ನೋಕಿಯಾ 2.3 ಸ್ಮಾರ್ಟ್‌ಫೋನ್‌ ಮೇಲೆ ಬೆಲೆ ಕಡಿತ ಘೋಷಿಸಿದ ನೋಕಿಯಾ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಜೋರಾಗಿಯೇ ಇದೆ. ಇದರ ನಡುವೆ ವಿಶೇಷ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನ ಸಹ ಕೆಲ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪೆನಿಗಳು ನೀಡುತ್ತಲೇ ಇರುತ್ತವೆ. ಸದ್ಯ ಇದೀಗ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ನೋಕಿಯಾ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಹೊಸ ಸ್ಮಾರ್ಟ್‌ಫೋನ್‌ ಬೆಲೆಯನ್ನ 1000ರೂ ಕಡಿತ ಮಾಡಿದ್ದು, ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇದು ಸಕಾಲವಾಗಿದೆ.

ಹೌದು

ಹೌದು ಜನಪ್ರಿಯ ಮೊಬೈಲ್‌ ಬ್ರ್ಯಾಂಡ್ ಆಗಿರುವ ನೋಕಿಯಾ ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ನೋಕಿಯಾ 2.3 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಈ ಸ್ಮಾರ್ಟ್‌ಫೋನ್‌ನ ಪ್ರಾರಂಬಿಕ ಬೆಲೆ 8,199 ರೂ. ಆಗಿತ್ತು. ಆದರೆ ಇದೀಗ ಈ ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ ಸಾವಿರ ರೂಪಾಯಿ ಕಡಿತವನ್ನ ಮಾಡಿದ್ದು, ಇದೇ ಸ್ಮಾರ್ಟ್‌ಫೋನ್‌ ಇದೀಗ ಕೇವಲ 7,199 ರೂ ಗಳಿಗೆ ಲಭ್ಯವಾಗಲಿದೆ. ಸದ್ಯ ಅಧಿಕೃತ ನೋಕಿಯಾ ಆನ್‌ಲೈನ್ ಮಳಿಗೆಗಳಲ್ಲಿ 7,199 ರೂ. ಹಾಗೂ ಅಮೆಜಾನ್‌ನಿಂದ 7,165 ರೂ. ಗಳಿಗೆ ಖರೀದಿಸಬಹುದಾಗಿದೆ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ನೋಕಿಯಾ 2.3 ಸ್ಮಾರ್ಟ್‌ಫೋನ್‌ 720x1520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.2-ಇಂಚಿನ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು 19.9 ಆಸ್ಪೆಕ್ಟ್‌ ರೆಶೀಯೋವನ್ನು ಹೊಂದಿದೆ. ಇದು 271 PPI ಪಿಕ್ಸೆಲ್‌ ಸಾಂದ್ರತೆಯನ್ನ ಹೊಂದಿರುವ ಐಪಿಎಸ್ ಎಲ್ಸಿಡಿ ಡಿಸ್‌ಪ್ಲೇ ಆಗಿದ್ದು, 2.5 ಡಿ ಕರ್ವ್ಡ ಗ್ಲಾಸ್ ಟೈಪ್ ಅನ್ನು ನೀಡಲಾಗಿದೆ. ಅಲ್ಲದೆ ಸ್ಕ್ರೀನ್‌ ಟು ಬಾಡಿ ರೆಶೀಯೋ 80.34% ಹೊಂದಿದ್ದು, ಆಸ್ಪೆಕ್ಟ್‌ ರೆಶೀಯೋ 19: 9 ರಷ್ಟಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ ಸಿಪಿಯು 4 x 2GHz ಕಾರ್ಟೆಕ್ಸ್ A53 ಹೊಂದಿರುವ ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನ 512GB ವರೆಗೆ
ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ನೋಕಿಯಾ 2.3 ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮೊದಲನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದ್ದು, ಎರಡನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್‌ ಟು ಫೋಕಸ್ ಫೀಚರ್ಸ್‌ ಅನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 4000 mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, 5W ವೇಗದ ಚಾರ್ಜರ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE , ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ , ಮೈಕ್ರೋ-ಯುಎಸ್‌ಬಿ, ಮತ್ತು 3.5 ಎಂಎಂ ಹೆಡ್‌ಫೋನ್‌ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಗೂಗಲ್ ಅಸಿಸ್ಟೆಂಟ್ ಬಟನ್‌ ಹೊಂದಿದ್ದು, 3D ನ್ಯಾನೊ ವಿನ್ಯಾಸದೊಂದಿಗೆ ಪಾಲಿಮರ್ ಕವಚವನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಈ ಸ್ಮಾರ್ಟ್‌ಫೋನ್‌ನ ಬೆಲೆ ಕಡಿತಗೊಂಡಿದ್ದು, ಮೂಲ ಬೆಲೆ 8,199 ರೂ. ಆಗಿತ್ತು. ಆದರೆ ಇದೀಗ ಈ ಸ್ಮಾರ್ಟ್‌ಫೋನ್‌ ಕೇವಲ 7,199 ರೂ ಗಳಿಗೆ ಲಭ್ಯವಾಗಲಿದೆ. ಈ ಆಫರ್‌ ಅನ್ವಯ ಅಧಿಕೃತ ನೋಕಿಯಾ ಆನ್‌ಲೈನ್ ಮಳಿಗೆಗಳಲ್ಲಿ 7,199 ರೂ. ಹಾಗೂ ಅಮೆಜಾನ್‌ನಿಂದ 7,165 ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಗ್ರೀನ್, ಸ್ಯಾಂಡ್, ಮತ್ತು ಚಾರ್ಕೋಲ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Nokia 2.3 was launched back in December priced at Rs. 8,199.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X