ನೋಕಿಯಾ ಆಂಡ್ರಾಯ್ಡ್ 5 ಬುಕ್ಕಿಂಗ್ ಸ್ಟಾರ್ಟ್!!..ಬುಕ್ ಮಾಡುವುದು ಹೇಗೆ?
ಬಹಳ ದಿನದಿಂದ ನೋಕಿಯಾ ಅಭಿಮಾನಿಗಳು ಕಾಯುತ್ತಿರುವ 12,899ಗಳಿಗೆ ಲಭ್ಯವಿರುವ ನೋಕಿಯಾ 5 ಸ್ಮಾರ್ಟ್‌ಫೋನ್
ನೋಕಿಯಾದ ಮಧ್ಯಮ ಬೆಲೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ 5 ನಾಳೆಯಿಂದ ಬುಕ್ಕಿಂಗ್‌ಗೆ ರೆಡಿಯಾಗಿದೆ.!! ಆಫ್‌ಲೈನ್ ಸ್ಟೋರ್ಗಳಲ್ಲಿ ಮಾತ್ರವೇ ನೋಕಿಯಾ 5 ಮಾರಾಟಕ್ಕಿಟ್ಟಿದ್ದು, ಮುಂಗಡ ಬುಕ್ ಮಾಡುವ ಮೂಲಕ ನೋಕಿಯಾ ಆಂಡ್ರಾಯ್ಡ್ ಬಹುಬೇಗ ನಿಮ್ಮ ಕೈ ಸೇರಲಿದೆ.
ಬಹಳ ದಿನದಿಂದ ನೋಕಿಯಾ ಅಭಿಮಾನಿಗಳು ಕಾಯುತ್ತಿರುವ 12,899ಗಳಿಗೆ ಲಭ್ಯವಿರುವ ನೋಕಿಯಾ 5 ಸ್ಮಾರ್ಟ್‌ಫೋನ್ ನಾವು ಕೊಡುವ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದ್ದು, ಸ್ಮಾರ್ಟ್‌ಫೋನ್ ಹೇಗಿದೆ? ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

5.2 ಇಂಚಿನ HD ಡಿಸ್‌ಪ್ಲೇ ಮತ್ತು ಪ್ರೊಸೆಸರ್!
- ನೋಕಿಯಾ 5 ಸ್ಮಾರ್ಟ್‌ಫೋನ್ 5.2 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಆಂಡ್ರಾಯ್ಡ್ ನ್ಯೂಗಾದಲ್ಲಿ ಈ ಫೋನ್ ಕಾರ್ಯನಿರ್ವಹಿಸಿದ್ದು, ಕ್ವಾಲ್ಕಮ್ ಕಂಪೆನಿಯ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಗೆ ಸಹಾಯವಾಗಲಿದೆ.!!

RAM ಮತ್ತು ಆಂತರಿಕ ಮೆಮೊರಿ.!!
ನೋಕಿಯಾ 5 2GB RAM ಹಾಗೂ 16 GB ಮೆಮೊರಿಯನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದ್ದು. ಮೆಮೊರಿಯಲ್ಲಿ ಮುಂದಿರುವ ನೋಕಿಯಾ 5 RAM ನಲ್ಲಿ ಹಿಂದೆಬಿದ್ದಂತಿದೆ.

ಕ್ಯಾಮರಾ ಹೇಗಿದೆ?
ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೊಂದಿರಬಹುದಾದ ಕ್ಯಾಮೆರಾವನ್ನೆ ನೋಕಿಯಾ 5 ಸ್ಮಾರ್ಟ್‌ಫೋನ್ ಹೊಂದಿದೆ ಎನ್ನಬಹುದಾಗಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. ಪಿಕ್ಸೆಲ್ ಲೆಕ್ಕದಲ್ಲಿ ಚಿತ್ರ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಬಹುದು.!

ಬ್ಯಾಟರಿ ಮತ್ತು ಫಿಂಗರ್ ಪ್ರಿಂಟ್.
ನೋಕಿಯಾ 5 ಸ್ಮಾರ್ಟ್‌ಫೋನ್ ಇಂದಿನ ಯುವ ಜನಾಂಗಕ್ಕೆ ಬೇಕಾದ ಫೀಚರ್ಸ್ ಎಲ್ಲವನ್ನು ಹೊಂದಿದ್ದು, ಸ್ಮಾರ್ಟ್‌ಪೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ. 3000 mAh ಬ್ಯಾಟರಿ ಇದ್ದು, 4G , 4Gವೋಲ್ಟ್ ಫಾಸ್ಟ್ ಚಾರ್ಜಿಂಗ್ ಫಿಚರ್ ಎಲ್ಲವನ್ನು ಹೊಂದಿದೆ.!!


Click it and Unblock the Notifications