ಭಾರತಕ್ಕೆ ಕಾಲಿಟ್ಟ ನಾಯ್ಸ್ ಲೂನಾ ಸ್ಮಾರ್ಟ್ ರಿಂಗ್! ಡಿಸೈನ್ ನೋಡಿದ್ರೆ ಶಾಕ್ ಆಗ್ತೀರಾ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ರಿಂಗ್‌ಗಳು ಸಾಕಷ್ಟು ಸಂಚಲನವನ್ನು ಮೂಡಿಸಿವೆ. ಇದಕ್ಕೆ ಭಾರತದ ಮಾರುಕಟ್ಟೆ ಕೂಡ ಹೊರತಾಗಿಲ್ಲ, ಭಾರತದಲ್ಲಿಯೂ ಕೂಡ ಹಲವು ಕಂಪೆನಿಯ ಸ್ಮಾರ್ಟ್‌ರಿಂಗ್‌ಗಳು ಸದ್ದು ಮಾಡುತ್ತಿವೆ. ಅದರಂತೆ ಕೆಲವು ತಿಂಗಳುಗಳ ಹಿಂದೆ ಅನಾವರಣಗೊಂಡಿದ್ದ ನಾಯ್ಸ್ ಲೂನಾ ರಿಂಗ್ ಇದೀಗ ಅಧಿಕೃತವಾಗಿ ನಾಯ್ಸ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ.
ಹೌದು, ನಾಯ್ಸ್ ಲೂನಾ ರಿಂಗ್ ಭಾರತದಲ್ಲಿ ಅಧಿಕೃತವಾಗಿದೆ. ಈ ಮೂಲಕ ಭಾರತದ ಸ್ಮಾರ್ಟ್ ರಿಂಗ್ ವಲಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಇನ್ನು ನಾಯ್ಸ್ ಲೂನಾ ರಿಂಗ್ ಬ್ಲೂಟೂತ್ ಲೋ-ಎನರ್ಜಿ (BLE 5) ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಸಂಪರ್ಕಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ರಿಂಗ್ ಕೇವಲ 60 ನಿಮಿಷಗಳ ಚಾರ್ಜ್‌ನಲ್ಲಿ ಏಳು ದಿನಗಳವರೆಗೆ ಇರುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್ ರಿಂಗ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಲೂನಾ ರಿಂಗ್ ಫೀಚರ್ಸ್ ಹೇಗಿದೆ?
ನಾಯ್ಸ್ ಲೂನಾ ರಿಂಗ್ ತನ್ನ ಸ್ಟೈಲಿಶ್ ಲುಕ್‌ನಿಂದ ಗಮನಸೆಳೆದಿದೆ. ಇದು ಅಲ್ಟ್ರಾ-ಲೈಟ್‌ವೈಟ್ ಸ್ಮಾರ್ಟ್ ರಿಂಗ್ ಆಗಿದ್ದು, ಸ್ಲಿಪ್, ರೆಡಿನೆಸ್ ಮತ್ತು ಆಕ್ಟಿವಿಟಿ ಸ್ಕೋರ್‌ಗಳನ್ನು ನೀಡಲಿದೆ. ಇನ್ನು ಸ್ಮಾರ್ಟ್ ರಿಂಗ್ 3mm ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ. ಸ್ಮಾರ್ಟ್ ರಿಂಗ್ ಫೈಟರ್-ಜೆಟ್ ಗ್ರೇಡ್ ಟೈಟಾನಿಯಂನಿಂದ ಡೈಮಂಡ್ ಲೇಪನದೊಂದಿಗೆ ಬಿಲ್ಟ್ ಮಾಡಲಾಗಿದೆ. ಇದರಿಂದ ಸ್ಮಾರ್ಟ್‌ರಿಂಗ್ ಯಾವುದೇ ಗೀರುಗಳು ಮತ್ತು ತುಕ್ಕು ಹಿಡಿಯದಂತೆ ತಡೆಯಲಿದೆ.
ಇನ್ನು ನಾಯ್ಸ್ ಲೂನಾ ರಿಂಗ್ ಸುಧಾರಿತ ಇನ್ಫ್ರಾರೆಡ್ ಫೋಟೋಪ್ಲೆಥಿಸ್ಮೋಗ್ರಫಿ (PPG) ಸೆನ್ಸಾರ್‌ಗಳನ್ನು ಒಳಗೊಂಡಿದೆ. 3 ಆಕ್ಸಿಸ್ ಅಕ್ಸಿಲೆರೊಮೀಟರ್ ಅನ್ನು ಬಳಸಿಕೊಂಡು ಫಿಸಿಕಲ್ ಸೆನ್ಸಾರ್‌ಗಳನ್ನು ಅಳೆಯುವ ಮೂಲಕ ಬಳಕೆದಾರರ ಆರೋಗ್ಯವನ್ನು ಟ್ರ್ಯಾಕ್ ಮಾಡಲಿದೆ. ಇದರ ಮೂಲಕ ಪ್ರತಿ ಐದು ನಿಮಿಷಗಳಿಗೊಮ್ಮೆ, ಹೃದಯ ಬಡಿತ ಮತ್ತು ರಕ್ತ-ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ.
ನಾಯ್ಸ್ ಲೂನಾ ಸ್ಮಾರ್ಟ್ ರಿಂಗ್ ದೈನಂದಿನ ಸ್ಲೀಪ್ ಸ್ಕೋರ್ ಅನ್ನು ನೀಡಲಿದೆ. ಇದು ಬಳಕೆದಾರರ ನಿದ್ರೆಯ ಮಾದರಿಗಳನ್ನು ಹೆಚ್ಚಿಸಲು ಒಳನೋಟಗಳು ಮತ್ತು ಶಿಫಾರಸುಗಳನ್ನು ಒದಗಿಸಲಿದೆ. ನಿಖರವಾದ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಇದು ಇನ್-ಬಿಲ್ಟ್ ಅಲ್ಗಾರಿದಮ್‌ಗಳನ್ನು ಬಳಸುತ್ತದೆ. ಈ ಸ್ಮಾರ್ಟ್ ರಿಂಗ್ ಬ್ಲೂಟೂತ್ ಲೋ-ಎನರ್ಜಿ (BLE 5) ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಇನ್ನು ಸ್ಮಾರ್ಟ್‌ರಿಂಗ್ iOS 14/ Android 6 ಮತ್ತು ಹೆಚ್ಚಿನದಕ್ಕೆ ಹೊಂದಿಕೊಳ್ಳುತ್ತದೆ.
ನಾಯ್ಸ್ ಲೂನಾ ರಿಂಗ್ ಸಿಂಗಲ್ ಚಾರ್ಜ್‌ನಲ್ಲಿ ಏಳು ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ. ಇದು ಸಂಪೂರ್ಣವಾಗಿ ಚಾರ್ಜ್ ಆಗಲು 60 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾಯ್ಸ್ ಕಂಪೆನಿ ಹೇಳಿದೆ. ಅಲ್ಲದೆ ಲೂನಾ ರಿಂಗ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಇದು ಟೈಟಾನಿಯಂ ಬಾಡಿಯನ್ನು ಹೊಂದಿದ್ದು, ಅದರ ಹೈಪೋಲಾರ್ಜನಿಕ್ ನಯವಾದ ಒಳಗಿನ ಶೆಲ್ ಕಾರಣದಿಂದಾಗಿ ಪ್ರತಿಯೊಂದು ಚರ್ಮದ ಪ್ರಕಾರಕ್ಕೂ ಈ ರಿಂಗ್ ಹೊಂದಿಕೊಳ್ಳಲಿದೆ.
ಲೂನಾ ರಿಂಗ್ ಬೆಲೆ ಮತ್ತು ಲಭ್ಯತೆ
ನಾಯ್ಸ್ ಕಂಪೆನಿ ಈ ಸ್ಮಾರ್ಟ್ ರಿಂಗ್ ಭಾರತದಲ್ಲಿ 14,999ರೂ ಬೆಲೆಯನ್ನು ಹೊಂದಿದೆ. ಆದ್ಯತೆಯ ಪ್ರವೇಶ ಪಾಸ್‌ನೊಂದಿಗೆ ಲೂನಾ ಸ್ಮಾರ್ಟ್ ರಿಂಗ್ ಅನ್ನು ಮುಂಗಡವಾಗಿ ಬುಕ್ ಮಾಡಿದ ಗ್ರಾಹಕರು gonoise.com ನಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ರಿಯಾಯಿತಿಗಳು ಮತ್ತು ವಿಶೇಷ ಕೊಡುಗೆಗಳಿಗೆ ಕೂಡ ಅವಕಾಶ ಸಿಗಲಿದೆ. ಇದಲ್ಲದೆ ಗ್ರಾಹಕರು ಖರೀದಿಯ ದಿನದಂದು ಹೆಚ್ಚುವರಿ 1,000ರೂ. ರಿಯಾಯಿತಿಗಾಗಿ ಪಾಸ್ ಅನ್ನು ರಿಡೀಮ್ ಮಾಡಬಹುದಾಗಿದೆ. ಇನ್ನು ಸ್ಮಾರ್ಟ್ ರಿಂಗ್ ಏಳು ವಿಭಿನ್ನ ಗಾತ್ರಗಳಲ್ಲಿ ಲಭ್ಯವಾಗಲಿದೆ. ಇದು ರೋಸ್ ಗೋಲ್ಡ್, ಸನ್‌ಲಿಟ್ ಗೋಲ್ಡ್, ಸ್ಟಾರ್‌ಡಸ್ಟ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಲೂನಾರ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ದೊರೆಯಲಿದೆ.


Click it and Unblock the Notifications








