'ನೋಕಿಯಾ 110' ಖರೀದಿಸಲು ಇವೆ ಹಲವು ಕಾರಣಗಳು!

|

ಸ್ಮಾರ್ಟ್‌ಫೋನ್‌ಗಳ ಅಬ್ಬರದಲ್ಲಿ ಕೀ ಪ್ಯಾಡ್‌ ಮೊಬೈಲ್‌ಫೋನ್‌ಗಳು ಮೂಲೆಗೆ ಸರಿದಿರುವುದು ನಿಜ. ಆದರೂ ಕೀಪ್ಯಾಡ್ ಮೊಬೈಲ್‌ ಫೋನ್‌ಗಳನ್ನು ಖರೀದಿಸುವವರು ಈಗಲೂ ಇದ್ದಾರೆ. ಒಂದು ಹೆಚ್ಚುವರಿ ಇರಲಿ ಎಂದೋ ಅಥವಾ ಸರಳತೆ ಇರಲೆಂದೋ ಕೀ ಪ್ಯಾಡ್‌ ಫೋನ್‌ಗಳನ್ನು ಇಷ್ಟಪಡುವವರಿದ್ದಾರೆ. ಅಂತವರಿಗಾಗಿ ಮೊಬೈಲ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್ ನೋಕಿಯಾ ಇತ್ತೀಚಿಗೆ 'ನೋಕಿಯಾ 110' ಎಂಬ ಹೊಸ ಕೀಪ್ಯಾಡ್ ಫೋನನ್ನು ಬಿಡುಗಡೆ ಮಾಡಿದೆ. 1,599 ರೂ. ಬೆಲೆಯನ್ನು ಹೊಂದಿರುವ ಈ ಫೋನ್ ಗ್ರಾಹಕರನ್ನು ಖಂಡಿತವಾಗಿಯೂ ಸೆಳೆಯಲಿದೆ.

ನೋಕಿಯಾ 110

ಹೌದು, ಮೊಬೈಲ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್ ನೋಕಿಯಾ ಇತ್ತೀಚಿಗೆ ನೋಕಿಯಾ ಮಾರುಕಟ್ಟೆಗೆ 'ನೋಕಿಯಾ 110' (2019) ಫೋನ್‌ ಅನ್ನು ಬಿಡುಗಡೆ ಮಾಡಿದ್ದು, 120x160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ 1.77 ಇಂಚಿನ QQVGA ಡಿಸ್‌ಪ್ಲೇ ಮತ್ತು 4 MB RAM ಮತ್ತು 4MB ಸ್ಟೋರೇಜ್ ಸಾಮರ್ಥ್ಯದಲ್ಲಿ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಎಸ್‌ಡಿ ಕಾರ್ಡ್ ಮೂಲಕ 32 GBವರೆಗೂ ಸ್ಟೋರೇಜ್ ಸ್ಥಳಾವಕಾಶ ಆಯ್ಕೆಗಳ ಜೊತೆಗೆ ಈ ಫೋನ್ ಜನಪ್ರಿಯ ಸ್ನೇಕ್ ಗೇಮ್ ಮತ್ತು ವೈರ್‌ಲೆಸ್ ಎಫ್‌ಎಮ್‌ ರೇಡಿಯೊ ಸೌಲಭ್ಯವನ್ನು ಪಡೆದುಕೊಂಡಿದೆ.

ವಿನ್ಯಾಸ

ಬಹುಮುಖ್ಯವಾಗಿ ಈ ಫೋನಿನ ವಿನ್ಯಾಸವು ಫೀಚರ್ ಫೋನ್ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದೆ. ಕರೆ ಮಾಡಲು, ನಂಬರ್‌ಗಳನ್ನು ಒತ್ತಲು, ಕೀ ಪ್ಯಾಡ್‌ಗಳನ್ನು ಸುಲಭವಾಗಿ ಗುರುತಿಸುವಂತೆ ಈ ಫೋನನ್ನು ವಿನ್ಯಾಸ ಮಾಡಲಾಗಿರುವುದನ್ನು ನಾವು ನೋಡಬಹುದು. ಇನ್ನು ಇದರಲ್ಲಿ ಹೆಚ್ಚು ಜನರು ಇಷ್ಟಪಡುವ ಎಲ್‌ಇಡಿ ಟಾರ್ಚ್ ಲೈಟ್ ಸೌಲಭ್ಯ ಕೂಡಾ ಇದ್ದು, ಹಿಂದೆ ನೋಕಿಯಾ ಫೋನ್‌ ಬಳಸುತ್ತಿದ್ದವರ ಫೇವರಿಟ್ ಗೇಮ್ ಸ್ನೇಕ್‌ಗೇಮ್‌ ಕೂಡ ಇದೆ! ಜೊತೆಗೆ ನಿಂಜಾ ಅಪ್‌, ಏರ್‌ ಸ್ಟ್ರೈಕ್, ಫುಟ್‌ಬಾಲ್‌ ಕಪ್‌ ಮತ್ತು ಡೂಡಲ್ ಜಂಪ್ ಗೇಮ್‌ಗಳನ್ನು ನೀಡಲಾಗಿದೆ

 800mAh

ಈ ಫೋನ್ 800mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 14ಗಂಟೆಗಳ ಟಾಕ್‌ಟೈಮ್ ಬ್ಯಾಕ್‌ಅಪ್‌ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದ ಬ್ಯಾಟರಿ ಸಾಮರ್ಥ್ಯದಲ್ಲಿ ಸುಮಾರು 18 ಗಂಟೆಗಳ ಎಫ್‌ಎಮ್‌ ರೇಡಿಯೊ ಪ್ಲೇ ಬ್ಯಾಕ್‌ ಬ್ಯಾಕ್‌ಅಪ್‌ ಸಹ ಸಿಗಲಿದ್ದು, ಸುಮಾರು 27 ಗಂಟೆ ಮ್ಯೂಸಿಕ್ ಪ್ಲೇ ಬ್ಯಾಕ್‌ ಬ್ಯಾಕ್‌ಅಪ್‌ ನೀಡಲಿದೆ. ಸುಮಾರು 18.5 ದಿನಗಳ ಸ್ಟ್ಯಾಂಡ್‌ ಬೈ ಟೈಮ್‌ ಬ್ಯಾಟರಿ ಲೈಫ್ ಒದಗಿಸುವ ಸಾಮರ್ಥ್ಯವಿದೆ ಎಂದರೆ ಇದರ ಬ್ಯಾಟರಿ ಶಕ್ತಿ ಎಷ್ಟು ಎಂಬುದನ್ನು ತೋರಿಸುತ್ತದೆ

ರಿಯರ್ ಕ್ಯಾಮೆರಾ

ಇನ್ನುಳಿದಂತೆ ಈ ಫೋನಿನಲ್ಲಿ ಬಿಲ್ಟ್‌ಇನ್ ರಿಯರ್ ಕ್ಯಾಮೆರಾ ಸಹ ಇದ್ದು, ಫೋನಿನ ಮೇಲ್ಭಾಗದಲ್ಲಿ ಎಲ್‌ಇಡಿ ಟಾರ್ಚ್‌ ಲೈಟ್‌ ಸೌಲಭ್ಯವನ್ನು ಹೊಂದಿದೆ. ಮೈಕ್ರೋ ಯುಎಸ್‌ಬಿ 2.0 ಪೋರ್ಟ್‌, ಎರಡು ಮಿನಿ ಸಿಮ್ ಸ್ಲಾಟ್‌ ಆಯ್ಕೆಗಳನ್ನು ಒಳಗೊಂಡಿದೆ.ಒಟ್ಟಿನಲ್ಲಿ, 1600 ರೂ. ದರದ ಆಸುಪಾಸಿನಲ್ಲಿ ಚೆನ್ನಾಗಿರುವ ಕೀಪ್ಯಾಡ್‌ ಫೋನೊಂದು ಬೇಕು ಎನ್ನುವವರು ಇದನ್ನು ಪರಿಗಣಿಸಬಹುದು. ಪಿಂಕ್‌ ಮತ್ತು ಕಪ್ಪು ಬಣ್ಣದಲ್ಲಿ ದೊರೆಯುತ್ತಿರುವ ಈ ಫೀಚರ್ ಫೋನ್‌ ಎಲ್ಲ ಮೊಬೈಲ್‌ ಅಂಗಡಿಗಳಲ್ಲಿ ಮತ್ತು ನೋಕಿಯಾ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ.

Best Mobiles in India

English summary
Nokia 110 feature phone is equipped with a 1.77-inch QQVGA coloured display and it features an in-built qVGA rear camera for clicking

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X