Home
ಸುದ್ದಿಜಾಲ

ಭಾರತದಲ್ಲಿ ನೋಕಿಯಾ ಕಂಪೆನಿಯಿಂದ ಎರಡು ಹೊಸ ಫೋನ್‌ ಲಾಂಚ್‌; ಬೆಲೆ ಕೇವಲ 1,849ರೂ.!

ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರ್ಯಾಂಡ್‌ ನೋಕಿಯಾ ಕಂಪೆನಿ ಭಾರತದಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ 130 ಮ್ಯೂಸಿಕ್ ಮತ್ತು ನೋಕಿಯಾ 150 ಎಂಬ ಎರಡು ಹೊಸ ಫೀಚರ್ ಫೋನ್‌ಗಳನ್ನು ಅನಾವರಣಗೊಳಿದೆ. ಈ ಮೂಲಕ ಫೀಚರ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಕ್ರಿಯೆಟ್‌ ಮಾಡಿದೆ.

ಹೌದು, ನೋಕಿಯಾ ಕಂಪೆನಿ ಎರಡು ಹೊಸ ಫೀಚರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಫೀಚರ್‌ ಫೋನ್‌ಗಳನ್ನು ಭಾರತದಲ್ಲಿ ವಿವಿಧ ಬಳಕೆದಾರರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬಿಲ್ಟ್‌ ಮಾಡಲಾಗಿದೆ ಎಂದು ನೋಕಿಯಾ ಕಂಪೆನಿ ಹೇಳಿದೆ. ಇದರಲ್ಲಿ ನೋಕಿಯಾ 130 ಮ್ಯೂಸಿಕ್‌ ಮ್ಯೂಸಿಕ್‌ ಪ್ರಿಯರನ್ನು ಗುರಿಯಾಗಿಸಿಕೊಂಡಿದೆ. ಆದರೆ ನೋಕಿಯಾ 150 ಹೆಚ್ಚಿನ ಬಾಳಿಕೆ ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಇನ್ನು ಈ ಎರಡು ಫೀಚರ್‌ ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ನೋಕಿಯಾ ಕಂಪೆನಿಯಿಂದ ಎರಡು ಹೊಸ ಫೋನ್‌ ಲಾಂಚ್‌; ಬೆಲೆ ಕೇವಲ 1,849ರೂ.!

ನೋಕಿಯಾ 130 ಮ್ಯೂಸಿಕ್‌ ಫೀಚರ್ಸ್‌ ಹೇಗಿದೆ?
ನೋಕಿಯಾ 130 ಮ್ಯೂಸಿಕ್‌ ಫೀಚರ್‌ ಫೋನ್‌ ಹೆಸರೇ ಸೂಚಿಸುವಂತೆ ಮ್ಯೂಸಿಕ್‌ ಪ್ರಿಯರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು 2.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಪವರ್‌ಫುಲ್‌ ಲೌಡ್‌ಸ್ಪೀಕರ್‌ ಒಳಗೊಂಡ MP3 ಪ್ಲೇಯರ್‌ ಅನ್ನು ಒಳಗೊಂಡಿದ್ದು, 32GB ವರೆಗಿನ ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸಲಿದೆ. ಇದರಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಹಾಡುಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಇದಲ್ಲದೆ ವಾಯರ್‌ಲೆಸ್‌ FM ರೇಡಿಯೊ ಫೀಚರ್ಸ್‌ ಕೂಡ ಹೊಂದಿದೆ.

ಇದಲ್ಲದೆ ಈ ಫೀಚರ್‌ ಫೋನ್‌ ಮೈಕ್ರೋ USB 1.1 ಮತ್ತು ಪ್ರಮಾಣಿತ 3.5mm ಆಡಿಯೊ ಜ್ಯಾಕ್ ಅನ್ನು ಬೆಂಬಲಿಸಲಿದೆ. ಈ ಫೋನ್‌ ತೆಗೆಯಬಹುದಾದ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 34 ದಿನಗಳ ಬ್ಯಾಟರಿ ಬ್ಯಾಕ್‌ ಅಪ್‌ ಅನ್ನು ನೀಡಲಿದೆ. ಇದಲ್ಲದೆ ಈ ಮೊಬೈಲ್‌ನಲ್ಲಿ ನೀವು 2000 ಸಂಪರ್ಕಗಳು ಮತ್ತು 500 SMS ಅನ್ನು ಸ್ಟೋರೇಜ್‌ ಮಾಡಬಹುದಾಗಿದೆ.

ನೋಕಿಯಾ 150 ಫೀಚರ್ಸ್‌ ಹೇಗಿದೆ?
ನೋಕಿಯಾ 150 ಫೀಚರ್‌ ಮೊಬೈಲ್‌ ಹೆಚ್ಚು ದಿನ ಬಾಳಿಕೆ ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಇದರ ವಿನ್ಯಾಸವೇ ಬಲು ಸೊಗಸಾಗಿದ್ದು, ಅತ್ಯುತ್ತಮ ಗುಣಮಟ್ಟದ ಪ್ಯಾನಲ್‌ ಅನ್ನು ಹೊಂದಿದೆ. ಈ ಫೋನ್‌ 2.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1450mAh ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬರಲಿದೆ. ಇನ್ನು ಈ ಫೋನ್‌ 20 ಗಂಟೆಗಳ ಟಾಕ್ ಟೈಮ್ ಮತ್ತು 34 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ.

ಇದಲ್ಲದೆ ಈ ಫೋನ್‌ ಫ್ಲ್ಯಾಶ್‌ನೊಂದಿಗೆ VGA ರಿಯರ್‌ ಕ್ಯಾಮರಾವನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಅಗತ್ಯವೆನಿಸದಾಗ ಫೋಟೋಗಳನ್ನು ಕೂಡ ಕ್ಯಾಪ್ಚರ್‌ ಮಾಡಬಹುದಾಗಿದೆ. ಇದರೊಂದಿಗೆ ಈ ಮೊಬೈಲ್‌ನಲ್ಲಿ ಕೂಡ ನೀವು ಮ್ಯೂಸಿಕ್‌ ಅನ್ನು ಆನಂದಿಸಬಹುದಾಗಿದೆ. ಇದು 30 ಗಂಟೆಗಳವರೆಗೆ ಪ್ಲೇಬ್ಯಾಕ್ ಮ್ಯೂಸಿಕ್‌ ಟೈಂ ನೀಡುವ MP3 ಪ್ಲೇಯರ್ ಅನ್ನು ಸಹ ಹೊಂದಿದೆ. ಇನ್ನು ಫೋನ್ ಇಂಟರ್‌ ಸ್ಟೋರೇಜ್‌ ಕೂಡ ಹೊಂದಿದ್ದು, ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 32GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ನೋಕಿಯಾ 130 ಮ್ಯೂಸಿಕ್ ಮತ್ತು ನೋಕಿಯಾ 150 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ನೋಕಿಯಾ 130 ಮ್ಯೂಸಿಕ್ ಫೀಚರ್‌ ಮೊಬೈಲ್‌ ವಿವಿಧ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಇದರ ಡಾರ್ಕ್ ಬ್ಲೂ ಮತ್ತು ಪರ್ಪಲ್ ಬಣ್ಣದ ಆಯ್ಕೆಯ ಮೊಬೈಲ್‌ 1,849ರೂ. ಬೆಲೆಯನ್ನು ಹೊಂದಿದೆ. ಆದರೆ ಲೈಟ್ ಗೋಲ್ಡ್ ಬಣ್ಣವು 1,949ರೂ. ಬೆಲೆಯಲ್ಲಿ ದೊರೆಯಲಿದೆ.
ಇನ್ನು ನೋಕಿಯಾ 150 ಫೀಚರ್‌ ಮೊಬೈಲ್‌ 2,699ರೂ. ಬೆಲೆಯಲ್ಲಿ ಬರಲಿದೆ. ಇದು ಇದ್ದಿಲು, ಕೆಂಪು ಮತ್ತು ಸಯಾನ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Nokia 130 Music and Nokia 150 feature phones launched in India: details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+