ನೋಕಿಯಾ 6.3 ಸ್ಮಾರ್ಟ್‌ಫೋನ್ ಫೀಚರ್ಸ್ ಬಹಿರಂಗ!
ಟೆಕ್ ವಲಯದಲ್ಲಿ ನೋಕಿಯಾ ಕಂಪೆನಿ ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ಎನಿಸಿಕೊಂಡಿದೆ. ಅಲ್ಲದೆ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಇದಲ್ಲದೆ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಸಹ ನೋಕಿಯಾ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಹೌದು, ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ ಕಂಪೆನಿ ಕಳೆದ ವರ್ಷ ನೋಕಿಯಾ 6.2 ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಅದರ ಮುಂದುವರೆದ ಆವೃತ್ತಿಯ ಸ್ಮಾರ್ಟ್‌ಫೋನ್ ನೋಕಿಯಾ 6.3 ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಈ ಹಿಂದೆ ನಿರೀಕ್ಷಿಸಿದಂತೆ ಸ್ನಾಪ್‌ಡ್ರಾಗನ್ 6 ಸರಣಿಯ ಬದಲು ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ನೋಕಿಯಾ 6.3 ರ ಮೂಲಮಾದರಿಯನ್ನು ಸ್ನಾಪ್‌ಡ್ರಾಗನ್ 730 SoC ಯೊಂದಿಗೆ ಗುರುತಿಸಲಾಗಿದೆ ಎಂದು ಆನ್‌ಲೈನ್‌ನಲ್ಲಿ ವರದಿ ಆಗಿದೆ. ಹಾಗಾದ್ರೆ ಆನ್‌ಲೈನ್ ವರದಿ ಪ್ರಕಾರ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸದ್ಯ ಆನ್‌ಲೈನ್‌ನಲ್ಲಿ ವರದಿ ಆಗಿರುವಂತೆ ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಎಂದು ಹೇಳಲಾಗ್ತಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 24 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ ಎನ್ನಲಾಗ್ತಿದೆ. ಇದರೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮ್ಯಾಕ್ರೋ ಲೆನ್ಸ್ ಮತ್ತು ಡೆಪ್ತ್ ಸೆನ್ಸಾರ್ ಹೊಂದಿರುವ ಕ್ಯಾಮೆರಾ ಸೆಟ್‌ಅಪ್‌ಗಳನ್ನ ಹೊಂದಿರಲಿದೆ ಎನ್ನಲಾಗ್ತಿದೆ. ಆದರೂ ಇದರೊಂದಿಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್, 2 ಮೆಗಾಪಿಕ್ಸೆಲ್ ಆಳ ಮ್ಯಾಕ್ರೋ ಲೆನ್ಸ್ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಲ್ಲದೆ ನೋಕಿಯಾ ಪವರ್ ಯೂಸರ್ ನೀಡಿದ ವರದಿಯ ಪ್ರಕಾರ ನೋಕಿಯಾ 6.3 ಅನ್ನು ಸ್ನಾಪ್ಡ್ರಾಗನ್ 730 SoC ಪ್ರೊಸೆಸರ್ ವೇಗವನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 3GB RAM + 64GB, 4GB RAM + 64GB ಇಂಟರ್ ಸ್ಟೋರೆಜ್ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾದರ ಬಗ್ಗೆ ಯಾವುದೇ ಮಾಹಿತಿಯನ್ನ ನೋಕಿಯ ಕಂಪೆನಿ ಹಂಚಿಕೊಂಡಿಲ್ಲ.

ಇನ್ನು ನೋಕಿಯಾ 6.3 ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರುತ್ತದೆ ಎನ್ನಲಾಗ್ತಿದೆ. ಜೊತೆಗೆ ಅದು ಪವರ್ ಬಟನ್ ಆಗಿಯೂ ಸಹ ಉಪಯೋಗಿಸಬಹುದು ಎಂದು ವರದಿ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕಡಿಮೆ ಗಾತ್ರದ ಡಿಸ್‌ಪ್ಲೇಯನ್ನ ಹೊಂದರಿಬಹುದು ಎನ್ನಲಾಗಿದೆ. ಏಕೆಂದರೆ ಅದು ಒಂದು ಕೈ ಬಳಕೆಗೆ ಹೆಚ್ಚು ಸೂಕ್ತವಾಗಿರುತ್ತದೆ ಎಂದು ವರದಿ ಹೇಳುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಯುರೋ 249 (ಸರಿಸುಮಾರು 20,400 ರೂ.)ರೂ ಗೆ ಲಭ್ಯವಾಗಿವ ಸಾದ್ಯತೆ ಇದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications




