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ವಾಚ್ ಇತರೆ ಯಾವೆಲ್ಲಾ ಫೀಚರ್ಸ್ ಅನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ : ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್ ಆಪಲ್ ವಾಚ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ಇದು 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಆಲ್‌ವೇಸ್ ಆನ್ ಡಿಸ್‌ಪ್ಲೇ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಸಿಂಗಲ್ ಟ್ಯಾಪ್ ಮೂಲಕ ಡಿವೈಸ್ ಅನ್ನು ಆಲರ್ಟ್ ಮಾಡಬಹುದಾಗಿದೆ. ಜೊತೆಗೆ ಸ್ಕ್ರೀನ್ ಮೇಲೆ ನಿಮ್ಮ ಕೈಗಳನ್ನು ಇರಿಸುವ ಮೂಲಕ ಡಿಸ್‌ಪ್ಲೇಯನ್ನು ಆಫ್ ಮಾಡಬಹುದಾಗಿದೆ.

ಪ್ರಮುಖ ಫೀಚರ್ಸ್ : ಈ ಸ್ಮಾರ್ಟ್‌ವಾಚ್ ಮೇಲಿನ ಬಲಭಾಗದಲ್ಲಿ ಸಂಪೂರ್ಣ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಬಟನ್ ಸಹ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್ ಬಳಕೆದಾರರಿಗೆ ಹೆಲ್ತ್ ಫೀಚರ್ಸ್ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಹಾರ್ಟ್‌ಬೀಟ್ ಮಾನಿಟರ್, SpO2 ಸೆನ್ಸಾರ್ ಮತ್ತಯ ಮಹಿಳೆಯರ ಆರೋಗ್ಯದ ವಿಚಾರವಾಗಿ ಅನೇಕ ಹೆಲ್ತ್ ಟ್ರ್ಯಾಕರ್ ಗಳನ್ನು ಹೊಂದಿದೆ. ಹಾಗೆಯೇ ಸ್ಲಿಪ್ ಮಾನಿಟರ್ ಮತ್ತು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಇತರೆ ಸೌಲಭ್ಯಗಳು : ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್ ಇನ್‌ಬಿಲ್ಟ್ ಸ್ಪೀಕರ್ ಅನ್ನು ಹೊಂದಿದೆ. ಇದಕ್ಕಾಗಿ ಮೈಕ್ರೊಫೋನ್ ಅನ್ನು ಸಹ ಪಡೆದಿದೆ. ಇನ್ನು ಸ್ಥಿರ ಸಂಪರ್ಕ, ದೀರ್ಘ ಶ್ರೇಣಿ ಮತ್ತು ಬ್ಲೂಟೂತ್ ಕರೆಗಾಗಿ ಸುಲಭ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಅಲ್ಲದೆ ಸ್ಮಾರ್ಟ್‌ವಾಚ್ ವೆದರ್ ರಿಪೊರ್ಟ್, ಸ್ಟಾಕ್ ಅಪ್ಡೇಟ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಕಂಟ್ರೋಲ್, ರಿಮೈಂಡರ್, ನೋಟಿಫಿಕೇಶನ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ ಏಳು ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಸಹ ನೀಡಲಿದೆ.
ಬೆಲೆ, ಕಲರ್ ಆಯ್ಕೆ ಮತ್ತು ಲಭ್ಯತೆ ಮಾಹಿತಿ : ಅಮೆಜಾನ್ ತಾಣದಲ್ಲಿ ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್ ಬೆಲೆ 4,499 ರೂ. ಆಗಿದೆ. ಇದು ಜೆಟ್ ಬ್ಲ್ಯಾಕ್, ಟೀಲ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್, ಕ್ಲಾಸಿಕ್ ಟ್ಯಾನ್ ಬ್ರೌನ್, ಕ್ಲಾಸಿಕ್ ಡಾರ್ಕ್ ಬ್ರೌನ್, ಬ್ಲ್ಯಾಕ್ ಎಲೈಟ್ ಎಡಿಷನ್, ಸಿಲ್ವರ್ ಎಲೈಟ್ ಎಡಿಷನ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಗ್ರಾಹಕರು ಇದನ್ನು ನಾಯ್ಸ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅಥವಾ ಅಮೆಜಾನ್‌ನಿಂದ ಖರೀದಿಸಬಹುದಾಗಿದೆ.


Click it and Unblock the Notifications








