Noise: ಭಾರತಕ್ಕೆ ಎಂಟ್ರಿ ಕೊಟ್ಟ ಹೊಸ ಸ್ಮಾರ್ಟ್‌ವಾಚ್:..ಬೆಲೆ ಕೇವಲ 2,999ರೂ ಮಾತ್ರ!
ಸ್ಮಾರ್ಟ್‌ವಾಚ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ನಾಯ್ಸ್ ಮತ್ತೊಂದು ಹೊಸ ವಾಚ್ ಬಿಡುಗಡೆ ಮಾಡಿದೆ. ಇದನ್ನು ನಾಯ್ಸ್‌ಫಿಟ್ ಗ್ರೇಸ್ ಎಂದು ಹೆಸರಿಸಲಾಗಿದ್ದು, ವಿಶಿಷ್ಟವಾದ ಕಟ್ ಡಯಲ್ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಮೆಟಲ್ ಸಿಲ್ವರ್, ರೋಸ್ ಗೋಲ್ಡ್ ಮತ್ತು ಜೆಟ್ ಬ್ಲ್ಯಾಕ್‌ನಲ್ಲಿ ಲಭ್ಯವಿರುವ ಲಿಂಕ್ ಸ್ಟ್ರಾಪ್‌ನೊಂದಿಗೆ ಬರಲಿದೆ.
ಹೌದು, NoiseFit ಗ್ರೇಸ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್ ವಾಚ್ AI ವಾಯ್ಸ್ ಅಸಿಸ್ಟೆಂಟ್ ಮತ್ತು ಬ್ಲೂಟೂತ್ ಕಾಲಿಂಗ್ ಜೊತೆಗೆ ಇನ್‌ಬಿಲ್ಟ್ ಕ್ಯಾಲೆಂಡರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ ಡಯಲ್ ಪ್ಯಾಡ್ ಮತ್ತು ಇತ್ತೀಚಿನ ಕರೆ ಲಾಗ್‌ಗಳಿಗೆ ತ್ವರಿತ ಪ್ರವೇಶವನ್ನು ನೀಡುತ್ತದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

NoiseFit ಗ್ರೇಸ್ ವಾಚ್ ಪೀಚರ್ಸ್ ಹೇಗಿದೆ?
NoiseFit ಗ್ರೇಸ್ ಸ್ಮಾರ್ಟ್‌ವಾಚ್ 1.1 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು 360 x 360 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇ 600 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ ವಾಚ್ AI ವಾಯ್ಸ್ ಅಸಿಸ್ಟೆಂಟ್ ಮತ್ತು ಬ್ಲೂಟೂತ್ ಕಾಲಿಂಗ್ ಜೊತೆಗೆ ಇನ್‌ಬಿಲ್ಟ್ ಕ್ಯಾಲೆಂಡರ್ ಅನ್ನು ಒಳಗೊಂಡಿದೆ.
NoiseFit ಗ್ರೇಸ್ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಸಹ ಹೊಂದಿದೆ. ಇದರಿಂದ ಮೊಬೈಲ್ ಕರೆಗಳನ್ನು ವಾಚ್ ಮೂಲಕವೇ ಕಂಟ್ರೋಲ್ ಮಡಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಡಯಲ್ ಪ್ಯಾಡ್ ಮತ್ತು ಇತ್ತೀಚಿನ ಕರೆ ಲಾಗ್‌ಗಳಿಗೆ ತ್ವರಿತ ಪ್ರವೇಶವನ್ನು ನೀಡುತ್ತದೆ. ಇನ್ನು ಕರೆಗಳನ್ನು ತ್ವರಿತವಾಗಿ ಮಾಡುವುದಕ್ಕಾಗಿ ನಿಮಗೆ ಬಹುಮುಖ್ಯ ಎನಿಸುವ 10 ಸಂಪರ್ಕಗಳನ್ನು ಸೇವ್ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಿದೆ.
NoiseFit ಗ್ರೇಸ್ ಸ್ಮಾರ್ಟ್‌ವಾಚ್ ಅತ್ಯಾಕರ್ಷಕವಾದ ಹೆಲ್ತ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹೃದಯ ಬಡಿತ, SpO2, ನಿದ್ರೆಯ ಮಾದರಿಗಳು ಮತ್ತು ಒತ್ತಡದ ಮಟ್ಟವನ್ನು ಅಳೆಯುವ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ದೈನಂದಿನ ಜ್ಞಾಪನೆಗಳು ಮತ್ತು ಹವಾಮಾನ ಮುನ್ಸೂಚನೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಇನ್ನು ಈ ಸ್ಮಾರ್ಟ್ ವಾಚ್ IP67 ನೀರು ಮತ್ತು ಧೂಳಿನ ಪ್ರತಿರೋಧವನ್ನು ಸಹ ನೀಡಲಿದೆ. ಜೊತೆಗೆ ಇದು 4 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದು, ನಾಲ್ಕು ವಿಭಿನ್ನ ಸ್ಮಾರ್ಟ್ ವಾಚ್ ಮೆನು ಶೈಲಿಗಳನ್ನು ಹೊಂದಿದೆ.

NoiseFit ಗ್ರೇಸ್ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆದಾರರು 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳು ಮತ್ತು ಸ್ಪೋರ್ಟ್ಸ್ ಮೋಡ್‌ಗಳೊಂದಿಗೆ ಕಸ್ಟಮೈಸ್ ಮಾಡಬಹುದು. ಇದನ್ನು ನೀವು NoiseFit ಅಪ್ಲಿಕೇಶನ್‌ನೊಂದಿಗೆ ಮನಬಂದಂತೆ ಜೋಡಿಸುತ್ತದೆ.
ಬೆಲೆ ಮತ್ತು ಲಭ್ಯತೆ
NoiseFit ಗ್ರೇಸ್ ಸ್ಮಾರ್ಟ್‌ವಾಚ್ ಫ್ಲಿಪ್‌ಕಾರ್ಟ್ ಮತ್ತು ಬ್ರ್ಯಾಂಡ್‌ನ ವೆಬ್‌ಸೈಟ್ ಹಾಗೂ gonoise.com ನಲ್ಲಿ 2,999ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಇನ್ನು ಇತ್ತೀಚಿಗೆ ನಾಯ್ಸ್ ಕಂಪೆನಿ ಹೊಸದಾಗಿ Noise Buds Xero ಇಯರ್‌ಬಡ್ಸ್ ಪರಿಚಯಿಸಿದೆ. ಇದು ಸ್ಟೈಲಿಶ್ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಈ ಇಯರ್‌ಬಡ್‌ಗಳು 50dB ವರೆಗಿನ ಶಬ್ದ ಕಡಿತದೊಂದಿಗೆ ಅಡಾಪ್ಟಿವ್ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಅನ್ನು ನೀಡುತ್ತವೆ. ಇದು ಸುತ್ತಮುತ್ತಲಿನ ಆಧಾರದ ಮೇಲೆ ವೈಯಕ್ತೀಕರಿಸಿದ ಧ್ವನಿ ನಿಯಂತ್ರಣಕ್ಕಾಗಿ ಮೂರು ANC ವಿಧಾನಗಳನ್ನು (ಪಾರದರ್ಶಕ, ಬೆಳಕು ಮತ್ತು ಆಳವಾದ) ಒದಗಿಸುತ್ತದೆ.
ಇದಲ್ಲದೆ ಹೆಚ್ಚುವರಿಯಾಗಿ, ಈ ಇಯರ್‌ಬಡ್ಸ್ ಸೌಂಡ್ + ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಇದು ನಿಮ್ಮ ಫೋನ್ ಕಾಲ್ ಗುಣಮಟ್ಟವನ್ನು ಸುಧಾರಿಸಲಿದ್ದು, ಸ್ಪಷ್ಟ ಸಂವಹನವನ್ನು ಖಾತ್ರಿಗೊಳಿಸುತ್ತದೆ. ಜೊತೆಗೆ ಗೇಮರುಗಳಿಗಾಗಿ ಮತ್ತು ವೀಡಿಯೊ ಉತ್ಸಾಹಿಗಳಿಗೆ ಬಡ್ಸ್ ಝೀರೋ 50ms ವರೆಗಿನ ಕಡಿಮೆ ಲೇಟೆನ್ಸಿ ಮೋಡ್ ಅನ್ನು ನೀಡಲಿದೆ. ಇದು ತಡೆರಹಿತ ಆಡಿಯೊ-ವಿಶ್ಯುಯಲ್ ಸಿಂಕ್ ನೀಡಲಿದೆ. ಇದಕ್ಕಾಗಿ ಆಡಿಯೊ ವಿಳಂಬವನ್ನು ಕಡಿಮೆ ಮಾಡಲಿದೆ. ಜೊತೆಗೆ ಹೆಚ್ಚುವರಿಯಾಗಿ, ಇನ್-ಇಯರ್ ಡಿಟೆಕ್ಷನ್ ಬೆಂಬಲವು ಉಪಯುಕ್ತತೆಯನ್ನು ಹೆಚ್ಚಿಸಲಿದೆ.


Click it and Unblock the Notifications








