ನಾಯ್ಸ್ ಸಂಸ್ಥೆಯಿಂದ ಶಾಟ್ಸ್ ರಶ್ ವಾಯರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ!
ಟೆಕ್ ಮಾರುಕಟ್ಟೆಯಲ್ಲಿ ಇಯರ್‌ಫೋನ್, ಹೆಡ್‌ಫೋನ್, ಇಯರ್‌ಬಡ್ಸ್‌ಗಳ ಮಾರುಕಟ್ಟೆ ಕೂಡ ಸಾಕಷ್ಟು ವಿಶಾಲವಾಗಿದೆ. ಸ್ಮಾರ್ಟ್‌ಫೋನ್ ಖರೀದಿಸಿದಾಗಿ ಇಯರ್‌ಫೋನ್ ನೀಡುವ ಕಾಲ ಎಂದು ಮುಗಿದು ಹೋಗಿದೆ. ಈಗ ಏನಿದ್ದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಇಯರ್ ಫೋನ್‌ಗಳನ್ನ ಖರೀದಿಸುವ ಕಾಲ. ಇನ್ನು ಈಗಾಗಲೇ ಹಲವು ವಿವಿಧ ಕಂಪೆನಿಯ ಇಯರ್‌ಫೋನ್‌ಗಳು ಲಭ್ಯವಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಯ ಇಯರ್‌ಫೋನ್‌ಗಳನ್ನೇ ಖರೀದಿಸುತ್ತಾರೆ. ಸದ್ಯ ಇವುಗಳಲ್ಲಿ ನಾಯ್ಸ್ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ಮಾದರಿಯ ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಹೌದು, ನಾಯ್ಸ್ ಕಂಪೆನಿ ತನ್ನ ಹೊಸ ನಾಯ್ಸ್ ಶಾಟ್ಸ್ ರಶ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಈ ಹೊಸ ಸ್ಪೋರ್ಟ್ಸ್ ವಾಯರ್‌ಲೆಸ್ ಇಯರ್‌ಬಡ್ ಭಾರತದಲ್ಲಿ 3,999 ರೂ ಬೆಲೆಯನ್ನ ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ಗಳನ್ನು ಸ್ಪೋರ್ಟ್ಸ್ ಮತ್ತು ಆಕ್ಟಿವ್ ಫಿಟ್‌ನೆಸ್ ಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ಈ ಇಯರ್‌ಬಡ್ಸ್ ಯಾವೆಲ್ಲಾ ವಿನ್ಯಾಸ ಹಾಗೂ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸದ್ಯ ನಾಯ್ಸ್ ಶಾಟ್ಸ್ ರಶ್ ಟ್ರೂಲಿ ವಾಯರ್‌ಲೆಸ್ ಇಯರ್ ಫೋನ್‌ಗಳು ಗ್ರಾಹಕರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿವೆ. ಇನ್ನು ಈ ಬ್ಲೂಟೂತ್ ಇಯರ್‌ಫೋನ್‌ಗಳು ಪಾಪ್, ರಾಕ್ ಮತ್ತು ಕ್ಲಾಸಿಕ್ ಮೋಡ್‌ಗಳನ್ನು ಒಳಗೊಂಡಿರುವ 3 ಇಂಟರ್‌ಬಿಲ್ಟ್ ಸಮೀಕರಣವನ್ನು ಹೊಂದಿವೆ. ಇದಲ್ಲದೆ ಸ್ವಿಚ್ ಮಾಡಬಹುದಾದ ಕಡಿಮೆ-ಲೇಟೆನ್ಸಿ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ ಕಂಪನಿಯ ಪ್ರಕಾರ, ವೀಡಿಯೊಗಳನ್ನು ವೀಕ್ಷಿಸಲು ಮತ್ತು ಕನಿಷ್ಠ ಆಡಿಯೊ ಲೆಟೆನ್ಸಿ ಮೋಡ್ ಗೇಮ್‌ಗಳನ್ನ ಆಡಲು ನಿಮಗೆ ಅವಕಾಶ ಕಲ್ಪಿಸುತ್ತದೆ.

ಇನ್ನು ಈ ಹೊಸ ನಾಯ್ಸ್ ಶಾಟ್ಸ್ ರಶ್ ವಾಯರ್‌ಲೆಸ್ ಇಯರ್‌ಬಡ್‌ಗಳು IPS 5 ವಾಟರ್ ಪ್ರೂಪ್ ವ್ಯವಸ್ತೆಯನ್ನ ಹೊಂದಿದೆ. ಜೊತೆಗೆ ಬೆವರು ನಿರೋಧಕ ಮತ್ತು ಮಳೆ ನಿರೋಧಕ ಕೂಡ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ ಈ ಇಯರ್ ಬಡ್ಸ್ ಪ್ಲೇಬ್ಯಾಕ್, ವಾಯ್ಸ್ ಅಸಿಸ್ಟೆಂಟ್, ಕರೆಗಳಿಗೆ ಟಚ್ ಕಂಟ್ರೋಲ್ ಅನ್ನು ನೀಡುತ್ತದೆ. ಈ ಇಯರ್‌ಬಡ್‌ಗಳು 6 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಒಟ್ಟು 24 ಗಂಟೆಗಳ ಪ್ಲೇಟೈಮ್ ನೀಡುವ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ ಎಂದು ಹೇಳಲಾಗಿದೆ.

ಸದ್ಯ ಈ ಇಯರ್‌ಬಡ್ಸ್ ಸ್ಪೊರ್ಟ್ ವಿನ್ಯಾಸವನ್ನ ಹೊಂದಿದ್ದು, ಆಕ್ಟಿವ್ ಸ್ಪೋರ್ಟ್ಸ್, ಸ್ವಿಮಿಂಗ್ ಮಾಡುವಾಗಲೂ ಮ್ಯೂಸಿಕ್ ಅನುಭವ ಪಡೆಯುವುದಕ್ಕೆ ಉತ್ತಮವಾಗಿದೆ. ಇನ್ನು ಈ ಇಯರ್‌ಬಡ್ಸ್ 3,999 ರೂ ಬೆಲೆಯನ್ನ ಹೊಂದಿದ್ದು. ಚಾರ್ಕೋಲ್ ಬ್ಲ್ಯಾಕ್, ಕ್ವಿಕ್ ಸಿಲ್ವರ್, ಮತ್ತು ವೈನ್ ರೆಡ್ ರೀತಿಯ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








