ನೋಕಿಯಾ 5.3 ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿರುವ ನೋಕಿಯಾ ತನ್ನ ವಿವಿಧ ಉತ್ತಮ ಮೊಬೈಲ್‌ಗಳ ಮೂಲಕ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಈಗಾಗ್ಲೆ ಸೈ ಎನಿಸಿಕೊಂಡಿದೆ. ಇದೀಗ ನೋಕಿಯಾ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದು, ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಭರವಸೆಯನ್ನ ಮೂಡಿಸಿದೆ. ಸದ್ಯ ನೋಕಿಯಾ 8.3 5 ಜಿ, ನೋಕಿಯಾ 5.3 ಮತ್ತು ನೋಕಿಯಾ 1.3 ಸೇರಿದಂತೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಮೊಬೈಲ್‌ ಜಗತ್ತಿನ ಎವರ್‌ಗ್ರೀನ್‌ ಬ್ರ್ಯಾಂಡ್‌ ಅಂದರೆ ಅದು ನೋಕಿಯಾ ಕಂಪೆನಿ ಮಾತ್ರ. ಸದ್ಯ ನೋಕಿಯಾ ಕಂಪೆನಿ ಇದೀಗ ನೋಕಿಯಾ 8.3, ನೋಕಿಯಾ 5.3 ಮತ್ತು ನೋಕಿಯಾ 1.3 ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ತನ್ನದೇ ಆದ ವಿವಿಧ ರೀತಿಯ ಫೀಚರ್ಸ್‌ಗಳನ್ನ ಹೊಂದಿದ್ದು, ಬಹಳ ಆಕರ್ಷಕವಾಗಿವೆ. ಸದ್ಯ ನಾವು ಈ ಲೇಖನದಲ್ಲಿ ನೋಕಿಯಾ 5.3 ಸ್ಮಾರ್ಟ್‌ಫೋನ್‌ ಕುರಿತ ಮಾಹಿತಿಯನ್ನ ತಿಳಿಸಿಕೊಡ್ತಿವಿ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 665 SoC ಪ್ರೊಸೆಸರ್‌ ಅನ್ನು ಹೊಂದಿದೆ. ಅಲ್ಲದೆ ಇನ್ನು ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ 720x1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.55 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇ ಎಚ್‌ಡಿ + ಡಿಸ್‌ಪ್ಲೇ ಆಗಿದ್ದು 20: 9 ರಚನೆಯ ಅನುಪಾತವನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಟಿಯರ್‌ಡ್ರಾಪ್ ಆಕಾರದ ನಾಚ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಇದು ಇನ್‌ಸೆಲ್‌ ಡಿಸ್‌ಪ್ಲೇ ಆಗಿದ್ದು ರಕ್ಷಣೆಗಾಗಿ 2.5 ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ಯಾನೆಲ್‌ ಅನ್ನು ಒಳಗೊಂಡಿದೆ. ಇದು ಡಿಸ್‌ಪ್ಲೇಯನ್ನು ದೂಳು ಮತ್ತು ನೀರಿನಿಂದ ರಕ್ಷಿಸುತ್ತದೆ.

ಪ್ರೊಸೆಸರ್‌

ಪ್ರೊಸೆಸರ್‌

ನೋಕಿಯಾ 5.3 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 SoC ಪ್ರೊಸೆಸರ್ ವೆಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 3GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನ 512GB ವೆರೆಗೆ ವಿಸ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 13ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ 118 ಡಿಗ್ರಿ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌, ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೊ ಶೂಟರ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಎಲ್‌ಇಡಿ ಫ್ಲಾಶ್‌ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್‌ ಅನ್ನು ಹೊಂದಿದ್ದು, 10w ವೇಗದ ಚಾರ್ಜಿಂಗ್‌ ಬೆಂಬಲವನ್ನು ಪಡೆಯಲಿದೆ. ಅಲ್ಲದೆ ಬಳಕೆದಾರರು 2 ದಿನಗಳ ಬ್ಯಾಟರಿ ಅವಧಿಯನ್ನು ಪಡೆಯಲಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್‌ ಬ್ಲೂಟೂತ್‌ v4, ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಟೈಪ್‌-ಸಿ, ಎಫ್‌ಎಮ ರೇಡಿಯೊ, 3.5mm ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಆಂಬಿಯೆಂಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಸಹ ಹೊಂದಿದೆ. ಅಲ್ಲದೆ ರಿಯರ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 5.3 ಸ್ಮಾರ್ಟ್‌ಫೋನ್‌ ಬೆಲೆ 189 ಯುರೋಗಳಿಗೆ ನಿಗದಿಪಡಿಸಲಾಗಿದ್ದು, ಇದು ಭಾರತದಲ್ಲಿ ಸುಮಾರು 15,110 ರೂ. ಬೆಲೆಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಚಾರ್ಕೋಲ್ ಮತ್ತು ಸಯಾನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Nokia 5.3 launched with Snapdragon 665 SoC: Price, full specifications and more.to know more visit to kannada.gizbot.comn

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X