ನೋಕಿಯಾ 3 ಗೆ ಬಂದಿದೆ ಬಹು ನಿರೀಕ್ಷಿತ ಕ್ಯಾಮೆರಾ ಆಪ್ ಅಪ್ಡೇಟ್
ಕಳೆದ ಕೆಲವು ವಾರಗಳಲ್ಲಿ ನೋಕಿಯಾ 3 ರ ಕ್ಯಾಮೆರಾ ಆಪ್ ನ ಕಾರ್ಯಕ್ಷಮತೆ ಕುರಿತು ಹಲವಾರು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸಾಕಷ್ಟು ದೂರುಗಳು ಕೇಳಿಬಂದಿದೆ. ಈ ತೊಂದರೆಗೆ ನೋಕಿಯಾ ತಕ್ಷಣ ಪರಿಹಾರ ನೀಡುವ ಅಗತ್ಯವಿದ್ದು, ಅದಕ್ಕೆಂದೇ ನೋಕಿಯಾ ತಂದಿದೆ ಅತ್ಯಗತ್ಯವಾದ ಕ್ಯಾಮೆರಾ ಆಪ್ ಅಪ್ಡೇಟ್. ಈ ಅಪ್ಡೇಟ್ ನಲ್ಲಿ ನೋಕಿಯಾ 3 ರ ಕ್ಯಾಮೆರಾ ಆಪ್ ನಲ್ಲಿರುವ ದೋಷಗಳನ್ನು ಪರಿಹರಿಸಿ ಉತ್ತಮ ಸುಧಾರಣೆಗಳನ್ನು ತರಲಿದೆ.

ಈ ಹೊಸ ಅಪ್ಡೇಟ್ ಮೊದಲಿಗೆ GSMArena ದಲ್ಲಿ ಕಾಣಸಿಕ್ಕಿತ್ತು. ಏನೇ ಆಗಲಿ, ಇದೊಂದು ಸಿಹಿ ಸುದ್ದಿ ಎನ್ನುವುದರಲ್ಲಿ ಸಂಶಯವಿಲ್ಲ. ಪ್ಲೇಸ್ಟೋರ್ನಲ್ಲಿ ನೋಕಿಯಾ ತನ್ನ ಕ್ಯಾಮೆರಾ ಆಪ್ ನ ಅಪ್ಡೇಟ್ ಅನ್ನು "ನ್ಯೂ ಕ್ಯಾಮೆರಾ ರಿಲೀಸ್ ಫಾರ್ ನೋಕಿಯಾ 3" ಎಂದು ಹೇಳಿಕೊಂಡಿದೆ. ಆದರೆ ಈ ಹೊಸ ಅಪ್ಡೇಟ್ನಲ್ಲಿ ಏನಿದೆ ಎನ್ನುವ ವಿವರಣೆಯನ್ನು ಇಲ್ಲಿ ನೀಡಿಲ್ಲ.
ಆದರೆ ಈ ಅಪ್ಡೇಟ್ ನಲ್ಲಿ ದೂರುಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂಬ ಅನಿಸಿಕೆಯಿದೆ.ನೀವು ನೋಕಿಯಾ 3 ಸ್ಮಾರ್ಟ್ಫೋನ್ ಹೊಂದಿದ್ದರೆ ತಕ್ಷಣ ಪ್ಲೇಸ್ಟೋರ್ ಗೆ ಹೋಗಿ ನಿಮ್ಮ ಕ್ಯಾಮೆರಾ ಆಪ್ ಅನ್ನು ಅಪ್ಡೇಟ್ ಮಾಡಿ.
ಪ್ಲೇಸ್ಟೋರ್ ನಲ್ಲಿರುವ ಕ್ಯಾಮೆರಾ ಅಪ್ ನ ಚುಟುಕು ವಿವರಣೆಯಲ್ಲಿ ಕ್ಯಾಮೆರಾ ಅಪ್ ಅನ್ನು ಹೊಸ ಆವೃತ್ತಿ 6.0090.07 ಗೆ ಮುಂದುವರೆಸಲಾಗಿದೆ ಎಂದಷ್ಟೇ ತಿಳಿಯುತ್ತದೆ. ಈ ಆಪ್ ಆಂಡ್ರಾಯ್ಡ್ 7.0 ನುಗಾಟ್ ಅಥವಾ ಇದಕ್ಕಿಂತ ಮುಂದುವರೆದ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.
ಈ ಮಧ್ಯೆ HMD ಗ್ಲೋಬಲ್ ನ ಚೀಫ್ ಪ್ರಾಡಕ್ಟ್ ಆಫೀಸರ್ ಜುಹೋ ಸರ್ವಿಕಾಸ್ ಅವರು ಕಂಪೆನಿಯು ತನ್ನ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಲುಮಿಯಾ ಕ್ಯಾಮೆರಾ ಆಪ್ ನ UI ಅನ್ನು ತರಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತು ಇತ್ತೀಚೆಗೆ ಯಾವುದೇ ಹೊಸ ಮಾಹಿತಿ ಕೇಳಿಬಂದಿಲ್ಲ.
ಒಟ್ಟಾಗಿ ಹೇಳುವುದಾದರೆ ಗ್ರಾಹಕರಿಗೆ ನೋಕಿಯಾದ ಮ್ಯಾಜಿಕ್ ಅನ್ನು ಮತ್ತೆ ನೀಡಲು HMD ತುಂಬ ಶ್ರಮವಹಿಸುತ್ತಿದ್ದು, ತನ್ನ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದೆ.HMD ಗ್ಲೋಬಲ್ ನೊಕಿಯಾ 3 ಅನ್ನು ಭಾರತದಲ್ಲಿ ಜೂನ್ 2017ರಲ್ಲಿ ಲಾಂಚ್ ಮಾಡಿತ್ತು ಮತ್ತು ಅದರ ಬೆಲೆ ರೂ 9499. ಈ ಸ್ಮಾರ್ಟ್ಫೋನ್ ಕಪ್ಪು ಮತ್ತು ನೀಲಿ ಬಣ್ಣಗಳ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, ಪಾಲಿಕಾರ್ಬೊನೇಟ್ ನ ಹಿಂಬದಿಯ ಕವಚ ಮತ್ತು ಅಲ್ಯುಮಿನಿಯಂ ಫ್ರೇಮ್ ಹೊಂದಿದೆ.
ಇನ್ನು ನೋಕಿಯಾ 3 ನ ಫೀಚರ್ಗಳ ಕುರಿತು ಹೇಳುವುದಾದರೆ, ಇದರಲ್ಲಿದೆ 5-ಇಂಚ್ HD ಡಿಸ್ಪ್ಲೇ( 720X1280 ಪಿಕ್ಸೆಲ್ ರೆಸೊಲ್ಯೂಶನ್) ಮತ್ತು 1.3GHz ಕ್ವಾಡ್-ಕೋರ್ ಮೀಡಿಯಾಟೆಕ್ 6737 ಪ್ರಾಸೆಸರ್. ಅಲ್ಲದೆ ಇದರಲ್ಲಿದೆ 2GB RAM , 16GB ಇನ್-ಬಿಲ್ಟ್ ಸ್ಟೋರೇಜ್ ಮತ್ತು ಮೈಕ್ರೋSD ಕಾರ್ಡ್ ಬಳಸಿ ಸ್ಟೋರೇಜ್ ಅನ್ನು 128 GB ಅಷ್ಟು ವಿಸ್ತರಿಸಬಹುದಾಗಿದೆ.
ಇನ್ನು ಇದರ ಕ್ಯಾಮೆರಾ ಕುರಿತು ಹೇಳುವುದಾದರೆ ಇದರ ಪ್ರೈಮರಿ ಮತ್ತು ಸೆಕೆಂಡರಿ ಕ್ಯಾಮೆರಾಗಳೆರಡೂ 8MP ರೆಸೊಲ್ಯೂಶನ್ ಹೊಂದಿದೆ.ಅಲ್ಲದೆ ಎರಡೂ ಕ್ಯಾಮೆರಾಗಳಲ್ಲೂ ಆಟೋಫೋಕಸ್ ಸಾಮರ್ಥ್ಯ ಇದ್ದು F/2.0 ಅಪರ್ಚರ್ ಹೊಂದಿದೆ. ಈ ಹ್ಯಾಂಡ್ಸೆಟ್ನಲ್ಲಿ 2650mAh Li-ion ಬ್ಯಾಟರಿ ಇದ್ದು ಆಂಡ್ರಾಯ್ಡ್ 7.0 ನುಗಾಟ್ ಓಎಸ್ ಹೊಂದಿದೆ. 143.4x71.4x8.4mm ಸುತ್ತಳತೆ ಹೊಂದಿರುವ ನೋಕಿಯಾ 3 ಸ್ಮಾರ್ಟ್ಫೋನ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಬಿಲ್ಟ್-ಇನ್ ಆಪ್ ಆಗಿ ಬರುತ್ತದೆ.


Click it and Unblock the Notifications








