ಇತ್ತೀಚಿಗೆ ಕಾಲಿಟ್ಟ 'ನೋಕಿಯಾ 4.2' ಫೋನ್ ಹೇಗಿದೆ?..ಖರೀದಿಗೆ ಯೋಗ್ಯವೇ?

|

ಮೊನ್ನೆ ಮೊನ್ನೆಯಷ್ಟೇ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ನೋಕಿಯಾದ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ 'ನೋಕಿಯಾ 4.2' ದೇಶದ ಮೊಬೈಲ್ ಪ್ರಿಯರ ಗಮನ ಸೆಳೆಯುವಲ್ಲಿ ಸಫಲವಾಗಿದೆ ಎನ್ನಬಹುದು. ನೋಡಲು ನೋಕಿಯಾ 5.1 ಪ್ಲಸ್‌ನ ರೀತಿಯಲ್ಲಿಯೇ ಇರುವ ಈ ಫೋನ್ ಮೇಲೆ ನೋಕಿಯಾ ಕಂಪೆನಿಯು ಬಹುನಿರೀಕ್ಷೆಯನ್ನು ಹೊತ್ತಿದ್ದು, ಈ ಸ್ಮಾರ್ಟ್‌ಫೋನ್ ಇದೀಗ ಕೇವಲ 10,990 ರೂ.ಗಳಿಗೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.

ಕಪ್ಪು ಮತ್ತು ಪಿಂಕ್ ಸ್ಯಾಂಡ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಈ ಫೋನ್ 3 ಜಿಬಿ ರ್ಯಾಮ್‌ ಮತ್ತು 32 ಜಿಬಿ ಸ್ಟೋರೇಜ್‌ ಆಯ್ಕೆಯಲ್ಲಿ ಲಬ್ಯವಿದ್ದು, ಕೇವಲ 10,990 ರೂ.ಗಳಿಗೆ ಫೋನನ್ನು ಖರೀದಿಸಬಹುದು. ಜೊತೆಗೆ ಫೋನ್ ಬಿಡುಗಡೆಯ ಜೊತೆಗೆ ಲಾಂಚ್‌ ಆಫರ್ ಆಗಿ 3,500 ಮೌಲ್ಯದ ಉಚಿತ ಆರು ತಿಂಗಳ ಸ್ಕ್ರೀನ್ ರಿಪ್ಲೇಸ್‌ಮೆಂಟ್‌ ಮತ್ತು 10% ಕ್ಯಾಶ್‌ ಬ್ಯಾಕ್‌ ಆಫರ್ ಸಹ ಲಭ್ಯವಿರುವುದರಿಂದ ಈ ಫೋನ್ ಹೆಚ್ಚು ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯನ್ನು ಹೊಂದಲಾಗಿದೆ.

ಇತ್ತೀಚಿಗೆ ಕಾಲಿಟ್ಟ 'ನೋಕಿಯಾ 4.2' ಫೋನ್ ಹೇಗಿದೆ?..ಖರೀದಿಗೆ ಯೋಗ್ಯವೇ?

ಹಾಗಾದರೆ, 2.5 ಡಿ ನ್ಪೋರ್ಟ್ಸ್ ಗ್ಲಾಸ್ ಪ್ರೋಟೆಕ್ಷನ್ ಹೊಂದಿರುವ ವಾಟರ್‌ ಡ್ರಾಪ್ ಡಿಸ್‌ಪ್ಲೇ, ಪವರ್‌ ಬಟನ್ಸ್ ಇರುವ ಕಡೆ ಹೊಸ ರೀತಿಯ ಬಟನ್ಸ್ ರೀತಿಯ ವಿಶೇಷತೆಗಳನ್ನು ಹೊತ್ತು ಬಂದಿರುವ 'ನೋಕಿಯಾ 4.2' ಸ್ಮಾರ್ಟ್‌ಫೋನ್ ಹೇಗಿದೆ? 10,990 ರೂ.ಗಳಿಗೆ 'ನೋಕಿಯಾ 4.2' ಫೋನನ್ನು ಖರೀದಿಸಲು ಇರುವ ಕಾರಣಗಳೇನು ಮತ್ತು ಫೀನಿನ ಫೀಚರ್ಸ್ ಮತ್ತು ಅದರ ವಿಶೇಷತೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಯೋಣ.

ಹೊಸ ರೀತಿಯ ಬಟನ್ಸ್

ಹೊಸ ರೀತಿಯ ಬಟನ್ಸ್

'ನೋಕಿಯಾ 4.2' ಫೋನಿನಲ್ಲಿ ಪವರ್‌ ಬಟನ್ಸ್ ಇರುವ ಕಡೆ ಹೊಸ ರೀತಿಯ ಬಟನ್ಸ್‌ಗಳನ್ನು ಹೊಂದಿದ್ದು ಅದಕ್ಕೆ ಎಲ್‌ಇಡಿ ಅಧಿಸೂಚಕ ಬೆಳಕನ್ನು ಅಳವಡಿಸಲಾಗಿದೆ. ಮೊಬೈಲ್‌ಗೆ ಯಾವುದಾದರೂ ನೋಟಿಫಿಕೇಶನ್ ಅಥವಾ ಇಮೇಲ್‌ ಅಥವಾ ಮಿಸ್‌ ಕಾಲ್‌ ಗಳು ಬಂದಲ್ಲಿ ಅದರಲ್ಲಿ ಒಂದು ಲೈಟ್ ಬರುವ ಮೂಲಕ ನಿಮ್ಮನ್ನು ಎಚ್ಚರಿಸುತ್ತದೆ. ಜೊತೆಗೆ ಎಡಭಾಗದಲ್ಲಿ ಸಹಾಯಕ ಬಟ್‌ನ್‌ ಅನ್ನು ಅಳವಡಿಸಲಾಗಿದ್ದು ಇದನ್ನು ಸ್ಪರ್ಶಿಸುವ ಮೂಲಕ ಅದನ್ನು ಉಪಯೋಗಿಸಬಹುದಾಗಿದೆ.

ಡಿಸೈನ್‌ ಹೇಗಿದೆ?

ಡಿಸೈನ್‌ ಹೇಗಿದೆ?

ಮೊದಲೇ ಹೇಳಿದಂತೆ ನೋಡಲು ನೋಕಿಯಾ 5.1 ಪ್ಲಸ್‌ನ ರೀತಿಯಲ್ಲಿಯೇ ಇರುವ ನೋಕಿಯಾ 4.2 ಸ್ಮಾರ್ಟ್‌ಫೋನ್ ಆಕರ್ಷಕ ಡಿಸೈನ್‌ನಲ್ಲಿ ಕಂಗೊಳಿಸುತ್ತಿದೆ. ಫೋನಿನ ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ( ಬೆಜೆಲ್ ಲೆಸ್) ಕೂಡಿದ್ದು, ಹಿಂಬದಿಯಲ್ಲಿ ಕ್ಯಾಮೆರಾ ಮತ್ತು ರಿಯರ್ ಫಿಂಗರ್‌ ಸೆನ್ಸಾರ್ ಆಯ್ಕೆಯನ್ನು ಹೊಂದಿದೆ. ಎರಡೂ ಬದಿಯಲ್ಲಿ ಗ್ಲಾಸ್ ಬಾಡಿ ಡಿಸೈನ್ ಹೊಮದಿರುವುದರಿಂದ ಫೋನ್ ಪ್ರೀಮಿಯಮ್ ಲುಕ್ ಹೊಂದಿದೆ ಎಂದು ಹೇಳಬಹುದು.

ಡಿಸ್‌ಪ್ಲೇ ಹೇಗಿದೆ?

ಡಿಸ್‌ಪ್ಲೇ ಹೇಗಿದೆ?

ನೋಕಿಯಾ 4.2 ಸ್ಮಾರ್ಟ್‌ಫೋನಿನಲ್ಲಿ 720x1520 ಸಾಮರ್ಥ್ಯದ ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 5.71 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ನೀಡಲಾಗಿದೆ. 19:9 ಅನುಪಾತದಲ್ಲಿ TFT ಮಾದರಿಯ ಈ ಡಿಸ್‌ಪ್ಲೇಯು 2.5 ಡಿ ನ್ಪೋರ್ಟ್ಸ್ ಗ್ಲಾಸ್ ಪ್ರೋಟೆಕ್ಷನ್ ಹೊಂದಿದ್ದು, ಈ ಡಿಸ್‌ಪ್ಲೇ ಹೆಚ್ಚು ಗುಣಮಟ್ಟದ ಜೊತೆಗೆ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು ಕಡಿಮೆ ಬೆಲೆಯಲ್ಲಿ ವಾಟರ್‌ ಡ್ರಾಪ್ ನೋಚ್ ವಿನ್ಯಾಸದ ಡಿಸ್‌ಪ್ಲೇ ಮೊಬೈಲ್ ಇದಾಗಿದೆ.

ಪ್ರೊಸೆಸರ್ ಹೇಗಿದೆ?

ಪ್ರೊಸೆಸರ್ ಹೇಗಿದೆ?

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಅಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಮಲ್ಟಿಟಾಸ್ಕ್ ಕೆಲಸಗಳಿಗೆ ಬೆಂಬಲ ನೀಡಲಿದೆ. ಗೇಮಿಂಗ್‌ಗೆ ಪೂರ್ಕವಾಗಿ ಪ್ರೊಸೆಸರ್ ಬಲ ನೀಡಲಿದೆ. ಶಿಯೋಮಿ ಸೇರಿದಂತೆ ಹಲವು ಚೀನಾ ಕಂಪೆನಿಗಳ ಸ್ಮಾರ್ಟ್‌ಪೋನ್‌ಗಳಿಗೆ ಹೋಲಿಸಿದರೆ ನೋಕಿಯಾ 4.2 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿಷಯದಲ್ಲಿ ಹಿಂದುಳಿದಿದೆ ಎಂದು ಹೇಳಬಹುದು.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ನೋಕಿಯಾ 4.2 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 2.2 ಅಪಾರ್ಚರ್ ನಲ್ಲಿ ಪ್ರಮುಖ ಸಂವೇದಕವು 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದರೆ, ಫೋನಿನ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದರೆ, ಇನ್ನು ಸೆಲ್ಫಿ ಬೋಕೆಗಳಿಗೆ ಬೆಂಬಲ ನೀಡುವಂತೆ ಸೆಲ್ಫಿ ಕ್ಯಾಮೆರಾವು 8 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಕ್ಯಾಮೆರಾ ತಂತ್ರಜ್ಞಾನದ ವಿಷಯದಲ್ಲಿ ನೀವು ಸಾಕಷ್ಟು ವಿಷಯಗಳನ್ನು ನಿರೀಕ್ಷಿಸಬಹುದು.

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಬ್ಯಾಟರಿ ಮತ್ತು ಇತರೆ ಫೀಚರ್ಸ್!

3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಅತ್ಯುತ್ತಮ ಬ್ಯಾಕ್‌ಅಪ್‌ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ ಉತ್ತಮ ಸಾಫ್ಟ್ವೇರ್ ಆಪ್ಟಿಮೈಸೇಶನ್ಗಳೊಂದಿಗೆ ಬಂದಾಗ, ನೋಕಿಯಾ 4.2 ಯು ಕಡಿಮೆ ಕಾರ್ಯನಿರ್ವಹಣೆ ನೀಡಬಹುದು. ಇನ್ನು ಫೋನಿನಲ್ಲಿ ಬ್ಲೂಟೂತ್‌ v4.2, ಸೇರಿದಂತೆ GPS, NFC, Micro-USB ಆಯ್ಕೆಗಳು ಸಹ ಇವೆ.ಮೈಕ್ರೋ ಎಸ್‌ಡಿ ಕಾರ್ಡ್‌ ಸಹಾಯದಿಂದ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 400GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಖರೀದಿಗೆ ಯೋಗ್ಯವೇ?

ಖರೀದಿಗೆ ಯೋಗ್ಯವೇ?

ನೋಕಿಯಾ 4.2 ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಮತ್ತು ಗ್ಲಾಸ್ ಬಾಡಿ ಡಿಸೈನ್ ಬಿಟ್ಟರೆ ಇನ್ನೆಲ್ಲಾ ಫೀಚರ್ಸ್‌ಗಳು ಇಂದಿನ ಮಾರುಕಟ್ಟೆಗೆ ಪೈಪೋಟಿ ನೀಡುವಂತಹ ಫೀಚರ್ಸ್ ಮತ್ತು ಬೆಲೆಯನ್ನು ಈ ಫೋನ್ ಹೊಂದಿಲ್ಲ ಎಂದು ಹೇಳಬಹುದು. ಪ್ರೊಸೆಸರ್, ಡಿಸ್‌ಪ್ಲೇ ಸಾಮರ್ಥ್ಯ ಮತ್ತು ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್‌ಗಳು ಈಗ ಇದಕ್ಕಿಂತಲೂ ಕಡಿಮೆ ಬೆಲೆಗೆ ದೊರಕುತ್ತಿವೆ. ಆದರೆ, ಬ್ರ್ಯಾಂಡ್ ನೋಡಿ ಮೊಬೈಲ್ ಖರೀದಿಸುವವರಿಗೆ ಈ ಫೋನ್ ಅತ್ಯುತ್ತಮ ಫೋನ್ ಎನ್ನಬಹುದು.

Best Mobiles in India

English summary
Nokia 4.2 price in India is Rs. 10990 on 2019-05-10 Check out Nokia 4.2 price, specifications, features, news, image . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X