ಇಂದಿನಿಂದ 'ನೋಕಿಯಾ 6' ಸೇಲ್!!..ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್!!

Written By:

ಮಧ್ಯಮ ಬೆಲೆಯಲ್ಲಿ ಭಾರತೀಯರನ್ನು ಸೆಳೆಯಲು ಕಾತುರವಾಗಿರುವ ನೋಕಿಯಾ ಇಂದು ತನ್ನ ಅತ್ಯದ್ಬುತ ನೋಕಿಯಾ 6 ಆಂಡ್ರಾಯ್ಡ್ ಫೋನ್ ಅನ್ನು ಮಾರಾಟಕ್ಕಿಟ್ಟಿದೆ.! ಇಂದಿನಿಂದ ಅಮೆಜಾನ್‌ನಲ್ಲಿ ನೋಕಿಯಾ 6 ಆಂಡ್ರಾಯ್ಡ್ ಫೋನ್ ಮಾರಾಟಕ್ಕಿದ್ದು, ಅಮೆಜಾನ್ ಇಂಡಿಯಾದಲ್ಲಿ ನೋಂದಾಯಿಸಿದ ಗ್ರಾಹಕರು ಮಾತ್ರ ಫೋನ್ ಖರೀದಿಸಬಹುದಾಗಿದೆ.!!

ಆಗಸ್ಟ್ 28 ರಂದು ಪ್ರೀ ಬುಕ್ಕಿಂಗ್ ಮುಕ್ತಾಯವಾಗಿದ್ದು, ಆಗಸ್ಟ್ 23 ಅಥವಾ ಆಗಸ್ಟ್ 30 ರವರೆಗೆ ನೋಂದಾಯಿಸಿದ ಗ್ರಾಹಕರು ಮುಂದಿನ ಮಾರಾಟಕ್ಕೆ ಮತ್ತೆ ನೋಂದಾಯಿಸಬೇಕಾದ ಅಗತ್ಯವಿಲ್ಲ ಎಂದು ಅಮೆಜಾನ್ ಹೇಳಿದೆ.!! ಈಗಾಗಲೇ 10 ಲಕ್ಷಕ್ಕಿಂತ ಹೆಚ್ಚು ಗ್ರಾಹಕರು ಫೋನ್ ಅನ್ನು ಬುಕ್ ಮಾಡಿದ್ದು, ಇಂದು 12 ಗಂಟೆಗೆ ಇರುವ ಫ್ಲಾಶ್‌ಸೇಲ್‌ನಲ್ಲಿ ಫೋನ್ ಖರೀದಿಸಬಹುದಾಗಿದೆ.!!

ಇಂದಿಗೂ ಕೂಡ ಭಾರತೀಯರ ಮೆಚ್ಚಿನಬಬ್ರಾಂಡ್ ಎಂದು ಹೆಸರು ಪಡೆದಿರುವ ನೋಕಿಯಾದ ಮೊದಲ ಆಂಡ್ರಾಯ್ಡ್ ಫೋನ್ ''ನೋಕಿಯಾ 6'' ಅತ್ಯದ್ಬುತ ಫೀಚರ್ಸ್ ಹೊಂದಿದ್ದು, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

ಮಾರಾಟಕ್ಕಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್‌ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ. ಮಲ್ಟಿಮೀಡಿಯಾಗೆ ಅದ್ಬುತ ಸಪೋರ್ಟ್ ನೀಡುವ ಸ್ಮಾರ್ಟ್‌ಫೋನ್ ಇದಾಗಿದೆ.

ಆಂಡ್ರಾಯ್ಡ್ ನ್ಯೂಗಾ 7.1.1!!

ಆಂಡ್ರಾಯ್ಡ್ ನ್ಯೂಗಾ 7.1.1!!

ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.1.1" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್‌ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಆಂಡ್ರಾಯ್ಡ್ ನ್ಯೂಗಾ 7.1.1 ಆಪರೇಟಿಂಗ್ ಸಿಸ್ಟಮ್ ಹೊಂದಿರುವುದು.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
4GB RAm ಮತ್ತು 64GB ROM!!

4GB RAm ಮತ್ತು 64GB ROM!!

ಸ್ಮಾರ್ಟ್‌ಫೋನ್‌ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್‌ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

"ನೋಕಿಯಾ 6" ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

 ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಿದ್ದು, 14,999 ರೂಪಾಯಿಗಳಿಗೆ ಮಾರಾಟಕ್ಕಿದೆ.!! ಇನ್ನು ಇದರ ಜೊತೆಗೆ ನೋಕಿಯಾ 6 ಆಂಡ್ರಾಯ್ಡ್ ಫೋನ್‌ ಜೊತೆಗೆ ಅಮೆಜಾನ್ ನಾಲ್ಕು ಆಫರ್‌ಗಳನ್ನು ನೀಡಿದೆ.!!

ಓದಿರಿ:ಸೆಪ್ಟೆಂಬರ್‌ 12ಕ್ಕೆ ಬಿಡುಗಡೆಯಾಗಲಿದೆ ''ಐಫೋನ್ 8''!!..ಈ ಬಾರಿ ಏನೇನು ಹೊಸತು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 6 price in India is Rs. 14,999. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot