ನೋಕಿಯಾ 215 ಮತ್ತು ನೋಕಿಯಾ 225 4G ಫೀಚರ್ ಫೋನ್‌ ಬಿಡುಗಡೆ !

|

ಮೊಬೈಲ್ ಕ್ಷೇತ್ರದ ಎವರ್‌ಗ್ರೀನ್ ಸಂಸ್ಥೆ ನೋಕಿಯಾ ತನ್ನ ಭಿನ್ನ ಮಾದರಿಯ ಫೋನ್‌ಗಳಿಂದ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಫೋನ್‌ಗಳನ್ನ ಪರಿಚಯಿಸಿರುವ ಎಚ್‌ಎಂಡಿ ಗ್ಲೋಬಲ್ ಭಾರತದಲ್ಲಿ ಎರಡು ಹೊಸ 4G ನೋಕಿಯಾ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನ ನೋಕಿಯಾ 215 ಮತ್ತು ನೋಕಿಯಾ 225 ಎಂದು ಹೆಸರಿಸಲಾಗಿದೆ. ಇನ್ನು ಈ ಫೀಚರ್‌ ಫೋನ್‌ಗಳು 4G VOLTE, ಎಫ್‌ಎಂ ರೇಡಿಯೋ, ಇಂಟರ್ನೆಟ್ ಬ್ರೌಸಿಂಗ್ ಗೆ ಬೆಂಬಲವನ್ನು ನೀಡುತ್ತವೆ.

ನೋಕಿಯಾ

ಹೌದು, ನೋಕಿಯಾ ಸಂಸ್ತೆ ತನ್ನ ಹೊಸ ನೋಕಿಯಾ 215 ಮತ್ತು ನೋಕಿಯಾ 225 ಫೀಚರ್‌ಫೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೀಚರ್‌ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, 4G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿವೆ. ಇನ್ನು ನೋಕಿಯಾ 215 ಫೀಚರ್‌ ಫೋನ್‌ ಮತ್ತು ನೋಕಿಯಾ 225 ಫೋನ್‌ ಎರಡು ಕೂಡ ಯುನಿಸಾಕ್ ಯುಎಂಎಸ್ 9117 ಪ್ರೊಸೆಸರ್ ಬಲವನ್ನು ಒಳಗೊಂಡಿವೆ. ಇನ್ನುಳಿದಂತೆ ಈ ಫೋನ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾ 215 4G ಫೋನ್‌

ನೋಕಿಯಾ 215 4G ಫೋನ್‌

ನೋಕಿಯಾ 215 4G ಫೀಚರ್‌ ಫೋನ್‌ 2.4-ಇಂಚಿನ QVGAಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸಾಕ್ ಯುಎಂಎಸ್ 9117 ಪ್ರೊಸೆಸರ್ ಬಲವನ್ನು ಹೊಂದಿದ್ದು, 30+ ಆಪರೇಟಿಂಗ್ ಸಿಸ್ಟಮ್ ಆಧಾರಿತ ಆರ್‌ಟಿಒಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ 128mb ಆನ್‌ಬೋರ್ಡ್ ಸ್ಟೊರೇಜ್‌ ಅನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ 32GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದು 1,150mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಫೋನ್‌ ಬ್ಲೂಟೂತ್‌ 5.0, ಎಫ್‌ಎಂ ರೇಡಿಯೋ ಅನ್ನು ಹೊಂದಿದೆ.

ನೊಕಿಯಾ 225 4G ಫೋನ್‌

ನೊಕಿಯಾ 225 4G ಫೋನ್‌

ನೋಕಿಯಾ 225 4G ಫೋನ್‌ ಕೂಡ 2.4-ಇಂಚಿನ QVGAಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸಾಕ್ ಯುಎಂಎಸ್ 9117 ಪ್ರೊಸೆಸರ್ ಬಲವನ್ನು ಹೊಂದಿದ್ದು, 30+ ಆಪರೇಟಿಂಗ್ ಸಿಸ್ಟಮ್ ಆಧಾರಿತ ಆರ್‌ಟಿಒಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ 128mb ಆನ್‌ಬೋರ್ಡ್ ಸ್ಟೊರೇಜ್‌ ಅನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ 32GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದು 1,150mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಅಲ್ಲದೆ ನೋಕಿಯಾ 225 4G VGAರೆಸಲ್ಯೂಶನ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು 0.3 ಮೆಗಾಪಿಕ್ಸೆಲ್ ಸ್ನ್ಯಾಪರ್ ರಿಯರ್‌ ಕ್ಯಾಮೆರಾ ನೀಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನೋಕಿಯಾ 215 4G ಫೀಚರ್‌ ಫೋನ್‌ ಬೆಲೆ 2,949,ರೂ. ಆಗಿದೆ. ಇನ್ನು ನೋಕಿಯಾ 225 4G ಬೆಲೆ 3,499.ರೂ ಆಗಿದೆ. ನೋಕಿಯಾ 215 4G ಫೀಚರ್‌ ಫೋನ್‌ ಬ್ಲ್ಯಾಕ್‌ ಮತ್ತು ಸಯಾನ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದಲ್ಲದೆ ನೋಕಿಯಾ 225 4G ಫೋನ್‌ ಬ್ಲ್ಯಾಕ್‌, ಕ್ಲಾಸಿಕ್ ಬ್ಲೂ ಮತ್ತು ಮೆಟಾಲಿಕ್ ಸ್ಯಾಂಡ್ ಶೇಡ್ಸ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೀಚರ್‌ ಫೋನ್‌ ಇದೇ ಅಕ್ಟೋಬರ್ 23 ಶುಕ್ರವಾರದಿಂದ ನೋಕಿಯಾ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಾಗಲಿದೆ.

Most Read Articles
Best Mobiles in India

Read more about:
English summary
Nokia 225 and 215 feature phones come with 4G VoLTE support, FM radio, internet browsing and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X