Subscribe to Gizbot

ಭಾರತದಲ್ಲಿ ಇಂದು ನೋಕಿಯಾ ಆಂಡ್ರಾಯ್ಡ್ ರಿಲೀಸ್!!..ಹೊರಬಿತ್ತು ಬೆಲೆಯ ಮಾಹಿತಿ!!!

Written By:

ಜೂನ್ 13ರಂದು, ಅಂದರೆ ಇಂದು ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳು ರಿಲೀಸ್ ಆಗುತ್ತಿದೆ. ಪ್ರತಿಯೊಬ್ಬ ಭಾರತೀಯರನ್ನು ಹಿಡಿದಿಟ್ಟಿರುವ ನೋಕಿಯಾ ಇನ್ನೇನು ಆಂಡ್ರಾಯ್ಡ್ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಲಿದೆ.ಇದೇ ಮೊದಲ ಬಾರಿಗೆ ಭಾರತದಲ್ಲಿ ಆಂಡ್ರಾಯ್ಡ್ ಫೋನ್ ಪರಿಚಯಸಿಸುತ್ತಿದ್ದು, ಎಲ್ಲರಿಗೂ ಕುತೋಹಲ ಗರಿಗೆದರಿದೆ.!!

ನೋಕಿಯಾದ ಮೂರು ಆಂಡ್ರಾಯ್ಡ್  ಫೋನ್‌ಗಳು ಭಾರತದಲ್ಲಿ ಒಮ್ಮೆಲೆ ಬಿಡುಗಡೆಯಾಗುತ್ತಿದ್ದು, ನೋಕಿಯಾ 6, ನೋಕಿಯಾ 5 ಮತ್ತು ನೋಕಿಯಾ 3 ಸ್ಮಾರ್ಟ್‌ಫೋನ್‌ಗಳು ಈ ಪಟ್ಟಿಯಲ್ಲಿವೇ. ಇನ್ನು ಬೆಲೆಯ ವಿಷಯದಲ್ಲಿಯೂ ಮಾಹಿತಿ ಹೊರಬಿದ್ದಿದ್ದು, ಸ್ಮಾರ್ಟ್‌ಫೋನ್ ಬೆಲೆಗಳು ಬಹುತೇಕ ಫೈನಲ್ ಆಗಿವೆ.!!

ಭಾರತದಲ್ಲಿ ಇಂದು ನೋಕಿಯಾ ಆಂಡ್ರಾಯ್ಡ್ ರಿಲೀಸ್!!..ಹೊರಬಿತ್ತು ಬೆಲೆಯ ಮಾಹಿತಿ!!!

ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಯಂತೆ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡೆಮೆಯಾಗಿದ್ದು, ಜಾಗತಿಕ ಮಾರುಕಟ್ಟೆಗಿಂತ ನೋಕಿಯಾ ಭಾರತದಲ್ಲಿ ಕಡಿಮೆ ಬೆಲೆಗೆ ದೊರೆಯಲಿದೆ.ಚೀನಾದಲ್ಲಿ 16,750 ರೂಪಾಯಿಗಳಿಗೆ ಬಿಡುಗಡೆಯಾಗಿದ್ದ ನೋಕಿಯಾ 6 ಭಾರತದಲ್ಲಿ 15,000 ರೂಪಾಯಿಗಳಿಗೆ ರಿಲೀಸ್ ಆಗುತ್ತಿದೆ.!!

ಬೆಲೆ ಮತ್ತು ಬ್ರಾಂಡ್ ಎರಡನ್ನು ಪರಿಗಣಿಸುವ ಭಾರತೀಯರನ್ನು ಸೆಳೆಯಲು ನೋಕಿಯಾ ಕಂಪೆನಿ( ಹೆಚ್‌ಎಮ್‌ಡಿ ಗ್ಲೋಬಲ್ ) ನಿರ್ಧರಿಸಿದ್ದು, ಇದೇ ಕಾರಣಕ್ಕಾಗಿ ಭಾರತದಲ್ಲಿ ನೋಕಿಯಾ ಬೆಲೆ ಕಡಿಮೆಯಾಗುತ್ತಿದೆ ಎನ್ನುವ ವರದಿ ಹೊರಬಿದ್ದಿದೆ. ಹಾಗಾಗಿ, ಭಾರತೀಯರು ಕಡಿಮೆ ಬೆಲೆಗೆ ನೋಕಿಯಾ ಪಡೆಯಲಿದ್ದಾರೆ.!!

ಭಾರತದಲ್ಲಿ ಇಂದು ನೋಕಿಯಾ ಆಂಡ್ರಾಯ್ಡ್ ರಿಲೀಸ್!!..ಹೊರಬಿತ್ತು ಬೆಲೆಯ ಮಾಹಿತಿ!!!

ಇನ್ನು ನೋಕಿಯಾ ಆಂಡ್ರಾಯ್ಡ್ ಎಲ್ಲಿ ಮಾರಾಟವಾಗುತ್ತದೆ ಎಂದು ನೋಕಿಯಾ ಕಂಪೆನಿ ಸ್ಪಷ್ಟಪಡಿಸಿಲ್ಲ. ಆದರೆ, ಆಫ್‌ಲೈನ್ ಮಾರುಕಟ್ಟೆ ಮತ್ತು ಪ್ರಖ್ಯಾತ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿಯೇ ಸೇಲ್ ಎಂದು ಮಾಧ್ಯಮಗಳು ವರದಿ ಮಾಡಿವೆ.!!

English summary
Nokia 6, Nokia 5, and Nokia 3 smartphones will be launched in India today by HMD Global.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot