ನಾಯ್ಸ್ ಶಾಟ್ಸ್ X5 ಪ್ರೊ ಇಯರ್‌ಬಡ್ಸ್ ಬಿಡುಗಡೆ!
ಟೆಕ್ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳ ಪ್ರಾಬಲ್ಯ ಹೆಚ್ಚಾದಷ್ಟು ಇಯರ್‌ಫೋನ್‌ಗಳ ಮಾರುಕಟ್ಟೆ ಕೂಡ ಸಾಕಷ್ಟು ವಿಸ್ತಾರಗೊಂಡಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯವಾದ ಇಯರ್‌ಬಡ್ಸ್‌ಗಳನ್ನ ಪರಿಚಯಿಸಿವೆ. ಅಲ್ಲದೆ ಗ್ರಾಹಕರು ಕೂಡ ತಮಗಿಷ್ಟವಾದ ಬ್ರ್ಯಾಂಡ್ ಕಂಪೆನಿಗಳ ಇಯರ್ ಬಡ್ಸ್‌ಗಳನ್ನೇ ಖರೀದಿಸುತ್ತಾರೆ. ಇವುಗಳಲ್ಲಿ ನಾಯಿಸ್ ಕಂಪೆನಿ ಕೂಡ ಒಂದಾಗಿದ್ದು, ಮಾರುಕಟ್ಟೆಯಲ್ಲಿ ನಾಯ್ಸ್ ಕಂಪೆನಿಯ ಇಯರ್‌ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂಡ್ ಮಾಡ್ತಿವೆ. ಈಗಾಗಲೇ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ನಾಯ್ಸ್ ಕಂಪೆನಿ ತನ್ನ ಹೊಸ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ.

ಹೌದು, ನಾಯಿಸ್ ಕಂಪೆನಿ ತನ್ನ ಹೊಸ ನಾಯಿಸ್ ಶಾಟ್ಸ್ X5 ಪ್ರೊ ಇಯರ್‌ಬಡ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ ಈ ಇಯರ್ ಬಡ್ಸ್ ಟ್ರೂಲಿ ವಾಯರ್‌ಲೆಸ್ ಇಯರ್ ಬಡ್ಸ್ ಆಗಿದೆ. ಇನ್ನು ಈ ಇಯರ್ ಬಡ್ಸ್ ಬ್ಲೂಟೂತ್ 5.0, ಕ್ವಾಲ್ಕಾಮ್ ಆಪ್ಟಿಎಕ್ಸ್ ಮತ್ತು ಎಎಸಿಗೆ ಬೆಂಬಲವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಜೊತೆಗೆ ಈ ಇಯರ್‌ಬಡ್ಸ್ ಐಪಿಎಕ್ಸ್ 7 ರೇಟ್ ವಾಟರ್ ಪ್ರೂಪ್ ವ್ಯವಸ್ಥೆಯನ್ನ ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್ ಯಾವೆಲ್ಲ ವಿಶೇಷತೆ ಅನ್ನು ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಇನ್ನು ಇಯರ್‌ಬಡ್ಸ್ ಟ್ರ್ಯಾಕ್‌ಗಳನ್ನು ಬದಲಾಯಿಸಲು, ಪರಿಮಾಣ ಮಾಡಲು, ಕರೆಗಳನ್ನು ನಿರ್ವಹಿಸಲು ಮತ್ತು ಕರೆಗಳನ್ನು ಕಡಿತಗೊಳಿಸಲು ಟಚ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್ ಬಳಕೆದಾರರ ಅನುಭವವನ್ನ ಹೆಚ್ಚಿಸುವ ವಿನ್ಯಾಸವನ್ನು ಒಳಗೊಂಡಿದೆ. ಇದಲ್ಲದೆ ನಾಯಿಸ್ ಇಯರ್‌ಬಡ್ಸ್‌ಗಳಲ್ಲಿ 6mm ಗ್ರ್ಯಾಫೀನ್ ಸ್ಪೀಕರ್ ಡ್ರೈವರ್‌ಗಳನ್ನ ನೀಡಲಾಗಿದೆ. ಜೊತೆಗೆ ಇದು ನಾಯಿಸ್ ಶಾಟ್ಸ್ X5 ಚಾರ್ಜ್‌ನ ನವೀಕರಿಸಿದ ಆವೃತ್ತಿಯಾಗಿದೆ.

ಇದಲ್ಲದೆ, ಈ ಇಯರ್‌ಬಡ್ಸ್ ಚಾರ್ಜಿಂಗ್‌ಗಾಗಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಕಂಪನಿಯ ಪ್ರಕಾರ, ನಾಯಿಸ್ ಶಾಟ್ಸ್ ಎಕ್ಸ್ 5 ಪ್ರೊ ಅದರಲ್ಲಿ ಪ್ಲಗ್ ಇನ್ ಮಾಡಲಾದ ಯಾವುದೇ ಸಾಧನಗಳನ್ನು ರಿವರ್ಸ್-ಚಾರ್ಜ್ ಮಾಡಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್ CVC 8.0 ನಾಯಿಸ್ ಕಂಟ್ರೋಲ್ ಟೆಕ್ನಾಲಜಿಯನ್ನು ಸಹ ಹೊಂದಿವೆ. ಇದಲ್ಲದೆ ಪ್ರತಿ ಇಯರ್‌ಬಡ್‌ನಲ್ಲಿ ಮೈಕ್ರೊಫೋನ್ ಅಳವಡಿಸಲಾಗಿದ್ದು ಅದು ಧ್ವನಿಯನ್ನು ಉತ್ತಮಗೊಳಿಸುತ್ತದೆ.

ಇನ್ನು ಈ ಇಯರ್‌ಬಡ್ಸ್ ಬ್ಲೂಟೂತ್ 5.0, ಕ್ವಾಲ್ಕಾಮ್ ಆಪ್ಟಿಎಕ್ಸ್ ಮತ್ತು ಎಎಸಿ ಟೆಕ್ನಾಲಜಿಯನ್ನ ಹೊಂದಿದೆ. ಜೊತೆಗೆ ಸಿಂಗಲ್ ಚಾರ್ಜಿಂಗ್‌ನಲ್ಲಿ 8 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡುತ್ತದೆ. ಅಲ್ಲದೆ ಈ ಇಯರ್‌ಬಡ್ಸ್ 2,200mAh ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಅಲ್ಲದೆ ಬಳಕೆದಾರರಿಗೆ 150 ಗಂಟೆಗಳ ಪ್ಲೇಬ್ಯಾಕ್ ಸಮಯಕ್ಕೆ 18 ಹೆಚ್ಚಿನ ರೀಚಾರ್ಜ್‌ಗಳನ್ನು ನೀಡುತ್ತದೆ ಎಂದು ನಾಯಿಸ್ ಹೇಳಿಕೊಂಡಿದೆ. ಜೊತೆಗೆ ಈ ಇಯರ್‌ಬಡ್ಸ್ ಬಳಕೆದಾರರಿಗೆ ಉತ್ತಮವಾದ ಅನುಭವವನ್ನು ನೀಡಲಿದ್ದು, ಯುವ ಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.


Click it and Unblock the Notifications