Home
ಸುದ್ದಿಜಾಲ

ನೋಕಿಯಾದಿಂದ ಅಚ್ಚರಿಯ ಫೋನ್‌ ಲಾಂಚ್‌! ಏನಿದು UPI 123PAY ವ್ಯವಸ್ಥೆ!

ನೋಕಿಯಾ ಕಂಪೆನಿ ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರ್ಯಾಂಡ್‌ ಎಂದೇ ಖ್ಯಾತಿ ಪಡೆದಿದೆ. ಸ್ಮಾರ್ಟ್‌ಫೋನ್‌ಗಳ ಭರಾಟೆಯ ನಡುವೆಯೂ ತನ್ನ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಭಾರತದಲ್ಲಿ ನೋಕಿಯಾ ಎರಡು ಹೊಸ ಫೀಚರ್‌ ಫೋನ್‌ಗಳನ್ನು ಪರಿಚಯಿಸಿದೆ. ಈ ಫೋನ್‌ಗಳು ಯುಪಿಐ ಪಾವತಿ ವ್ಯವಸ್ಥೆಯನ್ನು ಬೆಂಬಲಿಸಲಿವೆ.

ಹೌದು, ಭಾರತದಲ್ಲಿ ನೋಕಿಯಾ ಕಂಪೆನಿ ಹೊಸದಾಗಿ ನೋಕಿಯಾ 106 4G ಮತ್ತು ನೋಕಿಯಾ 105 (2023) ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳು ಲಾಂಗ್‌ ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ UPI 123PAY ವ್ಯವಸ್ಥೆಯನ್ನು ಒಳಗೊಂಡಿವೆ. ಇದರಿಂದ ಫೀಚರ್‌ ಫೋನ್‌ ಮೂಲಕವೂ ನೀವು ಯುಪಿಐ ಮೂಲಕ ಹಣ ಪಾವತಿ ಮಾಡಲು ಸಾದ್ಯವಾಗಲಿದೆ. ಹಾಗಾದ್ರೆ ಈ ಎರಡು ಫೀಚರ್‌ ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾದಿಂದ ಅಚ್ಚರಿಯ ಫೋನ್‌ ಲಾಂಚ್‌! ಏನಿದು UPI 123PAY ವ್ಯವಸ್ಥೆ!

ನೋಕಿಯಾ 105 (2023) ವಿಶೇಷತೆ ಏನು?

ನೋಕಿಯಾ 105 (2023) ಫೋನ್‌ ನ್ಯಾನೊ ವಿನ್ಯಾಸವನ್ನು ಹೊಂದಿದ್ದು, 1.8 ಇಂಚಿನ QQVGA ಡಿಸ್‌ಪ್ಲೇಯೊಂದಿಗೆ ಬರಲಿದೆ. ಇನ್ನು ಫೋನ್‌ IP52 ಧೂಳು ಮತ್ತು ವಾಟರ್‌ ರೆಸಿಸ್ಟೆನ್ಸಿಯನ್ನು ಪಡೆದಿದೆ. ಇದು ಕಂಪನಿಯ S30+ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 1,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 22 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಅಲ್ಲದೆ 12 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಫೋನ್‌ 2,000 ಸಂಪರ್ಕಗಳನ್ನು ಮತ್ತು 500 SMS ಸ್ಟೋರೇಜ್‌ ಮಾಡುವುದಕ್ಕೆ ಅವಕಾಶವಿದೆ.

ನೋಕಿಯಾದಿಂದ ಅಚ್ಚರಿಯ ಫೋನ್‌ ಲಾಂಚ್‌! ಏನಿದು UPI 123PAY ವ್ಯವಸ್ಥೆ!

ನೋಕಿಯಾ 106 4G ವಿಶೇಷತೆ ಏನು?

ನೋಕಿಯಾ 106 4G ಮೊಬೈಲ್‌ 1.8 ಇಂಚಿನ QQVGA ಡಿಸ್‌ಪ್ಲೇ ಹೊಂದಿದೆ. ಇದು ಕಂಪನಿಯ S30+ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ, ಇನ್ನು ಮೊಬೈಲ್‌ 1,450mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದ್ದು, 22 ದಿನಗಳ ಸ್ಟ್ಯಾಂಡ್‌ಬೈ ಟೈಂ ಮತ್ತು 12 ಗಂಟೆಗಳ ಟಾಕ್ ಟೈಮ್ ಅನ್ನು ನೀಡಲಿದೆ. ಜೊತೆಗೆ ಮೊಬೈಲ್‌ 32GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದು, ಮೈಕ್ರೊ SD ಕಾರ್ಡ್‌ಗೆ ಬೆಂಬಲವನ್ನು ನೀಡಲಿದೆ. ಹೆಚ್ಚುವರಿಯಾಗಿ, ಇನ್‌ಬಿಲ್ಟ್‌ MP3 ಪ್ಲೇಯರ್ ಅನ್ನು ಹೊಂದಿದೆ.

ನೋಕಿಯಾದಿಂದ ಅಚ್ಚರಿಯ ಫೋನ್‌ ಲಾಂಚ್‌! ಏನಿದು UPI 123PAY ವ್ಯವಸ್ಥೆ!

UPI 123PAY ಕಾರ್ಯನಿರ್ವಹಣೆ ಹೇಗೆ?

ಈ ಎರಡೂ ಫೋನ್‌ಗಳು ಇನ್‌ಬಿಲ್ಟ್‌ UPI 123PAY ಕಾರ್ಯನಿರ್ವಹಣೆಯನ್ನು ಹೊಂದಿದೆ ಎಂದು ನೋಕಿಯಾ ಕಂಪೆನಿ ಹೇಳಿದೆ. ಇದರಿಂದ ಸ್ಮಾರ್ಟ್‌ಫೋನ್ ಇಲ್ಲದೆಯೇ ಡಿಜಿಟಲ್ ವಹಿವಾಟುಗಳನ್ನು ನಡೆಸಲು ಇದರಿಂದ ಅವಕಾಶ ಸಿಗಲಿದೆ. ಅಂದರೆ ನೋಕಿಯಾದ ಈ ಫೀಚರ್ ಫೋನ್‌ಗಳಲ್ಲಿ ಯುಪಿಐ ಅಪ್ಲಿಕೇಶನ್‌ಗಳಲ್ಲಿದೆಯೆ UPI 123PAY ಫೀಚರ್ಸ್‌ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸಬಹುದಾಗಿದೆ.

ಇನ್ನು UPI 123PAY ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪಾವತಿ ಸೇವೆಯನ್ನು ಸುರಕ್ಷಿತ ರೀತಿಯಲ್ಲಿ ಬಳಸಬಹುದಾದ ಫೀಚರ್‌ ಫೋನ್‌ ವ್ಯವಸ್ಥೆಯಾಗಿದೆ. ಇದನ್ನು ಫೀಚರ್‌ ಫೋನ್‌ಗಳಿಗಾಗಿ NPCI ಪರಿಚಯಿಸಿರುವ ವ್ಯವಸ್ಥೆಯಾಗಿದೆ. ಅದರಂತೆ ಫೀಚರ್ ಫೋನ್ ಬಳಕೆದಾರರು IVR (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಸಂಖ್ಯೆಗೆ ಕರೆ ಮಾಡುವುದು, ಮಿಸ್ಡ್ ಕಾಲ್-ನಂತಹ ನಾಲ್ಕು ತಂತ್ರಜ್ಞಾನ ಪರ್ಯಾಯಗಳ ಆಧಾರದ ಮೇಲೆ ಹಲವಾರು ವಹಿವಾಟುಗಳನ್ನು ಕೈಗೊಳ್ಳಲು ಅವಕಾಶ ನೀಡಲಿದೆ.

ನೋಕಿಯಾದಿಂದ ಅಚ್ಚರಿಯ ಫೋನ್‌ ಲಾಂಚ್‌! ಏನಿದು UPI 123PAY ವ್ಯವಸ್ಥೆ!

ನೋಕಿಯಾ 105 (2023) ಮತ್ತು ನೋಕಿಯಾ 106 4G ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನೋಕಿಯಾ 105 (2023) ಮೊಬೈಲ್‌ 1,299ರೂ. ಬೆಲೆಯನ್ನು ಹೊಂದಿದೆ. ಇನ್ನು ನೋಕಿಯಾ 106 4G ಮೊಬೈಲ್‌ 2,199ರೂ. ಬೆಲೆಯನ್ನು ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಇವುಗಳನ್ನು ಚಾರ್ಕೋಲ್, ಸಯಾನ್ ಮತ್ತು ರೆಡ್ ಮತ್ತು ಬ್ಲೂ ಬಣ್ಣದ ರೂಪಾಂತರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Nokia 105 (2023) and Nokia 106 4G with built-in UPI launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+