Home
ಸುದ್ದಿಜಾಲ

ನಾಯ್ಸ್ ಶಾಟ್ಸ್ ಎರ್ಗೊ ವಾಯರ್‌ಲೆಸ್‌ ಇಯರ್‌ಬಡ್ಸ್‌ ಬಿಡುಗಡೆ!

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಬಡ್ಸ್‌ಗಳ ಭರಾಟೆ ಕೂಡ ಜೋರಾಗಿಯೇ ಇದೆ. ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ಫೋನ್‌ ಬಾಕ್ಸ್‌ ಜೊತೆಗೆ ಇಯರ್‌ಬಡ್ಸ್‌, ಇಯರ್‌ಫೋನ್‌ಗಳನ್ನ ನೀಡುವುದನ್ನ ನಿಲ್ಲಿಸಲಾಗಿದೆ. ಆದರೂ ಕೂಡ ಬಳಕೆದಾರರು ಮಾತ್ರ ತಮ್ಮ ನೆಚ್ಚಿನ ಕಂಪೆನಿಗಳ ಇಯರ್‌ಬಡ್ಸ್‌ಗಳನ್ನ ಖರೀದಿಸುತ್ತಾರೆ. ತಮ್ಮ ಸ್ಮಾರ್ಟ್‌ಫೋನ್‌ಗಲಿಗೆ ತಕ್ಕಂತೆ ತಮ್ಮ ಕಿವಿಯ ವಿನ್ಯಾಸಕ್ಕೆ ಸರಿ ಹೊಂದುವ ನಾನಾ ಬಗೆಯ ಇಯರ್‌ಬಡ್ಸ್‌ಗಳು ಇಂದು ಲಭ್ಯವಿವೆ. ಇನ್ನು ನಾಯ್ಸ್‌ ಕಂಪೆನಿ ಸಹ ತನ್ನ ವಿಶೇಷ ಇಯರ್‌ಬಡ್ಸ್‌ಗಳ ಮೂಲಕ ಗುರುತಿಸಿಕೊಂಡಿದ್ದು, ಸದ್ಯ ಇದೀಗ ತನ್ನ ಮತ್ತೊಂದು ಹೊಸ ಇಯರ್‌ ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ.

ನಾಯ್ಸ್

ಹೌದು, ಭಾರತದಲ್ಲಿ ಪ್ರಸಿದ್ಧ ವೆರಿಯಬಲ್ಸ್‌ ತಯಾರಕ ಕಂಪೆನಿ ನಾಯ್ಸ್ ಕಂಪೆನಿ ಗುರುತಿಸಿಕೊಂಡಿದೆ. ಸದ್ಯ ಭಿನ್ನ ಮಾದರಿಯ ಇಯರ್‌ಬಡ್ಸ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ನಾಯ್ಸ್‌ ಕಂಪೆನಿ ಸದ್ಯ ಇದೀಗ ತನ್ನ ಹೊಸ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ನಾಯ್ಸ್ ಶಾಟ್ಸ್ ಎರ್ಗೊವನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಬಡ್‌ಗಳನ್ನು ಫ್ಲಿಪ್‌ಕಾರ್ಟ್ ಮತ್ತು ಗೊನೊಯಿಸ್.ಕಾಮ್ ಮೂಲಕ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಯರ್‌ಬಡ್ಸ್

ಸದ್ಯ ದೇಶಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ನಾಯ್ಸ್ ಶಾಟ್ಸ್ ಎರ್ಗೊ ಆಂಡ್ರಾಯ್ಡ್ ಮತ್ತು ಐಒಎಸ್‌ ಡಿವೈಸ್‌ಗಳಲ್ಲಿ ಗೂಗಲ್‌ ಅಸಿಸ್ಟೆಂಟ್‌ ಜೊತೆಗೆ ಬ್ಲೂಟೂತ್‌ 5.0 ಅನ್ನು ಬೆಂಬಲಿಸುತ್ತದೆ. ಇನ್ನು ಈ ಇಯರ್‌ಬಡ್ಸ್‌ ಬೆವರು ಮತ್ತು ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು ,IPS 7 ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಬಳಕೆದಾರರ ಕಿವಿಯ ವಿನ್ಯಾಶಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಈ ಇಯರ್‌ಬಡ್ಸ್‌ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಪಾಪ್, ರಾಕ್ ಮತ್ತು ಕ್ಲಾಸಿಕ್ ಮೋಡ್‌ಗಳನ್ನು ಒಳಗೊಂಡಿರುವ 3 ಅಂತರ್ನಿರ್ಮಿತ ಪೂರ್ವನಿಗದಿಗಳೊಂದಿಗೆ ಸಮೀಕರಣವನ್ನು ಸಹ ಹೊಂದಿದೆ.

ಇಯರ್‌ ಬಡ್ಸ್

ಇನ್ನು ಈ ಇಯರ್‌ ಬಡ್ಸ್‌ಗಳನ್ನು ಸ್ಪೋರ್ಟ್ಸ್‌ ಮತ್ತು ಆಕ್ಟಿವ್‌ ಫಿಟ್‌ನೆಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಇಯರ್‌ಫೋನ್‌ನಲ್ಲಿ ಸಿಲಿಕೋನ್‌ ಇಯರ್‌ಕೊಕ್ಕೆಗಳನ್ನು ಸಹ ನೀಡಲಾಗಿದೆ. ಅಷ್ಟೇ ಅಲ್ಲ ಈ ಇಯರ್‌ಬಡ್ಸ್‌ 400mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ವಾಯರ್‌ಲೆಸ್ ಇಯರ್‌ಬಡ್‌ಗಳು ಚಾರ್ಜಿಂಗ್ ಕೇಸ್ ಬ್ಯಾಟರಿಯೊಂದಿಗೆ 5 ಗಂಟೆಗಳ ಸ್ವತಂತ್ರ ಪ್ಲೇಬ್ಯಾಕ್ ಮತ್ತು 15 ಗಂಟೆಗಳ ಹೆಚ್ಚುವರಿ ಪ್ಲೇಬ್ಯಾಕ್ ಅನ್ನು ನೀಡಲಿದೆ ಎನ್ನಲಾಗಿದೆ. ಒಟ್ಟಾರೆ ಇದರ ಬ್ಯಾಕಪ್‌ 20 ಗಂಟೆಗಳು ಎನ್ನಲಾಗ್ತಿದೆ.

ನಾಯ್ಸ್‌

ಇದಲ್ಲದೆ ಈಗಾಗಲೇ ನಾಯ್ಸ್‌ ಕಂಪೆನಿ ಇದೇ ಜೂನ್‌ ತಿಂಗಳ ಆರಂಭದಲ್ಲಿ, ನಾಯ್ಸ್ ಶಾಟ್ಸ್ ರಶ್ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಿತ್ತು.ಇದು ಸಹ ಸ್ಪೋರ್ಟ್ಸ್‌ ಮತ್ತು ಆಕ್ಟಿವ್‌ ಫಿಟ್‌ನೆಸ್‌ ಗಾಗಿ ವಿನ್ಯಾಸಗೊಳಿಸಲಾಗಿತ್ತು. ಸದ್ಯ ಇದೀಗ ಬಿಡುಗಡೆ ಆಗಿರುವ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ನಾಯ್ಸ್ ಶಾಟ್ಸ್ ಎರ್ಗೊ 2,499 ರೂ.ಗಳ ಪ್ರಾರಂಭಿಕ ಬೆಲೆಯನ್ನ ಹೊಂದಿದ್ದು, ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆಬರುತ್ತದೆ.

Best Mobiles in India

English summary
Noise Shots Ergo come with a charging case with 400mAh battery and Type-C charging port.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+