ನಾಯ್ಸ್ ಥ್ರೀ ವಾಯರ್‌ಲೆಸ್ ಹೆಡ್‌ಫೋನ್ ಬಿಡುಗಡೆ! ಇದರ ವಿನ್ಯಾಸವೇ ವಿಭಿನ್ನ!
ನಾಯ್ಸ್ ಕಂಪೆನಿಯ ಹೆಡ್‌ಫೋನ್‌ಗಳಿಗೆ ಭಾರತದ ಯುವಜನತೆ ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ನಾಯ್ಸ್ ಸಂಸ್ಥೆಯ ಇಯರ್‌ಬಡ್ಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಇದನ್ನು ಗಮನಿಸಿರುವ ನಾಯ್ಸ್ ಕಂಪೆನಿ ಇದೀಗ ಭಾರತದಲ್ಲಿ ಹೊಸದಾಗಿ ನಾಯ್ಸ್ ಥ್ರೀ ವಾಯರ್‌ಲೆಸ್ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಹೌದು, ನಾಯ್ಸ್ ಥ್ರೀ ವಾಯರ್‌ಲೆಸ್ ಹೆಡ್‌ಫೋನ್ ಭಾರತದಲ್ಲಿ ಪರಿಚಯಿಸಿದೆ. ಈ ವಾಯರ್‌ಲೆಸ್ ಹೆಡ್‌ಫೋನ್ ನಯವಾದ ಮತ್ತು ಮಡಿಸಬಹುದಾದ ವಿನ್ಯಾಸವನ್ನು ಹೊಂದಿದೆ. ಇದು ಪ್ರಾಚೀನ ಆಡಿಯೊ ಸ್ಪಷ್ಟತೆಯನ್ನು ನೀಡಲು 40 ಎಂಎಂ ಡ್ರೈವರ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಹೆಡ್‌ಫೋನ್ 70 ಗಂಟೆಗಳವರೆಗೆ ಪ್ಲೇ ಬ್ಯಾಕ್ ಟೈಂ ಅನ್ನು ಒದಗಿಸಲಿದೆ. ಹಾಗಾದ್ರೆ ಈ ಹೆಡ್‌ಫೋನ್ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಥ್ರೀ ವಾಯರ್‌ಲೆಸ್ ಹೆಡ್‌ಫೋನ್ ಗೇಮಿಂಗ್ ಉತ್ಸಾಹಿಗಳಿಗೆ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಇದು ಲೋ ಲೇಟೆನ್ಸಿ ಗೇಮಿಂಗ್ ಮೋಡ್ ಅನ್ನು ಹೊಂದಿದ್ದು, ಕೇವಲ 45ms ರೆಸ್ಪಾನ್ಸ್ ಟೈಂ ನೊಂದಿಗೆ ಗೇಮಿಂಗ್ ಅನುಭವವನ್ನು ಹೆಚ್ಚಿಸಲಿದೆ. ಇದಲ್ಲದೆ, ಹೆಡ್‌ಫೋನ್ IPX5 ಸ್ಪ್ಲಾಶ್ ರೆಸಿಸ್ಟೆನ್ಸ್ ರೇಟಿಂಗ್ ಅನ್ನು ಹೊಂದಿದ್ದು, ಪ್ರಯಾಣದಲ್ಲಿರುವ ಬಳಕೆದಾರರಿಗೆ ಹೆಚ್ಚುವರಿ ಬಾಳಿಕೆಯನ್ನು ಒದಗಿಸಲಿದೆ.

ನಾಯ್ಸ್ ಥ್ರೀ ಹೆಡ್‌ಫೋನ್ 40 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಬ್ಲೂಟೂತ್ v5.3 ಅನ್ನು ಬೆಂಬಲಿಸಲಿದೆ. ಇದು 10 ಮೀ ವರೆಗಿನ ಕನೆಕ್ಟಿವಿಟಿ ರೇಂಜ್ ಅನ್ನು ನೀಡಲಿದೆ. ಜೊತೆಗೆ ಹೆಡ್‌ಫೋನ್ 70 ಗಂಟೆಗಳವರೆಗೆ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಇದನ್ನು ಮಡಿಸಬಹುದಾಗಿದ್ದು, ಡ್ಯುಯಲ್ ಡಿವೈಸ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದಲ್ಲದೆ ಹೆಡ್‌ಫೋನ್‌ನಲ್ಲಿ ಆಕ್ಸ್ ಔಟ್ ಲಭ್ಯವಿದೆ,

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ನಾಯ್ಸ್ ಥ್ರೀ ವಾಯರ್‌ಲೆಸ್ ಹೆಡ್‌ಫೋನ್ ಭಾರತದಲ್ಲಿ 1,999ರೂ ಗಳ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಜೆಟ್ ಬ್ಲ್ಯಾಕ್, ಸ್ಪೇಸ್ ಬ್ಲೂ ಮತ್ತು ಚಾಕೊಲೇಟ್ ಬ್ರೌನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಹೆಡ್‌ಫೋನ್ ಅನ್ನು ನಾಯ್ಸ್ ಸೈಟ್ ಮೂಲಕ TWS ಅನ್ನು ಖರೀದಿಸುವ ಮೊದಲ 500 ಗ್ರಾಹಕರು ರೂ.ಗಳ ರಿಯಾಯಿತಿಯನ್ನು ಪಡೆಯುತ್ತಾರೆ.
ಇದಲ್ಲದೆ ನಾಯ್ಸ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್ ರಿಂಗ್ ಲೂನಾ ರಿಂಗ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ರಿಂಗ್ ಕೇವಲ ಉಂಗುರ ಮಾತ್ರವಲ್ಲ ನಿಮ್ಮ ಹೃದಯ ಬಡಿತವನ್ನು ಕೂಡ ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ರಿಂಗ್ ಟೆಂಪ್‌ರೇಚರ್ ಅನ್ನು ಕೂಡ ಅಳೆಯುವ ಕ್ಯಾಪಾಸಿಟಿ ಪಡೆದಿದೆ. ನಾಯ್ಸ್ ಲೂನಾ ರಿಂಗ್ ತನ್ನ ಡಿಸೈನ್‌ನಿಂದಲೇ ಗಮನಸೆಳೆದಿದೆ. ಈ ಸ್ಮಾರ್ಟ್ ರಿಂಗ್ ಇನ್‌ಫ್ರಾರೆಡ್ ಫೋಟೋಪ್ಲೆಥಿಸ್ಮೋಗ್ರಫಿ (PPG) ಸೆನ್ಸಾರ್‌ಗಳು, ಸ್ಕಿನ್ ಟೆಂಪ್‌ರೇಚರ್ ಸೆನ್ಸಾರ್‌ಗಳು ಮತ್ತು 3 ಆಕ್ಸಿಸ್ ಅಕ್ಸಿಲೆರೊಮೀಟರ್‌ನಂತಹ ಅಡ್ವಾನ್ಸ್ ಸೆನ್ಸಾರ್‌ಗಳನ್ನು ಹೊಂದಿದೆ.
ಇದಲ್ಲದೆ ಬಳಕೆದಾರರು ಬೆರಳಿನಿಂದ ಆಪ್ಟಿಕಲ್ ಸೆನ್ಸಾರ್‌ಗಳ ಜೋಡಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಮೂರು ಉಬ್ಬುಗಳ ಜೊತೆಗೆ ಮೂರು ಎಲ್ಇಡಿಗಳು ಮತ್ತು ಎರಡು ಪಿಡಿಗಳನ್ನು ಸಂಯೋಜಿಸುವ ಆಪ್ಟೋಮೆಕಾನಿಕಲ್ ವಿನ್ಯಾಸವನ್ನು ಬಳಸಿದೆ. ಇನ್ನು ಈ ಲೂನಾ ರಿಂಗ್ 70 ಕ್ಕೂ ಹೆಚ್ಚು ಮೆಟ್ರಿಕ್‌ಗಳನ್ನು ಟ್ರ್ಯಾಕ್ ಮಾಡುತ್ತದೆ ಎಂದು ನಾಯ್ಸ್ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಸ್ಲಿಪ್, ರೆಡಿನೆಸ್ ಮತ್ತು ಆಕ್ಟಿವಿಟಿಯಲ್ಲಿ ಬಳಕೆದಾರರ ಸ್ಕೋರ್‌ಗಳನ್ನು ನೀಡಲಿದೆ.
ಜೊತೆಗೆ ಬಳಕೆದಾರರ ಮಾದರಿಗಳನ್ನು ವಿಶ್ಲೇಷಿಸುವ ಮತ್ತು ಸೂಕ್ತವಾದ ಶಿಫಾರಸುಗಳನ್ನು ನೀಡುವ ಆಕ್ಟಿವಿಟಿ ಟ್ರ್ಯಾಕರ್‌ಗಳೊಂದಿಗೆ ಬರಲಿದೆ. ಇದರೊಂದಿಗೆ ಲೂನಾ ರಿಂಗ್ ಬಾಡಿ ಟೆಂಪ್‌ರೇಚರ್ ಸೆನ್ಸಾರ್ ಹೊಂದಿದೆ. ಜೊತಗೆ ಹಾರ್ಟ್‌ಬೀಟ್ ಮಾನಿಟರ್ ಮತ್ತು ಬಳಕೆದಾರರ ಆರೋಗ್ಯವನ್ನು ಟ್ರ್ಯಾಕ್ ಮಾಡಲು SpO2 ಸೆನ್ಸಾರ್ ಅನ್ನು ಹೊಂದಿದೆ.


Click it and Unblock the Notifications








