ಭಾರತಕ್ಕೆ ಎಂಟ್ರಿ ಕೊಟ್ಟ NoiseFit Twist Go ಸ್ಮಾರ್ಟ್‌ವಾಚ್: ಬೆಲೆ ಎಷ್ಟು?
ಸ್ಮಾರ್ಟ್‌ವಾಚ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ನಾಯ್ಸ್ ಕಂಪೆನಿ ಮತ್ತೊಂದು ವಾಚ್ ಬಿಡುಗಡೆ ಮಾಡಿದೆ. ಇದನ್ನು NoiseFit ಟ್ವಿಸ್ಟ್ ಗೋ ಎಂದು ಹೆಸರಿಸಲಾಗಿದೆ. ಇದು 1,500ರೂ ವಿಭಾಗದ ಅಡಿಯಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಈ ವಾಚ್ ನಯವಾದ ವಿನ್ಯಾಸ ಮತ್ತು ಸ್ಟೈಲಿಶ್ ಲುಕ್ ಅನ್ನು ಒಳಗೊಂಡಿದೆ.
ಹೌದು, NoiseFit Twist Go ಸ್ಮಾರ್ಟ್‌ವಾಚ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದ್ದು, ವೃತ್ತಾಕಾರದ ಡಯಲ್ ಅನ್ನು ಹೊಂದಿದೆ. ಇದು IP68 ರೇಟಿಂಗ್‌ನಿಂದಾಗಿ ಧೂಳು ಮತ್ತು ನೀರು-ನಿರೋಧಕವಾಗಿದೆ. ಇದನ್ನು ಮೆಟಾಲಿಕ್, ಮೆಶ್ ಮತ್ತು ಸಿಲಿಕೋನ್ ಸ್ಟ್ರಾಪ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

NoiseFit Twist Go ಸ್ಮಾರ್ಟ್‌ವಾಚ್ 1.39 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು HD TFT LCD ಸ್ಕ್ರೀನ್ ಹೊಂದಿದ್ದು, 2.5D ಕರ್ವ್ಡ್ ಗ್ಲಾಸ್ ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನದೊಂದಿಗೆ ಬ್ಲೂಟೂತ್ ಕರೆಯನ್ನು ಬೆಂಬಲಿಸಲಿದೆ. ಇದು ಡಯಲ್ ಪ್ಯಾಡ್, ಇತ್ತೀಚಿನ ಕರೆ ಇತಿಹಾಸವನ್ನು ಹೊಂದಿದ್ದು, ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ಗಳನ್ನು ಒಳಗೊಂಡಿದೆ.
NoiseFit Twist Go ಸ್ಮಾರ್ಟ್‌ವಾಚ್ NoiseFit ಅಪ್ಲಿಕೇಶನ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಈ ವಾಚ್ 100+ ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳನ್ನು ಹೊಂದಿದೆ. ಇದಲ್ಲದೆ ಸಾಕಷ್ಟು ಅನುಕೂಲಕರ ಹೆಲ್ತ್ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ 24×7 ಹೃದಯ ಬಡಿತ ಮಾನಿಟರಿಂಗ್, SpO2, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ, ಸ್ತ್ರೀ ಸೈಕಲ್ ಟ್ರ್ಯಾಕರ್, ಮತ್ತು ಉಸಿರಾಟದ ಅಭ್ಯಾಸದಂತಹ ಫೀಚರ್ಸ್‌ಗಳನ್ನು ಹೊಂದಿದೆ.
ಇನ್ನು NoiseFit Twist Go ಸ್ಮಾರ್ಟ್‌ವಾಚ್ 100+ ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಿದೆ. ಇದು ವಾಯ್ಸ್ ಅಸಿಸ್ಟೆಂಟ್ ಬೆಂಬಲಿಸಲಿದ್ದು, IP68 ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿದೆ. ಇದಲ್ಲದೆ ಅಧಿಸೂಚನೆ ಪ್ರದರ್ಶನ, ಹವಾಮಾನ ನವೀಕರಣಗಳು, ಜ್ಞಾಪನೆಗಳು, ಅಲಾರ್ಮ್, ಕ್ಯಾಮರಾ ನಿಯಂತ್ರಣ, ಸಂಗೀತ ನಿಯಂತ್ರಣ, ಕ್ಯಾಲ್ಕುಲೇಟರ್ ಅನ್ನು ಒಳಗೊಂಡಿದೆ. ಜೊತೆಗೆ ಹ್ಯಾಂಡ್ಸ್-ಫ್ರೀ ಬ್ಲೂಟೂತ್ ಕಾಲ್ ಫಂಕ್ಷನ್‌ಗಾಗಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ.

ಭಾರತದಲ್ಲಿ NoiseFit Twist Go ಸ್ಮಾರ್ಟ್‌ವಾಚ್ 1,199ರೂ. ಬೆಲೆಯನ್ನು ಹೊಂದಿದೆ. ಇದನ್ನು ಸಿಲ್ವರ್ ಗ್ರೇ, ಜೆಟ್ ಬ್ಲಾಕ್, ರೋಸ್ ಪಿಂಕ್, ಸಿಲ್ವರ್ ಲಿಂಕ್, ಗೋಲ್ಡ್ ಲಿಂಕ್, ಬ್ಲ್ಯಾಕ್ ಲಿಂಕ್, ಎಲೈಟ್ ಸಿಲ್ವರ್ ಮತ್ತು ಎಲೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ವಾಚ್ ಅಮೆಜಾನ್ ಮತ್ತು ಬ್ರ್ಯಾಂಡ್‌ನ ವೆಬ್‌ಸೈಟ್‌ನಿಂದ ಖರೀದಿಗೆ ಲಭ್ಯವಾಗಲಿದೆ.
ಇನ್ನು ಇತ್ತೀಚಿಗೆ ನಾಯ್ಸ್ ಕಂಪೆನಿ ಭಾರತದಲ್ಲಿ ನಾಯ್ಸ್ ಬಡ್ಸ್ N1 ಇಯರ್‌ಬಡ್ಸ್ ಪರಿಚಯಿಸಿದೆ. ಇದು ಇನ್-ಇಯರ್ ವಿನ್ಯಾಸ ಮತ್ತು ಶೈನಿ ಫಿನಿಶ್ ಅನ್ನು ಹೊಂದಿದೆ. ಇದು ಇಎನ್‌ಸಿ ಕ್ವಾಡ್ ಮೈಕ್ರೊಫೋನ್ ಸೆಟಪ್ ಅನ್ನು ಒಳಗೊಂಡಿದೆ. ಜೊತೆಗೆ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ. ಇನ್ನು ನಾಯ್ಸ್ ಬಡ್ಸ್ N1 ಮೊಬೈಲ್ ಗೇಮರ್‌ಗಳಿಗೆ ಅತ್ಯಗತ್ಯವಾಗಿರುವ 40ms ನ ಕಡಿಮೆ ಲೇಟೆನ್ಸಿ ಮೋಡ್ ಅನ್ನು ನೀಡುತ್ತದೆ. ಇನ್ನು ಈ ಇಯರ್‌ಬಡ್ಸ್‌ಗಳ ಬಾಡಿ ಟಚ್ ಕಂಟ್ರೋಲ್ ಫಂಕ್ಷನ್ ಅನ್ನು ಸಹ ಹೊಂದಿದೆ.
ಇದು ಸಿಂಗಲ್ ಚಾರ್ಜ್‌ನಲ್ಲಿ ಚಾರ್ಜಿಂಗ್ ಕೇಸ್‌ನೊಂದಿಗೆ 40 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಿಂದ 2 ಗಂಟೆಗಳವರೆಗೆ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇದಕ್ಕಾಗಿ ಬ್ರ್ಯಾಂಡ್ ಇನ್‌ಸ್ಟಾಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್ ಇನ್-ಇಯರ್ ವಿನ್ಯಾಸ ಮತ್ತು ಶೈನಿ ಫಿನಿಶ್ ಹೊಂದಿರುವುದರಿಂದ ಯುವಕರ ಗಮನಸೆಳೆದಿದೆ. ಇದು ಇಎನ್‌ಸಿ ಕ್ವಾಡ್ ಮೈಕ್ರೊಫೋನ್ ಸೆಟಪ್‌ನೊಂದಿಗೆ ಬರಲಿದ್ದು, ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ.


Click it and Unblock the Notifications








