Subscribe to Gizbot

ನೋಕಿಯಾ 1100 ಆಂಡ್ರಾಯ್ಡ್ 5.0 ಲಾಲಿಪಪ್ ಆವೃತ್ತಿಯೊಂದಿಗೆ

Written By:

ನೋಕಿಯಾದ ಹೆಚ್ಚು ಜನಪ್ರಿಯ ಫೀಚರ್ ಫೋನ್ ನೋಕಿಯಾ 1100 ಇನ್ನೊಮ್ಮೆ ಸುದ್ದಿಯಲ್ಲಿದೆ. ಗೂಗಲ್‌ನ ಅತ್ಯಾಧುನಿಕ ಆಂಡ್ರಾಯ್ಡ್ ಬಿಲ್ಡ್ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿ ಚಾಲನೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹ್ಯಾಂಡ್‌ಸೆಟ್‌ನಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಚಾಲನೆಯಾಗುತ್ತಿದ್ದು ಇದು ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಒಳಗೊಂಡಿದೆ. 512ಎಮ್‌ಬಿ RAM ಅನ್ನು ಫೋನ್ ಹೊಂದಿದೆ. ಆಂಡ್ರಾಯ್ಡ್ ಆವೃತ್ತಿ, ಪ್ರೊಸೆಸರ್, ಮೆಮೊರಿಯ ವಿವರ ಮಾತ್ರ ದೊರಕಿದ್ದು ಬೇರೆಲ್ಲಾ ಮಾಹಿತಿ ಲಭ್ಯವಾಗಿಲ್ಲ.

ನೋಕಿಯಾ 1100 ಆಂಡ್ರಾಯ್ಡ್ 5.0 ಲಾಲಿಪಪ್ ಆವೃತ್ತಿಯೊಂದಿಗೆ

ನೋಕಿಯಾ 1100 ಅನ್ನು 2003 ರಲ್ಲಿ ಲಾಂಚ್ ಮಾಡಿದ್ದು ಕಂಪೆನಿಯ ಮೈಲಿಗಲ್ಲಾಗಿ ಈ ಫೋನ್ 250 ಮಿಲಿಯನ್ ಬಳಕೆದಾರರ ಮನಗೆದ್ದಿತು ಎಂದೇ ಹೇಳಬಹುದು. ನೋಕಿಯಾ 1100 ಜಗತ್ತಿನಲ್ಲೇ ಹೆಚ್ಚು ಜನಪ್ರಿಯ ಫೋನ್ ಆಗಿ ಪರಿಗಣಿತವಾಗಿದ್ದು ನಂತರ ಚರಿತ್ರೆಯಾಗಿದೆ. ಕಳೆದ ವರ್ಷ ಮೈಕ್ರೋಸಾಫ್ಟ್ ಹೇರಿದ್ದ ನಿಯಮಗಳನ್ನು ಮೀರಿ ನೋಕಿಯಾ ಎನ್1 ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿತ್ತು. ನೋಕಿಯಾ ಬ್ರ್ಯಾಂಡ್‌ನ ಆಂಡ್ರಾಯ್ಡ್ ಟ್ಯಾಬ್ಲೆಟ್ ಇದಾಗಿದೆ ಎಂದು ಕಂಪೆನಿ ಅದನ್ನು ಕರೆದಿತ್ತು.

English summary
This article tells about Nokia 1100 With Android 5.0 Lollipop, Quad-Core Processor Spotted.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot