Subscribe to Gizbot

'ನೋಕಿಯಾ 3' ಆಂಡ್ರಾಯ್ಡ್ ಫೋನ್‌ಗೂ ನ್ಯೂಗಾ 7.1.1 ಆಪ್‌ಡೇಟ್ ಲಭ್ಯ!!

Posted By: Precilla Dias

ಈ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಸ್ಮಾರ್ಟ್ ಫೋನ್ ಗಳು ಮುಂದಿನ ಎರಡು ವರ್ಷಗಳಿಗೆ ಬಿಡುಗಡೆಯಗಲಿರುವ ನೂತನ ಆಂಡ್ರಾಯ್ಡ್ ಆಪ್ ಡೇಟ್ ಅನ್ನು ಪಡೆದುಕೊಳ್ಳಲಿದೆ ಎಂದು HMD ಕಂಪನಿ ತಿಳಿಸಿತ್ತು.

 'ನೋಕಿಯಾ 3' ಆಂಡ್ರಾಯ್ಡ್ ಫೋನ್‌ಗೂ ನ್ಯೂಗಾ 7.1.1 ಆಪ್‌ಡೇಟ್ ಲಭ್ಯ!!

2018ರ ವರೆಗೆ ಬಿಡುಗಡೆಯಾಗಲಿರುವ ಆಂಡ್ರಾಯ್ಡ್ ಆವೃತ್ತಿಗಳು ನೋಕಿಯಾ ಸ್ಮಾರ್ಟ್ ಫೋನ್ ಗಳಿಗೆ ದೊರೆಯಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 3 ಸ್ಮಾರ್ಟ್ ಫೋನ್ ನೂತನ ಆಂಡ್ರಾಯ್ಡ್ 7.1.1 ಆಪ್ ಡೇಟ್ ಅನ್ನು ಪಡೆದುಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 3 ಸ್ಮಾರ್ಟ್ ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿವೆ.

ಈ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿರುವ HDM ಟೀಮ್, ಈಗಾಗಲೇ ಗೂಗಲ್ ನೂತನವಾಗಿ ಬಿಡುಗಡೆ ಮಾಡಿರುವ ಆಂಡ್ರಾಯ್ಡ್ 7.1.1 ಆಪ್ ಡೇಟ್ ನೋಕಿಯಾ 3 ಸ್ಮಾರ್ಟ್ ಫೋನ್ ಗಳಿಗೆ ಲಭ್ಯವಿದೆ ಎಂದು ತಿಳಿಸಿದೆ. ಗೂಗಲ್ ಫೋನ್ ಗಳನ್ನು ಬಿಟ್ಟರೆ ನೋಕಿಯಾಗೆ ಮಾತ್ರವೇ ಇದು ಲಭ್ಯವಿದೆ.

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ರೂ.9,499ಕ್ಕೆ ನೋಕಿಯಾ 3 ಮಾರಾಟವಾಗುತ್ತಿದ್ದು, ಆಫ್ ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಿದೆ. ಆದರೆ ಕ್ರೋಮಾ ಆನ್ ಲೈನ್ ಶಾಪಿಂಗ್ ತಾಣದಲ್ಲಿಯೂ ಈ ಫೋನ್ ದೊರೆಯುತ್ತಿದೆ.

ನೋಕಿಯಾ 3 ಸ್ಮಾರ್ಟ್ ಫೋನಿನಲ್ಲಿ 5 ಇಂಚಿನ HD ಡಿಸ್ ಪ್ಲೇ ಇದ್ದು, 2GB RAM ಕಾಣಬಹುದಾಗಿದೆ. ಅಲ್ಲದೇ 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಇದಲ್ಲದೇ ಈ ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಕಾಣಬಹುದಾಗಿದೆ. 4G LET ಸಫೋರ್ಟ್ ಮಾಡುವ ಈ ಫೋನಿನಲ್ಲಿ 2650 mAh ಬ್ಯಾಟರಿಯನ್ನು ನೀಡಲಾಗಿದೆ.

English summary
Nokia 3 smartphone will soon receive the Android 7.1.1 Nougat update, claims a recent report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot