ನೋಕಿಯಾದಿಂದ ಹೊಸ ಹ್ಯಾಂಡ್‌ಸೆಟ್ ಬಿಡುಗಡೆ! ವಿದ್ಯಾರ್ಥಿಗಳೇ ಇದರ ಟಾರ್ಗೆಟ್!
ನೋಕಿಯಾ ಕಂಪೆನಿ ಅಂದಿಗೂ ಇಂದಿಗೂ ಮೊಬೈಲ್ ಮಾರುಕಟ್ಟೆಯ ಎವರ್‌ಗ್ರೀನ್ ಬ್ರ್ಯಾಂಡ್ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ಗಳ ಭರಾಟೆಯ ನಡುವೆಯೂ ನೋಕಿಯಾ ತನ್ನ ಫೀಚರ್ ಫೋನ್‌ಗಳ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ. ಇದಕ್ಕೆ ಪೂರಕವೆಂಬಂತೆ ಇದೀಗ ತನ್ನ ಹೊಸ ನೋಕಿಯಾ 105 4G (2023) ಫೋನ್ ಅನ್ನು ಬಿಡುಗಡೆ ಮಾಡಿದೆ.
ಹೌದು, ನೋಕಿಯಾ 105 4G (2023) ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು Alipay ಅನ್ನು ಬೆಂಬಲಿಸುವ ಕ್ಲಾಸಿಕ್ ಕ್ಯಾಂಡಿ ಬಾರ್ ವಿನ್ಯಾಸವನ್ನು ಹೊಂದಿರುವ ಮೊಬೈಲ್ ಫೋನ್ ಆಗಿದೆ. ಇನ್ನು ಈ ಫೀಚರ್ ಫೋನ್ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಫೀಚರ್ ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ 105 4G (2023) ಫೋನ್ ಕ್ಲಾಸಿಕ್ ಕ್ಯಾಂಡಿ ಬಾರ್ ವಿನ್ಯಾಸವನ್ನು ಪಡೆದಿದೆ. ಈ ಫೋನ್ ವಿದ್ಯಾರ್ಥಿಗಳು ಮತ್ತು ಬ್ಯಾಕಪ್ ಫೋನ್ ಅಗತ್ಯವಿರುವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಇನ್ನು ನೋಕಿಯಾ 105 4G (2023) ಫೋನ್ HIA ಫೀಚರ್ಸ್ ಅನ್ನು ಹೊಂದಿದೆ. ಇದರಲ್ಲಿ ನೀವು ರೈಟ್ ಕ್ಲಿಕ್ ಮಾಡುವ ಮೂಲಕ Alipayಗೆ ತ್ವರಿತ ಪ್ರವೇಶವನ್ನು ಪಡೆಯಬಹುದಾಗಿದೆ. ಅಂದರೆ ಈ ಫೀಚರ್ ಫೋನ್‌ನಲ್ಲಿ ನೀವು ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ನೋಕಿಯಾ 105 4G (2023) ಫೋನ್ UNISOC ನ T107 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ 32GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಫೋನ್ ಡ್ಯುಯಲ್-ಕಾರ್ಡ್ ಡ್ಯುಯಲ್-ಸ್ಟ್ಯಾಂಡ್‌ಬೈ ಅನ್ನು ಒಳಗೊಂಡಿದೆ. ಅಂದರೆ ಈ ಫೋನ್ ಡ್ಯುಯಲ್ 4G ಪೂರ್ಣ ನೆಟ್‌ಕಾಮ್ ಅನ್ನು ಬೆಂಬಲಿಸಲಿದೆ. ಅದರಲ್ಲೂ ಈ ಫೋನ್ ಏಕಕಾಲದಲ್ಲಿ ಡ್ಯುಯಲ್ ಸಿಮ್ ಡ್ಯುಯಲ್ 4G ಆನ್‌ಲೈನ್ ಆಕ್ಟಿವ್‌ಗೊಳಿಸಲಿದೆ. ಇದಲ್ಲದೆ ನೋಕಿಯಾ 105 4G (2023) ಫೋನ್ VoLTE HD ವಾಯ್ಸ್ ಕಾಲ್‌ಗಳನ್ನು ಸಹ ಬೆಂಬಲಿಸಲಿದೆ.
ನೋಕಿಯಾ 105 4G (2023) ಫೋನ್ 1450mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದು ತನ್ನ ಹಳೆಯ ಆವೃತ್ತಿಗಿಂತ 42% ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಇನ್ನು ಬ್ಲೂಟೂತ್ 5.0 ಮತ್ತು ಮಿಗು ಮ್ಯೂಸಿಕ್ ನಲ್ಲಿ ಹೊಸ ಅಪ್‌ಡೇಟ್‌ಗಳನ್ನು ನೀಡಲಿದೆ. ಇದರೊಂದಿಗೆ ಈ ಫೋನ್ ಬೋಲ್ಡ್ ಬಟನ್ ಫಾಂಟ್‌ಗಳನ್ನು ಹೊಂದಿದ್ದು, ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ನೋಕಿಯಾ 105 4G (2023) ಫೋನ್ ವಾಯರ್‌ಲೆಸ್ ಎಕ್ಸ್ಟರ್ನಲ್ ರೇಡಿಯೊವನ್ನು ಒಳಗೊಂಡಿದೆ. ಇದನ್ನು ನೀವು ಇಯರ್‌ಫೋನ್ ಇಲ್ಲದೆಯೂ ಕೂಡ ಪ್ಲೇ ಮಾಡುವುದಕ್ಕೆ ಅವಕಾಶವಿದೆ. ಜೊತೆಗೆ ಈ ಫೋನ್‌ನಲ್ಲಿ ಒಂದು ಬಟನ್ ಫ್ಲ್ಯಾಶ್‌ಲೈಟ್ ಅನ್ನು ಅಳವಡಿಸಲಾಗಿದೆ, ಇದನ್ನು ಆನ್ ಅಥವಾ ಆಫ್ ಮಾಡಲು "ಅಪ್ ಡೈರೆಕ್ಷನ್" ಬಟನ್ ಅನ್ನು ಬಳಸಬಹುದಾಗಿದೆ.
ನೋಕಿಯಾ 105 4G (2023) ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಈ ಫೋನ್ ಚೀನಾದಲ್ಲಿ 229 ಯುವಾನ್ (ಅಂದಾಜು 2 704ರೂ)ಬೆಲೆಯನ್ನು ಹೊಂದಿದೆ. ಇದು ಏಪ್ರಿಲ್ 28 ರಂದು ಖರೀದಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೀಚರ್ ಫೋನ್ ಭಾರತಕ್ಕೆ ಎಂಟ್ರಿ ನೀಡಲಿದೆಯಾ? ಒಂದು ವೇಳೆ ಎಂಟ್ರಿ ನೀಡುವುದಾದರೆ ಲಾಂಚ್ ಡೇಟ್ ಯಾವಾಗ ಎಂಬೆಲ್ಲಾ ಪ್ರಶ್ನೆಗಳಿಗೆ ಸಬಂಧಪಟ್ಟಂತೆ ಇನ್ನು ಕೂಡ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








