ನಾಯ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ! eSIMಗೆ ನೀಡಲಿದೆ ಬೆಂಬಲ!
ನಾಯ್ಸ್ ಕಂಪೆನಿ ಭಾರತದಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಭಾರತದಲ್ಲಿ ತನ್ನ ಮೊದಲ eSIM-ಸಕ್ರಿಯಗೊಳಿಸಿದ ಸ್ಮಾರ್ಟ್ ವಾಚ್ ಅನ್ನು ಅನಾವರಣಗೊಳಿಸಿದೆ. ಇದನ್ನು ನಾಯ್ಸ್ ವಾಯೇಜ್ ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ boAt ಸಂಸ್ಥೆಯ Lunar Pro LTE ಸ್ಮಾರ್ಟ್‌ವಾಚ್ ಗೆ ಪೈಪೋಟಿ ನೀಡಲಿದೆ.
ಹೌದು, ನಾಯ್ಸ್ ಕಂಪೆನಿ ಹೊಸದಾಗಿ ನಾಯ್ಸ್ ವಾಯೇಜ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಇದು ಇ-ಸಿಮ್ ಆಕ್ಟಿವ್ ಮಾಡಿರುವ ಸ್ಮಾರ್ಟ್‌ವಾಚ್ ಆಗಿದ್ದಯ, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದು ಏರ್‌ಟೆಲ್ ಮತ್ತು ಜಿಯೋ ಇಸಿಮ್‌ಗಳಿಗೆ ಹೊಂದಿಕೆಯಾಗಲಿದೆ. ಜೊತೆಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ಸಹ ನೀಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ವಾಯೇಜ್ ಫೀಚರ್ಸ್ ಹೇಗಿದೆ?
ನಾಯ್ಸ್ ವಾಯೇಜ್ ಸ್ಮಾರ್ಟ್‌ವಾಚ್ 1.4-ಇಂಚಿನ ರೆಟಿನಾ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 454 x 454 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆಇದೆ. ಇದು ಮೆಟಾಲಿಕ್ ಬಿಲ್ಡ್ ಮತ್ತು ಬಲಭಾಗದಲ್ಲಿ ಎರಡು ಬಟನ್‌ಗಳನ್ನು ಹೊಂದಿರುವ ವೃತ್ತಾಕಾರದ ಸ್ಮಾರ್ಟ್‌ವಾಚ್ ಆಗಿದೆ. ಇದರಲ್ಲಿ ಸ್ಟೇನ್ ಲೆಸ್ ಸ್ಟೀಲ್ ರೌಂಡ್ ಬೆಜೆಲ್ ಕೂಡ ನೀಡಲಾಗಿದೆ.
ಇನ್ನು ಸ್ಮಾರ್ಟ್‌ವಾಚ್ ಹೆಲ್ತ್ ಫೀಚರ್ಸ್‌ಗಳಲ್ಲಿ ಅತ್ಯುತ್ತಮ ಆಯ್ಕೆಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ನಿದ್ರೆ ಮತ್ತು ಒತ್ತಡ ಟ್ರ್ಯಾಕರ್ ಅನ್ನು ನೀಡಲಾಗಿದೆ. ಅಲ್ಲದೆ ಕೆಲವು ತಾಲೀಮು ಚಟುವಟಿಕೆಗಳಿಗೆ ಆಟೋ ಡಿಟೆಕ್ಷನ್ ಜೊತೆಗೆ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳಿಗೆ ಬೆಂಬಲವನ್ನು ಒದಗಿಸಲಿದೆ. ಅಲ್ಲದೆ ಹೊರಾಂಗಣ ವ್ಯಾಯಾಮದ ಸಮಯದಲ್ಲಿ ನಿಖರವಾದ ಸ್ಥಾನವನ್ನು ಪತ್ತೆಹಚ್ಚಲು GPS ಮತ್ತು GLONASS ಅನ್ನು ಸಹ ಹೊಂದಿದೆ.

ಇದಲ್ಲದೆ ನಾಯ್ಸ್ ವಾಯೇಜ್ ಇ-ಸಿಮ್ ಬೆಂಬಲವನ್ನು ಹೊಂದಿದ್ದು, ಏರ್‌ಟೆಲ್ ಮತ್ತು ಜಿಯೋ ಇಸಿಮ್‌ಗಳನ್ನು ಬೆಂಬಲಿಸಲಿದೆ. ಇದು 3 ತಿಂಗಳ ಉಚಿತ 4G ಕರೆಯನ್ನು ನೀಡಲಿದೆ. ಇದು ಕನೆಕ್ಟ್ ಆಗಿರುವ ಸ್ಮಾರ್ಟ್‌ಫೋನ್‌ನೊಂದಿಗಿನ ಬ್ಲೂಟೂತ್ ಕಾಲ್‌ಗಿಂತ ವಾಚ್ ಮೂಲಕವೇ ಕಾಲ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಹೆಚ್ಚುವರಿಯಾಗಿ, ಈ ವಾಚ್ ಅನ್ನು ನಾಯ್ಸ್ ಏರ್ ಮತ್ತು ಔರಾ ಬಡ್ಸ್‌ನಂತಹ ಇಯರ್‌ಫೋನ್‌ಗಳಿಗೆ ವಾಚ್ ಅನ್ನು ಕನೆಕ್ಟ್ ಮಾಡಬಹುದು.
ನಾಯ್ಸ್ ವಾಯೇಜ್ ವಿಶಿಷ್ಟ ಬಳಕೆಯ ಅಡಿಯಲ್ಲಿ 7 ದಿನಗಳ ಬ್ಯಾಟರಿ ಅವಧಿಯನ್ನು ಮತ್ತು ವಿದ್ಯುತ್ ಉಳಿತಾಯ ಮೋಡ್‌ನೊಂದಿಗೆ 30 ದಿನಗಳವರೆಗೆ ನೀಡುತ್ತದೆ ಎಂದು ಹೇಳಲಾಗಿದೆ. ಇದು ಹವಾಮಾನ ನವೀಕರಣಗಳು, ಕ್ಯಾಲ್ಕುಲೇಟರ್, ತ್ವರಿತ ಪ್ರತ್ಯುತ್ತರಗಳು ಮತ್ತು ಹೆಚ್ಚಿನವುಗಳಂತಹ ವಿವಿಧ ಅನುಕೂಲಕರ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡುತ್ತದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ನಾಯ್ಸ್ ವಾಯೇಜ್ ಸ್ಮಾರ್ಟ್‌ವಾಚ್ ಭಾರತದಲ್ಲಿ 999ರೂ ಗಳಿಗೆ ಮುಂಗಡ ಬುಕಿಂಗ್‌ಗೆ ಸಿದ್ಧವಾಗಿದೆ. ಇದು ಪಾಸ್ ಸ್ಮಾರ್ಟ್ ವಾಚ್‌ನಲ್ಲಿ 1,500ರೂ ರಿಯಾಯಿತಿ ಪಡೆದಿದೆ. ಆದರೆ ಈ ಸ್ಮಾರ್ಟ್‌ವಾಚ್‌ನ ನಿಖರವಾದ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಈ ಸ್ಮಾರ್ಟ್ ವಾಚ್ ಇದೇ ಡಿಸೆಂಬರ್ 23 ರಿಂದ ಖರೀದಿಗೆ ಲಭ್ಯವಿರುತ್ತದೆ.
ಇನ್ನು ಇದೇ ವರ್ಷ ನಾಯ್ಸ್ ಕಂಪೆನಿ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್ ರಿಂಗ್ ಲೂನಾ ರಿಂಗ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ ರಿಂಗ್ ಕೇವಲ ಉಂಗುರ ಮಾತ್ರವಲ್ಲ ನಿಮ್ಮ ಹೃದಯ ಬಡಿತವನ್ನು ಕೂಡ ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ರಿಂಗ್ ಟೆಂಪ್‌ರೇಚರ್ ಅನ್ನು ಕೂಡ ಅಳೆಯುವ ಕ್ಯಾಪಾಸಿಟಿ ಪಡೆದಿದೆ.


Click it and Unblock the Notifications








