ನಂಬಿದ್ರೆ ನಂಬಿ...ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ ಇದೇ ತಿಂಗಳು!! ದಿನಾಂಕ ಯಾವುದು?
ಎಚ್ಎಂಡಿ ಗ್ಲೋಬಲ್ ಸ್ಮಾರ್ಟ್‌ಫೋನ್ ಬಿಡುಗಡೆಯ ಕಾರ್ಯಕ್ರಮಕ್ಕಾಗಿ ಪತ್ರಿಕಾ ಆಹ್ವಾನಗಳನ್ನು ಕಳುಹಿಸಿದೆ.!!
ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಬಿಡುಗಡೆಯಾಗುವ ದಿನಾಂಕ ಬಹುತೇಕ ಫೈನಲ್ ಆಗಿದೆ.! ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ದವಾಗಿರುವ ವಿಷಯ ಇದೀಗ ಹೊರಬಿದ್ದಿದೆ.!!
ಇದೇ ಶುಕ್ರವಾರ ಅಂದರೆ ಜೂನ್ 13 ರಂದು ಭಾರತದಲ್ಲಿ ನೋಕಿಯಾ ಬಿಡುಗಡೆಯಾಗಲಿದ್ದು, ಎಚ್ಎಂಡಿ ಗ್ಲೋಬಲ್ ಸ್ಮಾರ್ಟ್‌ಫೋನ್ ಬಿಡುಗಡೆಯ ಕಾರ್ಯಕ್ರಮಕ್ಕಾಗಿ ಪತ್ರಿಕಾ ಆಹ್ವಾನಗಳನ್ನು ಕಳುಹಿಸಿದೆ. ಹಾಗಾಗಿ, ನೋಕಿಯಾ ಆಂಡ್ರಾಯ್ಡ್ ಇನ್ನೇನು ಕೆಲವೇ ದಿವಸಗಳಲ್ಲಿ ಭಾರತಕ್ಕೆ ಕಾಲಿಟ್ಟಿದೆ.!!
ಇನ್ನು ದೇಶದಾಧ್ಯಂತ ನೋಕಿಯಾ ಆಂಡ್ರಾಯ್ಡ್ ಬರುವಿಕೆಗಾಗಿ ಜನರು ಕಾಯುತ್ತಿದ್ದು, ಇದೇ ತಿಂಗಳು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಖಷಿಗೆ ಕಾರಣವಾಗಿದೆ. ಇನ್ನು ನೋಕಿಯಾ 6 ಅತ್ಯದ್ಬುತ ಫೀಚರ್ಸ್ ಹೊಂದಿದ್ದು, ಅವು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!
ಬಿಡುಗಡೆಯಾಗಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ.

ಆಂಡ್ರಾಯ್ಡ್ ನ್ಯೂಗಾ 7.0!!
ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.0" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಈ ರೀತಿಯ ಅಪ್‌ಡೇಟ್ ಹೊಂದಿದೆ.

4GB RAm ಮತ್ತು 64GB ROM!!
ಸ್ಮಾರ್ಟ್‌ಫೋನ್ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!
"ನೋಕಿಯಾ 6" ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಇರುವ ಫೆಸ್ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಬೆಲೆ ಎಷ್ಟು?
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಜೂನ್ 13 ವರೆಗೂ "ನೋಕಿಯಾ 6" ಗಾಗಿ ಕಾಯಬೇಕಿದೆ. ಚೀನಾದಲ್ಲಿ "ನೋಕಿಯಾ 6" ಸ್ಮಾರ್ಟ್‌ಪೋನ್ 16,750 ರೂಪಾಯಿಗೆ ಬಿಡುಗಡೆಗೊಂಡಿದೆ. ಇನ್ನು . ಭಾರತದಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ ಬೆಲೆ ಕಡಿಮೆಯಾಗಲಿದೆ ಎಂದು ರೂಮರ್ ಆಗಲೇ ಹರಿದಾಡಿ ಹುಟ್ಟಿದೆ.!!


Click it and Unblock the Notifications








