ನೋಕಿಯಾ ಕಂಪೆನಿಯ ನೋಕಿಯಾ 125, 150 ಫೀಚರ್ ಫೋನ್‌ಗಳ ಬೆಲೆ ಬಹಿರಂಗ!
ಟೆಕ್ ವಲಯದಲ್ಲಿ ನೊಕಿಯಾ ಕಂಪೆನಿ ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ಎನಿಸಿಕೊಂಡಿದೆ. ಅಲ್ಲದೆ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಇದಲ್ಲದೆ ಕಳೆದ ತಿಂಗಳು, ಎಚ್‌ಎಂಡಿ ಗ್ಲೋಬಲ್ ನೋಕಿಯಾ 5.3, ನೋಕಿಯಾ 1.3, ಮತ್ತು ನೋಕಿಯಾ ಸಿ 2 ಆಂಡ್ರಾಯ್ಡ್ ಗೋ ಸೇರಿದಂತೆ ಮೂರು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. ಇದೀಗ, ಬ್ರಾಂಡ್ ಇನ್ನೂ ಎರಡು ಫೋನ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಹೌದು, ಎವರ್ ಗ್ರೀನ್ ಮೊಬೈಲ್ ಬ್ರ್ಯಾಂಡ್ ಎಚ್‌ಎಂಡಿ ಗ್ಲೋಬಲ್ ನೋಕಿಯಾ ಕಂಪೆನಿ ತನ್ನ ಹೊಸ ಮಾದರಿಯ ಫೋನ್‌ಗಳನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಟಿಪ್‌ಸ್ಟರ್ನಲ್ಲಿ ಲೀಕ್ ಆದ ಮಾಹಿತಿ ಪ್ರಕಾರ ಈ ಫೋನ್‌ಗಳನ್ನ ನೋಕಿಯಾ 125 ಮತ್ತು ನೋಕಿಯಾ 150 ಫೀಚರ್ ಫೋನ್‌ಗಳೆಂದು ಹೆಸರಿಸಲಾಗಿದೆ. ಇನ್ನು ಈ ಎರಡು ಫೋನ್‌ಗಳು ಎಂಟ್ರಿ ಲೆವೆಲ್ ಫೋನ್‌ಗಳಾಗಿವೆ ಎಂದು ಹೆಳಲಾಗ್ತಿದೆ. ಸದ್ಯ ಇದೀಗ ಆನ್‌ಲೈನ್‌ನಲ್ಲಿ ಈ ಫೋನ್‌ಗಳ ಬೆಲೆ ಏನಿರಬಹುದು ಅನ್ನೊದು ಬಹಿರಂಗವಾಗಿದೆ.

ಇನ್ನು ಈ ಫೋನ್‌ಗಳು ಎಂಟ್ರಿ ಲೆವೆಲ್ ಫೋನ್‌ಗಳಾಗಿದ್ದು, ಮಾಡೆಲ್ ನಂಬರ್ ಟಿಎ -1253 ಮತ್ತು ಟಿಎ -1235 ಅನ್ನು ಹೊಂದಿವೆ. ಇನ್ನು ಈ ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನ ಹೊಂದಿರಲಿವೆ ಎನ್ನಲಾಗ್ತಿದೆ. ಅಲ್ಲದೆ ಈಗಿನ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗ್ತಿದೆ. ಇದಲ್ಲದೆ ಈ ಫೋನ್ ವೀಡಿಯೊ ವೀಕ್ಷಣೆ ಹಾಗೂ ವೀಡಿಯೊ ಕರೆಗಳಿಗೆ ಅಗತ್ಯವಾದ ಯೊಗ್ಯ ಮಾದರಿಯ ಡಿಸ್‌ಪ್ಲೇ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ ನೋಕಿಯಾದ ಈ ಫೋನ್‌ಗಳು 4G ನೆಟ್‌ವರ್ಕ್ ಮತ್ತು VoLTE ಹೈ-ಡೆಫಿನಿಷನ್ ಕರೆಗಳಿಗೆ ಬೆಂಬಲವನ್ನು ನೀಡುತ್ತದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ನೋಕಿಯಾ 220 4G ಫೀಚರ್ ಫೋನ್ ಕ್ಲಾಸಿಕ್ ಪಾಲಿಕಾರ್ಬೊನೇಟ್ ದೇಹವನ್ನು ಹೊಂದಿದೆ ಮತ್ತು ಇದು ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಖರೀದಿಸಲು ಲಭ್ಯವಿದೆ. ಇದು 2.4-ಇಂಚಿನ ಡಿಸ್ಪ್ಲೇ ಹೊಂದಿದೆ. ಕ್ಯಾಮೆರಾಗಳಂತೆ, ಈ ನೋಕಿಯಾ ಸಾಧನವು 0.3 ಮೆಗಾಪಿಕ್ಸೆಲ್ ವಿಜಿಎ ಕ್ಯಾಮೆರಾವನ್ನು ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಯಾಗಿದೆ.

ಸದ್ಯ ಲೀಕ್ ಮಾಹಿತಿ ಪ್ರಕಾರ, ನೋಕಿಯಾ 150 ಬೆಲೆ € 41.90 ಆಗಲಿದೆ, ಇದು ಭಾರತದಲ್ಲಿ ಸುಮಾರು 3,420 ರೂ. ನೋಕಿಯಾ 125 ಬೆಲೆ. 35.90 (ಅಂದಾಜು 2,930 ರೂ) ಬೆಲೆಯೊಂದಿಗೆ ಬರಬಹುದು ಎನ್ನಲಾಗಿದೆ. ಇನ್ನು ಕಡಿಮೆ-ಮಟ್ಟದ ಈ ಎರಡೂ ಡಿವೈಸ್‌ಗಳು ಡ್ಯುಯಲ್ ಸಿಮ್ ಅನ್ನು ಬೆಂಬಲಿಸಲಿವೆ ಎಂದು ಹೇಳಲಾಗ್ತಿದೆ. ಸದ್ಯ ನೋಕಿಯಾ ಕಂಪನಿಯು ಮೇ 7 ರಿಂದ ಈ ಸ್ಮಾರ್ಟ್‌ಫೋನ್ ಲಬ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications




