ಭಾರತಕ್ಕೆ ಎಂಟ್ರಿ ಕೊಟ್ಟ ನಾಯ್ಸ್ ಸ್ಮಾರ್ಟ್ ರಿಂಗ್; ಇದರ ಡಿಸೈನ್‌ಗೆ ಮನಸೋಲದವರೇ ಇಲ್ಲ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ರಿಂಗ್‌ಗಳು ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿವೆ. ಸ್ಮಾರ್ಟ್‌ವಾಚ್‌ಗಳಿಗೂ ಸವಾಲ್ ಎಸೆಯುತ್ತಿರುವ ಸ್ಮಾರ್ಟ್ ರಿಂಗ್‌ಗಳು ಯುವಜನರ ಹಾಟ್‌ಫೇವರಿಟ್ ಆಗಿವೆ. ಇದಕ್ಕೆ ಅನುಗುಣವಾಗಿ ಹಲವು ಬ್ರ್ಯಾಂಡ್‌ಗಳು ವಿವಿಧ ಸ್ಮಾರ್ಟ್ ರಿಂಗ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದೀಗ ನಾಯ್ಸ್ ಕಂಪೆನಿ ಕೂಡ ಹೊಸ ಸ್ಮಾರ್ಟ್ ರಿಂಗ್ ಲಾಂಚ್ ಮಾಡಿದೆ.
ಹೌದು, ನಾಯ್ಸ್ ಕಂಪೆನಿ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್ ರಿಂಗ್ ಲೂನಾ ರಿಂಗ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ರಿಂಗ್ ಕೇವಲ ಉಂಗುರ ಮಾತ್ರವಲ್ಲ ನಿಮ್ಮ ಹೃದಯ ಬಡಿತವನ್ನು ಕೂಡ ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ರಿಂಗ್ ಟೆಂಪ್‌ರೇಚರ್ ಅನ್ನು ಕೂಡ ಅಳೆಯುವ ಕ್ಯಾಪಾಸಿಟಿ ಪಡೆದಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್ ರಿಂಗ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಲೂನಾ ರಿಂಗ್ ವಿಶೇಷತೆ ಏನು?
ನಾಯ್ಸ್ ಲೂನಾ ರಿಂಗ್ ತನ್ನ ಡಿಸೈನ್‌ನಿಂದಲೇ ಗಮನಸೆಳೆದಿದೆ. ಈ ಸ್ಮಾರ್ಟ್ ರಿಂಗ್ ಇನ್‌ಫ್ರಾರೆಡ್ ಫೋಟೋಪ್ಲೆಥಿಸ್ಮೋಗ್ರಫಿ (PPG) ಸೆನ್ಸಾರ್‌ಗಳು, ಸ್ಕಿನ್ ಟೆಂಪ್‌ರೇಚರ್ ಸೆನ್ಸಾರ್‌ಗಳು ಮತ್ತು 3 ಆಕ್ಸಿಸ್ ಅಕ್ಸಿಲೆರೊಮೀಟರ್‌ನಂತಹ ಅಡ್ವಾನ್ಸ್ ಸೆನ್ಸಾರ್‌ಗಳನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ಬೆರಳಿನಿಂದ ಆಪ್ಟಿಕಲ್ ಸೆನ್ಸಾರ್‌ಗಳ ಜೋಡಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಮೂರು ಉಬ್ಬುಗಳ ಜೊತೆಗೆ ಮೂರು ಎಲ್ಇಡಿಗಳು ಮತ್ತು ಎರಡು ಪಿಡಿಗಳನ್ನು ಸಂಯೋಜಿಸುವ ಆಪ್ಟೋಮೆಕಾನಿಕಲ್ ವಿನ್ಯಾಸವನ್ನು ಬಳಸಿದೆ.
ಇನ್ನು ಈ ಲೂನಾ ರಿಂಗ್ 70 ಕ್ಕೂ ಹೆಚ್ಚು ಮೆಟ್ರಿಕ್‌ಗಳನ್ನು ಟ್ರ್ಯಾಕ್ ಮಾಡುತ್ತದೆ ಎಂದು ನಾಯ್ಸ್ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಸ್ಲಿಪ್, ರೆಡಿನೆಸ್ ಮತ್ತು ಆಕ್ಟಿವಿಟಿಯಲ್ಲಿ ಬಳಕೆದಾರರ ಸ್ಕೋರ್‌ಗಳನ್ನು ನೀಡಲಿದೆ. ಜೊತೆಗೆ ಬಳಕೆದಾರರ ಮಾದರಿಗಳನ್ನು ವಿಶ್ಲೇಷಿಸುವ ಮತ್ತು ಸೂಕ್ತವಾದ ಶಿಫಾರಸುಗಳನ್ನು ನೀಡುವ ಆಕ್ಟಿವಿಟಿ ಟ್ರ್ಯಾಕರ್‌ಗಳೊಂದಿಗೆ ಬರಲಿದೆ. ಇದರೊಂದಿಗೆ ಲೂನಾ ರಿಂಗ್ ಬಾಡಿ ಟೆಂಪ್‌ರೇಚರ್ ಸೆನ್ಸಾರ್ ಹೊಂದಿದೆ. ಜೊತಗೆ ಹಾರ್ಟ್‌ಬೀಟ್ ಮಾನಿಟರ್ ಮತ್ತು ಬಳಕೆದಾರರ ಆರೋಗ್ಯವನ್ನು ಟ್ರ್ಯಾಕ್ ಮಾಡಲು SpO2 ಸೆನ್ಸಾರ್ ಅನ್ನು ಹೊಂದಿದೆ.
ಲೂನಾ ರಿಂಗ್ ಬ್ಲೂಟೂತ್ ಲೋ-ಎನರ್ಜಿ (BLE 5) ಟೆಕ್ನಾಲಜಿಯೊಂದಿಗೆ ರನ್ ಆಘಲೊದೆ. ಇದು ಐಒಎಸ್ 14 ಮತ್ತು ಆಂಡ್ರಾಯ್ಡ್6 ಮತ್ತು ಇದಕ್ಕಿಂತ ಮೇಲಿನ ಎಲ್ಲಾ ಡಿವೈಸ್‌ಗಳೊಂದಿಗೆ ಇದು ಸೆಟ್ ಆಗಲಿದೆ. ಇನ್ನು ಈ ಸ್ಮಾರ್ಟ್ ರಿಂಗ್ 50m ಅಥವಾ 164 ft ವರೆಗೆ ನೀರಿನ ಪ್ರತಿರೋಧವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದಿಷ್ಟೇ ಅಲ್ಲ ಲೂನಾ ರಿಂಗ್‌ನ ಮತ್ತೊಂದು ವಿಶೇಷತೆ ಎಂಧರೆ ಆಟೋಮ್ಯಾಟಿಕ್ ಫರ್ಮ್‌ವೇರ್ ಅಪ್ಡೇಟ್‌ಗಳನ್ನು ನೀಡುವುದು.
ನಾಯ್ಸ್ ಲೂನಾ ರಿಂಗ್ ಸಿಂಗಲ್ ಚಾರ್ಜ್‌ನಲ್ಲಿ ಏಳು ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ. ಇದು ಸಂಪೂರ್ಣವಾಗಿ ಚಾರ್ಜ್ ಆಗಲು 60 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾಯ್ಸ್ ಕಂಪೆನಿ ಹೇಳಿದೆ. ಅಲ್ಲದೆ ಲೂನಾ ರಿಂಗ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಇದು ಟೈಟಾನಿಯಂ ಬಾಡಿಯನ್ನು ಹೊಂದಿದ್ದು, ಅದರ ಹೈಪೋಲಾರ್ಜನಿಕ್ ನಯವಾದ ಒಳಗಿನ ಶೆಲ್ ಕಾರಣದಿಂದಾಗಿ ಪ್ರತಿಯೊಂದು ಚರ್ಮದ ಪ್ರಕಾರಕ್ಕೂ ಈ ರಿಂಗ್ ಹೊಂದಿಕೊಳ್ಳಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಸ್ಮಾರ್ಟ್ ರಿಂಗ್ 3mm ದಪ್ಪವಿದ್ದು, ಹಗುರವಾದ ವಿನ್ಯಾಸವನ್ನು ಹೊಂದಿದೆ.
ನಾಯ್ಸ್ ಲೂನಾ ರಿಂಗ್ ಬೆಲೆ ಮತ್ತು ಲಭ್ಯತೆ
ನಾಯ್ಸ್ ಲೂನಾ ರಿಂಗ್ ಭಾರತದಲ್ಲಿ 2,000ರೂ. ಬೆಲೆಯನ್ನು ಹೊಂದಿದೆ. ಇದನ್ನು ಆದ್ಯತಾ ಪ್ರವೇಶ ಪಾಸ್ ಆಯ್ಕೆ ಮಾಡುವ ಮೂಲಕ ಪ್ರಿ ಬುಕಿಂಗ್ ಮಾಡಬಹುದು. ಆದ್ಯತಾ ಪ್ರವೇಶ ಪಾಸ್ ಮೂಲಕ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದ. ಇನ್ನು ಈ ಸ್ಮಾರ್ಟ್ ರಿಂಗ್ ಸನ್‌ಲಿಟ್ ಗೋಲ್ಡ್, ರೋಸ್ ಗೋಲ್ಡ್, ಸ್ಟಾರ್‌ಡಸ್ಟ್ ಸಿಲ್ವರ್, ಲೂನಾರ್ ಬ್ಲ್ಯಾಕ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.


Click it and Unblock the Notifications








