Home
ಸುದ್ದಿಜಾಲ

ಮಹಿಳೆಯರಿಗಾಗಿಯೇ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ನಾಯ್ಸ್‌! ವಿನ್ಯಾಸ ಹೇಗಿದೆ?

ನಾಯ್ಸ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಇದಕ್ಕೆ ಅನುಗುಣವಾಗಿ ನಾಯ್ಸ್‌ ಕಂಪೆನಿ ಕೂಡ ವಿಶೇಷ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಂತೆ ಇದೀಗ ಹೊಸ ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಮಹಿಳಾ ಕೇಂದ್ರಿತ ಸ್ಮಾರ್ಟ್‌ವಾಚ್‌ ಎಂದು ಹೇಳಲಾಗಿದೆ.

ಹೌದು, ನಾಯ್ಸ್‌ ಕಂಪೆನಿ ಮಹಿಳೆಯರಿಗಾಗಿಯೇ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಮೋಡ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಕಸ್ಟ್‌ಮೈಸ್ಡ್‌ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಹಿಳೆಯರಿಗಾಗಿಯೇ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ನಾಯ್ಸ್‌! ವಿನ್ಯಾಸ ಹೇಗಿದೆ?

ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ ಫೀಚರ್ಸ್‌
ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ ಮಹಿಳಾ ಕೇಂದ್ರಿತ ಸ್ಮಾರ್ಟ್‌ವಾಚ್‌ ಎನಿಸಿಕೊಂಡಿದೆ. ಇದು ವೃತ್ತಾಕಾರದ ಡಯಲ್ ಮತ್ತು ಬಲಭಾಗದಲ್ಲಿ ತಿರುಗುವ ಕಿರೀಟವನ್ನು ಹೊಂದಿದ್ದು, ವಿಭಿನ್ನ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ವಾಚ್‌ 1.1 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 360 x 360 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಮೋಡ್‌ ಅನ್ನು ಒಳಗೊಂಡಿದೆ.

ಇನ್ನು ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುವುದಕ್ಕಾಗಿ IP67 ಪ್ರಮಾಣೀಕೃತ ರೇಟಿಂಗ್‌ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಹಲವು ಆಕರ್ಷಕ ಹೆಲ್ತ್‌ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದು ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್ ಅನ್ನು ಹೊಂದಿದೆ. ಜೊತೆಗೆ ಸ್ಲಿಪಿಂಗ್‌ ಮಾನಿಟರ್‌ ಮತ್ತು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಉಸಿರಾಟದ ಅಭ್ಯಾಸದ ಅವಧಿಗಳನ್ನು ಸಹ ನೀಡುತ್ತದೆ. ಇದಲ್ಲದೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ಹೊಂದಿದೆ.

ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫಂಕ್ಷನ್‌ ಒಳಗೊಂಡಿದ್ದು, AI ವಾಯ್ಸ್‌ ಅಸಿಸ್ಟೆಂಟ್‌ನೊಂದಿಗೆ ಬರಲಿದೆ. ಜೊತೆಗೆ ಬಳಕೆದಾರರು ಕರೆ ಲಾಗ್‌ಗಳನ್ನು ಪ್ರವೇಶಿಸುವುದಕ್ಕೆ ಕೂಡ ಇದರಲ್ಲಿ ಅವಕಾಶ ನೀಡಲಾಗಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ಒಟ್ಟು 12 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಕ್ಕೆ ಸಾಧ್ಯವಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ಡೈಲಿ ರಿಮೈಂಡರ್‌, ವೆದರ್‌ ಅಪ್ಡೇಟ್‌, ಅಂತರ್ನಿರ್ಮಿತ ಕ್ಯಾಲೆಂಡರ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇದು 4 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಮಹಿಳೆಯರಿಗಾಗಿಯೇ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ನಾಯ್ಸ್‌! ವಿನ್ಯಾಸ ಹೇಗಿದೆ?

ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ. ಇದನ್ನು ರೋಸ್ ಪಿಂಕ್, ಪರ್ಲ್ ವೈಟ್, ಬ್ಲ್ಯಾಕ್ ಲಿಂಕ್, ಸಿಲ್ವರ್ ಲಿಂಕ್ ಮತ್ತು ಗೋಲ್ಡ್ ಲಿಂಕ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಅನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ ಮೂಲಕ ಖರೀದಿಸಬಹುದು.

ಇದಲ್ಲದೆ ಇತ್ತೀಚಿಗೆ ನಾಯ್ಸ್‌ಕಂಪೆನಿ ಹೊಸ ನಾಯ್ಸ್‌ಫಿಟ್‌ ಟ್ವಿಸ್ಟ್‌ ಪ್ರೊ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 1.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ಸಿಲಿಕೋನ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳನ್ನು ಹೊಂದಿದ್ದು, ವಾಚ್‌ ಎರಡು ಫಿಸಿಕಲ್ ಸೈಡ್ ಬಟನ್‌ಗಳನ್ನು ಹೊಂದಿದೆ.

ಇದು 'ಟ್ರೂ ಸಿಂಕ್' ಟೆಕ್ನಾಲಜಿಯನ್ನು ಹೊಂದಿರುವ ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ. ಇದರಿಂದ ಬಳಕೆದಾರರು ವಾಚ್‌ನಿಂದ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ರನ್ನಿಂಗ್‌, ಸೈಕ್ಲಿಂಗ್ ಮತ್ತು ಟ್ರೆಕ್ಕಿಂಗ್ ಸೇರಿದಂತೆ 120 ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹೆಲ್ತ್‌ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

Best Mobiles in India

English summary
NoiseFit Diva Women-Centric Smartwatch Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+