Just In
Don't Miss
- News
ಅಮೆರಿಕಾದ ಪತ್ರಕರ್ತನ ಕೊಂದವರಿಗೆ ಪಾಕ್ ನಲ್ಲಿ ಬಿಡುಗಡೆ ಭಾಗ್ಯ!
- Automobiles
ಕ್ರ್ಯಾಶ್ ಟೆಸ್ಟ್ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್ಯುವಿ 300
- Sports
ಐಎಸ್ಎಲ್: ಬೆಂಗಳೂರು ಎಫ್ಸಿ vs ಹೈದರಾಬಾದ್ ಎಫ್ಸಿ ಹಣಾಹಣಿ, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Movies
ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಯಿಸ್ ಶಾಟ್ಸ್ XO ಇಯರ್‌ಬಡ್ಸ್‌ಲಾಂಚ್!..ಬೆಲೆ 5499 ರೂ
ಈಗಾಗ್ಲೆ ಟೆಕ್ ಮಾರುಕಟ್ಟೆಯಲ್ಲಿ ವಾಯರ್‌ಲೆಸ್ ಇಯರ್‌ಬಡ್ಸ್‌ಗಳು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿವೆ. ಸ್ಮಾರ್ಟ್‌ಫೋನ್ ಬಳಕೆದಾರರು ವಾಯರ್‌ಲೆಸ್ ಇಯರ್‌ಬಡ್ಸ್‌ಗಳಿಗೆ ಮೋರೆ ಹೋಗುವುದು ಸಾಮಾನ್ಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ನೂತನ ವಿನ್ಯಾಸದ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್ ಲಭ್ಯ ಇವೆ. ಸದ್ಯ ನಾಯ್ಸ್ ಕಂಪೆನಿ ತನ್ನ ಹೊಸ ಇಯರ್‌ಬಡ್ಸ್ ಅನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಕ್ವಾಲ್‌ಕಾಮ್ ಆಪ್ಟಿಎಕ್ಸ್ ಟೆಕ್ನಾಲಜಿ ಹೊಂದಿರುವ ಮೊದಲ ಇಯರ್‌ಬಡ್ಸ್ ಇದಾಗಿದೆ.

ಹೌದು, ನಾಯಿಸ್ ಕಂಪೆನಿ ತನ್ನ ಹೊಸ ಆವೃತ್ತಿಯ ಇಯರ್‌ಬಡ್ಸ್ ನಾಯಿಸ್ ಶಾಟ್ಸ್XO ಇಯರ್‌ಬಡ್ಸ್ ಅನ್ನ ಬಿಡುಗಡೆ ಮಾಡಿದ್ದು. ಈ ಇಯರ್ ಬಡ್ಸ್ ಕ್ವಾಲ್‌ಕಮ್ ಆಪ್ಟಿಎಕ್ಸ್ ಟೆಕ್ನಾಲಜಿ ಹೊಂದಿರುವ ಮೊದಲ ಇಯರ್ ಬಡ್ಸ್ ಅನ್ನೋ ಖ್ಯಾತಿ ಪಡೆದಿದೆ. ಈ ಇಯರ್‌ಬಡ್ ನಾಯಿಸ್ ಕಂಪೆನಿಯ ಶಾಟ್ಸ್ ಎಕ್ಸ್-ಬಡ್‌ಗಳ ಅಪ್‌ಗ್ರೇಡ್ ಆಗಿದ್ದು,ಈಗಾಗ್ಲೆ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿರೋ ಇತರೆ ಕಂಪೆನಿಗಳ ಇಯರ್‌ಬಡ್‌ಗಳಿಗೆ ಟಕ್ಕರ್ ಕೊಡುವ ಸೂಚನೆ ನೀಡಿದ್ದು, ಈ ಇಯರ್ ಬಡ್‌ಗಳು ಹೆಚ್ಚು ಪ್ರೀಮಿಯಂ ಆಗಿದೆ.

ನಾಯಿಸ್ ಶಾಟ್ಸ್XO ಇಯರ್‌ಬಡ್ಸ್‌ಗಳು ಮೆಟಾಲಿಕ್ ರಚನೆಯನ್ನ ಹೊಂದಿದೆ. ಇದು ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದ್ದು, 10 ಮೀ ವೈರ್‌ಲೆಸ್ ರೇಂಜ್ ಹೊಂದಿದೆ. ಅಲ್ಲದೆ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹೊಂದಿದ್ದು, 2 ಗಂಟೆಗಳ ಕಾಲ ಚಾರ್ಜಿಂಗ್ ಸಮಯ ತೆಗೆದುಕೊಳ್ಳಲಿದ್ದು. ಅಷ್ಟೇ ಅಲ್ಲ ವೈರ್‌ಲೆಸ್ ಚಾರ್ಜಿಂಗ್ ಟೆಕ್ನಾಲಜಿಯನ್ನ ಸಹ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 6 ಗಂಟೆಗಳ ಪ್ಲೇಬ್ಯಾಕ್ ಟೈಮ್ ನೀಡಲಿದೆ. ಇದಲ್ಲದೆ ಒಟ್ಟು 36 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಇನ್ನು ಇಯರ್‌ಬಡ್‌ಗಳು ಟಚ್ ಕಂಟ್ರೋಲ್ ಸಿಸ್ಟಮ್ ಅನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಅನ್ನು ಹೊರತೆಗೆಯದೆಯೆ ಕೇವಲ ಇಯರ್‌ಬಡ್ ಮೂಲಕವೇ ಪ್ಲೇ ಆಗುತ್ತಿರುವ ಸಂಗೀತವನ್ನು ಸ್ಟಾಪ್ ಮಾಡಬಹುದಾಗಿದೆ. ಅಲ್ಲದೆ ಕರೆಗಳಿಗೂ ಉತ್ತರಿಸಬಹುದಾಗಿದೆ. ಅಲ್ಲದೆ ಈ ಇಯರ್ ಬಡ್‌ಗಳು ಐಪಿಎಕ್ಸ್ 7ವಾಟರ್ ಪ್ರೂಪ್ ರೇಟ್ ಅನ್ನ ಹೊಂದಿದೆ. ಜೊತೆಗೆ ಹ್ಯಾಂಡ್ಸ್-ಫ್ರೀ ನಿಯಂತ್ರಣಕ್ಕಾಗಿ, ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಗೆ ಬೆಂಬಲ ನೀಡುವ ವೈಶಿಷ್ಟ್ಯ ವನ್ನು ಸಹ ಹೊಂದಿದೆ.

ನಾಯಿಸ್‌ಶಾಟ್ಸ್XO ಇಯರ್‌ಬಡ್ಸ್ 65 ಗ್ರಾಂ ತೂಕವನ್ನ ಹೊಂದಿದ್ದು, ಕ್ವಾಲ್ಕಾಮ್ ಆಪ್ಟಿಎಕ್ಸ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ, ಈ ಟೆಕ್ನಾಲಜಿಯಿಂದ ಆಡಿಯೊವನ್ನು ಸಂಕುಚಿತಗೊಳಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ ಬೆಲೆ 5499 ರೂ.ಆಗಿದ್ದು, ಕಂಪನಿಯ ಅಧಿಕೃತ ಇ-ಸ್ಟೋರ್, ಗೊನೊಯಿಸ್.ಕಾಮ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಾಣದಲ್ಲಿ ಖರೀದಿಗೆ ಲಭ್ಯವಿದ್ದು, ಒಂದು ವರ್ಷದ ವಾರೆಂಟಿಯ ಜೊತೆಗೆ ಸ್ಪೇಸ್ ಗ್ರೇ, ರೋಸ್ ಗೋಲ್ಡ್ ಮತ್ತು ಮೆಟಾಲಿಕ್ ವೈಟ್ ಕಲರ್‌ನ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190