Home
ಸುದ್ದಿಜಾಲ

Noise: ಅತಿ ಕಡಿಮೆ ಬೆಲೆಯಲ್ಲಿ ನಾಯ್ಸ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್‌ ಅನಾವರಣ!

ನಾಯ್ಸ್‌ ಸಂಸ್ಥೆಯ ಸ್ಮಾರ್ಟ್‌ವಾಚ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ಇದಕ್ಕೆ ಅನುಗುಣವಾಗಿ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಹೊಸದಾಗಿ ಮತ್ತೊಂದು ಸ್ಮಾರ್ಟ್‌ವಾಚ್ NoiseFit Vortex Plus ಅನ್ನು ಬಿಡುಗಡೆ ಮಾಡಿದೆ. ಇದು ಮೆಶ್ ಮೆಟಲ್, ಲೆದರ್ ಮತ್ತು ಸಿಲಿಕೋನ್ ಪಟ್ಟಿಗಳೊಂದಿಗೆ ಲಭ್ಯವಿದೆ.

ಹೌದು, NoiseFit Vortex Plus ಸ್ಮಾರ್ಟ್‌ವಾಚ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ ತನ್ನ ವಿಭಿನ್ನ ಶೈಲಿಯ ವಿನ್ಯಾಸದಿಂದ ಗ್ರಾಹಕರ ಗಮನಸೆಳೆದಿದೆ. ಇದು ಗ್ರಾಹಕರಿಗೆ ಹಲವಾರು ಆಯ್ಕೆಗಳನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ ಸ್ಪಷ್ಟ ಮತ್ತು ಪ್ರಕಾಶಮಾನವಾದ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸಲಿದೆ. ಹಾಗಾದ್ರೆ NoiseFit Vortex Plus ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅತಿ ಕಡಿಮೆ ಬೆಲೆಯಲ್ಲಿ ನಾಯ್ಸ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್‌ ಅನಾವರಣ!

NoiseFit Vortex Plus ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
NoiseFit Vortex Plus ಸ್ಮಾರ್ಟ್‌ವಾಚ್‌ 1.46 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಪಷ್ಟ ಮತ್ತು ಪ್ರಕಾಶಮಾನವಾದ ಯೂಸರ್‌ ಇಂಟರ್‌ಫೇಸ್ ಅನ್ನು ಒದಗಿಸಲಿದೆ. ಜೊತೆಗೆ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ಅನಿಮೇಟೆಡ್ ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ ನಾಯ್ಸ್ ಟ್ರೂ ಸಿಂಕ್ ಟೆಕ್ನಾಲಜಿಯನ್ನು ಹೊಂದಿರುವುದರಿಂದ ಬ್ಲೂಟೂತ್‌ ಕಾಲ್‌ ಅನ್ನು ಸುಗಮಗೊಳಿಸಲಿದೆ. ಇದು ತ್ವರಿತ ಜೋಡಣೆ ಮತ್ತು ಸಮರ್ಥ ವಿದ್ಯುತ್ ನಿರ್ವಹಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

NoiseFit Vortex Plus ಸ್ಮಾರ್ಟ್‌ವಾಚ್‌ ಹೆಲ್ತ್‌ ಟ್ರ್ಯಾಕಿಂಗ್ ಫೀಚರ್ಸ್‌ ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ 24×7 ಹೃದಯ ಬಡಿತ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್ ವಾಚ್‌ನಲ್ಲಿ ವಿವಿಧ ರೀತಿಯ ಸ್ಪೋರ್ಟ್ಸ್ ಮೋಡ್‌ಗಳನ್ನು ಸಹ ನೀಡಲಾಗಿದೆ. ಇವುಗಳು ಫೀಟ್ನೆಸ್‌ ಪ್ರಿಯರಿಗೆ ಸಾಕಷ್ಟು ಉಪಯುಕ್ತತೆ ನೀಡಲಿದೆ.

ಅತಿ ಕಡಿಮೆ ಬೆಲೆಯಲ್ಲಿ ನಾಯ್ಸ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್‌ ಅನಾವರಣ!

NoiseFit Vortex Plus ಸ್ಮಾರ್ಟ್‌ವಾಚ್‌ನ ಮೇನ್‌ ಹೈಲೈಟ್‌ ಎಂದರೆ ಇದರ ವಿನ್ಯಾಸ ಹಾಗೂ ಬ್ಯಾಟರಿ ಬಾಳಿಕೆ. ಇದು ಸ್ಟೈಲಿಶ್‌ ಲುಕ್‌ನಿಂದ ಮಾತ್ರವಲ್ಲ ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಅಂದರೆ ಬರೋಬ್ಬರಿ 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ನಾಯ್ಸ್‌ ಕಂಪೆನಿ ಹೇಳಿಕೊಂಡಿದೆ. ಇದರಿಂದ ನೀವು ಪದೇ ಪದೇ ಚಾರ್ಜ್ ಮಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಬೆಲೆ ಮತ್ತು ಲಭ್ಯತೆ
NoiseFit Vortex Plus ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,999ರೂ ಬೆಲೆಯಲ್ಲಿ ಎಂಟ್ರಿ ನೀಡಿದೆ. ಇದನ್ನು ವಿವಿಧ ಸ್ಟ್ರಾಪ್ ಪ್ರಕಾರಗಳಲ್ಲಿ ಬಹು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಇನ್ನು ಈ ಸ್ಮಾರ್ಟ್ ವಾಚ್ ಜನವರಿ 31 ರಿಂದ gonoise.com ಮತ್ತು Amazon.in ನಲ್ಲಿ ಮಾರಾಟವಾಗಲಿದೆ.

ಇದಲ್ಲದೆ ನಾಯ್ಸ್‌ ಸಂಸ್ಥೆ ಇತ್ತೀಚಿಗೆ ಭಾರತದಲ್ಲಿ ನಾಯ್ಸ್ (Noise ) ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ವಾಚ್‌ 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ ಆಲ್‌ವೇಸ್‌ ಆನ್ ಫೀಚರ್ಸ್‌ ಹೊಂದಿದ್ದು ಸಮಯ ಮತ್ತು ಅಧಿಸೂಚನೆಗಳನ್ನು ತ್ವರಿತವಾಗಿ ಪರಿಶೀಲಿಸಲು ಸುಲಭಗೊಳಿಸುತ್ತದೆ. ಇದರ ಮತ್ತೊಂದು ವಿಶೇಷತೆ ಎಂದರೆ 'ಆರ್ಕ್ ವ್ಯೂ' ಡಿಸ್‌ಪ್ಲೇಯನ್ನು ಹೊಂದಿರುವುದು.

ಇನ್ನು ಈ ಸ್ಮಾರ್ಟ್ ವಾಚ್ ಬಳಕೆದಾರರಿಗೆ 100ಕ್ಕೂ ಹೆಚ್ಚು ಆಯ್ಕೆಗಳೊಂದಿಗೆ ವಾಚ್ ಫೇಸ್‌ಗಳನ್ನು ಹೊಂದಿದೆ. ಇನ್ನು ಕಲರ್‌ಫಿಟ್ ಹೆಕ್ಸಾ ಸ್ಮಾರ್ಟ್‌ವಾಚ್‌ ಚೌಕಾಕಾರದ ಮುಂಭಾಗ ಮತ್ತು ಸರಾಗವಾಗಿ ಬಾಗಿದ ದೇಹದಿಂದ ಎದ್ದು ಕಾಣಲಿದೆ. ಇದು ನಿಮ್ಮ ವಾಚ್‌ ಪೇಸ್‌ ಲುಕ್‌ ಅನ್ನು ಬದಲಾಯಿಸುವುದಕ್ಕೆ ಅನುಮತಿಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಾವು ಇಷ್ಟಪಡುವ ಶೈಲಿಯ ವಾಚ್‌ಫೇಸ್‌ ಅನ್ನು ಆಯ್ಕೆ ಮಾಡಬಹುದಾಗಿದೆ.

Best Mobiles in India

English summary
Noise Vortex Plus smartwatch 1.46 AMOLED display & BT calling launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+