Subscribe to Gizbot

ಇಂರ್ನೆಟ್ ಸೌಲಭ್ಯವಿರುವ ನೋಕಿಯಾ 215 ರೂ 2149 ಕ್ಕೆ

Written By:

ಮೈಕ್ರೋಸಾಫ್ಟ್‌ನ ಹೆಚ್ಚು ಆಕರ್ಷಣೀಯ ಫೋನ್ ಆಗಿರುವ ನೋಕಿಯಾ 215 ಭಾರತದಲ್ಲಿ ರೂ 2149 ಕ್ಕೆ ಲಾಂಚ್ ಮಾಡಿದೆ. ಇದು ಡ್ಯುಯಲ್ ಸಿಮ್ ಅನ್ನು ಹೊಂದಿದ್ದು 2ಜಿ ಜಿಪಿಆರ್‌ಎಸ್ ಮತ್ತು ಎಡ್ಜ್ ಡೇಟಾ ನೆಟ್‌ವರ್ಕ್ ಅನ್ನು ಒಳಗೊಂಡಿದೆ. ಡಿವೈಸ್ ಕಪ್ಪು ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಅತಿ ಸಣ್ಣ ವಿಶೇಷತೆಗಳನ್ನು ಹೊಂದಿದ್ದರೂ ಬಳಸಲು ಅತ್ಯುತ್ತಮವಾಗಿರುವ ನೋಕಿಯಾ 215 ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಫೋನ್ ಬಳಕೆದಾರರಿಗೆ ಒದಗಿಸುತ್ತಿದೆ. ಇದು ಇಂಟರ್ನೆಟ್ ವ್ಯವಸ್ಥೆಯನ್ನು ಹೊಂದಿದೆ ಎಂಬುದೂ ಇನ್ನೊಂದು ಧನಾತ್ಮಕ ಅಂಶವಾಗಿದೆ. ಇನ್ನು ಡಿವೈಸ್‌ನಲ್ಲಿ ಒಪೇರಾ ಮಿನಿ ಬ್ರೌಸರ್, ಬಿಂಗ್ ಸರ್ಚ್, ಎಮ್‌ಎಸ್‌ಎನ್ ವೆದರ್, ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಅನ್ನು ಒಳಗೊಂಡಿದೆ.

ಇಂರ್ನೆಟ್ ಸೌಲಭ್ಯವಿರುವ ನೋಕಿಯಾ 215 ರೂ 2149 ಕ್ಕೆ

ಡಿವೈಸ್‌ನಲ್ಲಿ ಬಿಲ್ಟ್ ಇನ್ ಫ್ಲ್ಯಾಶ್‌ಲೈಟ್ ಕೂಡ ಇದ್ದು ಆಲ್ಫಾ ನ್ಯೂಮರಿಕ್ ಕೀಪ್ಯಾಡ್ ಮತ್ತು 0.3MP ಕ್ಯಾಮೆರಾವನ್ನು ಹೊಂದಿದೆ. ಇದು 2.4 ಇಂಚಿನ 320 x 240 ಪಿಕ್ಸೆಲ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ.
ಡಿಸ್‌ಪ್ಲೇ: 2.4-ಇಂಚಿನ ಎಲ್‌ಸಿಡಿ, 320 x 240 ಪಿಕ್ಸೆಲ್‌ಗಳು
ಓಎಸ್: ಸಿರೀಸ್ 30+
ಮೆಮೊರಿ: 8ಎಮ್‌ಬಿ RAM, ಮೈಕ್ರೋ ಎಸ್‌ಡಿ ಸಂಗ್ರಹ
ಕ್ಯಾಮೆರಾ: 0.3ಎಮ್‌ಪಿ ರಿಯರ್
ಬ್ಯಾಟರಿ: 1100mAh
ಅಳತೆಗಳು: 116 x 50 x 12.9 ಎಮ್‌ಎಮ್
ತೂಕ: 78.6 ಗ್ರಾಮ್ಸ್
ಬ್ಯಾಟರಿ 1100mAh

English summary
This article tells about Nokia 215 Internet-friendly feature phone hits India at Rs 2149.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot