ರಷ್ಯಾದಲ್ಲಿ ನೋಕಿಯಾ 2 ಪ್ರಿಬುಕ್ಕಿಂಗ್ ಆರಂಭ

By Lekhaka
|

ನೋಕಿಯಾ ಈಗಾಗಲೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನೋಕಿಯಾ ಸ್ಮಾರ್ಟ್ ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿದೆ. ನೋಕಕಯಾ 3, 5, 6, 7 ಮತ್ತು 8 ಸ್ಮಾರ್ಟ ಫೋನ್ ಗಳು ಗ್ರಾಹಕರ ಮನಗೆದ್ದಿದೆ. ಇದೇ ಮಾದರಿಯಲ್ಲಿ ಬಜೆಟೆ ಬೆಲೆಯಲ್ಲಿಯೂ ಫೋನ್ ವೊಂದನ್ನು ನೋಕಿಯಾ ಲಾಂಚ್ ಮಾಡಿದ್ದು, ನೋಕಿಯಾ 2 ಮೊನ್ನೆ ದೆಹಲಿಯಲ್ಲಿ ಬಿಡುಗಡೆಗೊಂಡಿದೆ.

ರಷ್ಯಾದಲ್ಲಿ ನೋಕಿಯಾ 2 ಪ್ರಿಬುಕ್ಕಿಂಗ್ ಆರಂಭ

ನೋಕಿಯಾ 2 ಸ್ಮಾರ್ಟ್ ಪೋನ್ EUR 99 (ರೂ.7500)ಕ್ಕೆ ಬಿಡುಗಡೆಗೊಂಡಿತ್ತು. ಈ ಬೆಲೆಯೂ ವಿವಿಧ ದೇಶಗಳಲ್ಲಿ ವ್ಯತ್ಯಾಸ ಸಹ ಆಗಲಿದೆ ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ಇನ್ನು ಕಡಿಮೆಯಾಗುವ ಸಾಧ್ಯತೆ ಇದೆ.

ಇದೇ ಸಂದರ್ಭದಲ್ಲಿ ರಷ್ಯಾದಲ್ಲಿ ನೋಕಿಯಾ 2 ಪ್ರಿಬುಕ್ಕಿಂಗ್ ಆರಂಭವಾಗಿದೆ ಎನ್ನಲಾಗಿದೆ. ರಷ್ಯಾದಲ್ಲಿ ಈ ಫೋನ್ ರೂ.7,990ಕ್ಕೆ ಮಾರಾಟವಾಗುತ್ತಿದೆ. ನವೆಂಬರ್ ಮಧ್ಯ ಭಾಗದಿಂದ ಫೋನ್ ಮಾರಾಟ ಶುರುವಾಗಲಿದೆ ಎಂದು HMD ಗ್ಲೋಬಲ್ ಸಂಸ್ಥೆಯೂ ತಿಳಿಸಿದೆ.

ಜಿಯೋ ಒಂದೇ ಏಟಿಗೆ ಟೆಲಿಕಾಂ-ಮೊಬೈಲ್ ಲೋಕ ಶಾಕ್: 'ಸಂಪೂರ್ಣ ಉಚಿತ ಜಿಯೋ ಆಂಡ್ರಾಯ್ಡ್ ಫೋನ್ ಶೀಘ್ರ'ಜಿಯೋ ಒಂದೇ ಏಟಿಗೆ ಟೆಲಿಕಾಂ-ಮೊಬೈಲ್ ಲೋಕ ಶಾಕ್: 'ಸಂಪೂರ್ಣ ಉಚಿತ ಜಿಯೋ ಆಂಡ್ರಾಯ್ಡ್ ಫೋನ್ ಶೀಘ್ರ'

ಭಾರತೀಯ ಮಾರುಕಟ್ಟೆಗೂ ಸಹ ಈ ಫೋನ್ ಶೀಘ್ರವೇ ಕಾಲಿಡಲಿದ್ದು, ಈ ಫೋನ್ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆಫ್ ಲೈನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಈ ಸ್ಮಾರ್ ಫೋನ್ ಶಿಯೋಮಿ 4A, ಮೊಟೊ C ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ 5 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ 3 ಗ್ಲಾಸ್ ಸುರಕ್ಷೆಯಿಂದ ಕೂಡಿದೆ. 1GB RAM ಹಾಗೂ 8GB ಇಂಟರ್ನಲ್ ಮೆಮೊರಿಯನ್ನು ಈ ಪೋನ್ ನಲ್ಲಿ ಕಾಣಬಹುದಾಗಿದೆ.

ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ಹಿಸುವ ಈ ಫೋನ್ 4100mAh ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

Read more about:
English summary
Nokia 2 has finally gone up for pre-orders in Russia and is now priced at RUB 7,990 (roughly Rs. 8,755).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X