Subscribe to Gizbot

ಭಾರತದಲ್ಲಿ ಇದೇ 13ಕ್ಕೆ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ!!..ಬೆಲೆ ಎಷ್ಟು? ಎಲ್ಲೆಲ್ಲಿ ಮಾರಾಟ?

Written By:

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತವರಿಗೆ ಸಿಹಿಸುದ್ದಿ!! ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಭಾರತದಲ್ಲಿ ಇದೇ ತಿಂಗಳ 13 ನೇ ತಾರೀಖಿನಂದು ನೋಕಿಯಾ3, ನೋಕಿಯಾ5, ನೋಕಿಯಾ6, ಬಿಡುಗಡೆಯಾಗುತ್ತಿದೆ.!!

ಭಾರತೀಯರ ಮನಸಿನಲ್ಲಿ ಅಚ್ಚುಳಿದಿರವ ನೋಕಿಯಾ ಕಂಪೆನಿಯ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ ಭಾರತೀಯ ಮಾರುಕಟ್ಟೆಗೆ ಮಾತ್ರ ಕಾಲಿಟ್ಟಿರಲಿಲ್ಲ. ಆದರೆ, 13 ನೇ ತಾರೀಖು ನೋಕಿಯಾ ಆಂಡ್ರಾಯ್ಡ್ ಬಿಡುಗಡೆಯಾಗುತ್ತಿದ್ದು, ನೋಕಿಯಾ ಆಂಡ್ರಾಯ್ಡ್ ಖರೀದಿಸಬಹುದು.!!

ಇನ್ನು ಈಗಾಗಲೇ ಎಲ್ಲಡೇ ಸದ್ದು, ಮಾಡುತ್ತಿರುವ ನೋಕಿಯಾ 6 ಇದೇ 13ಕ್ಕೆ ಬಿಡುಗಡೆಯಾಗುತ್ತಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಾಶ್‌ಸೇಲ್‌ನಲ್ಲಿ ಮಾರಾಟ ಮಾಡುವ ನಿರೀಕ್ಷೆ ಇದೆ.!! ಹಾಗಾಗಿ, ನೋಕಿಯಾ 6 ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್‌ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

ಬಿಡುಗಡೆಯಾಗಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್‌ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ.

ಆಂಡ್ರಾಯ್ಡ್ ನ್ಯೂಗಾ 7.0!!

ಆಂಡ್ರಾಯ್ಡ್ ನ್ಯೂಗಾ 7.0!!

ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.0" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್‌ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಈ ರೀತಿಯ ಅಪ್‌ಡೇಟ್‌ ಹೊಂದಿದೆ.

4GB RAm ಮತ್ತು 64GB ROM!!

4GB RAm ಮತ್ತು 64GB ROM!!

ಸ್ಮಾರ್ಟ್‌ಫೋನ್‌ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್‌ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

"ನೋಕಿಯಾ 6" ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ನೋಕಿಯಾ 6 ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಭಾರತೀಯ ಸ್ಮಾರ್ಟ್‌ಫೋನ್‌ ಪ್ರಿಯರು ಇನ್ನು ಕಲವು ದಿನಗಳು ಕಾಯಬೇಕಿದೆ. ಚೀನಾದಲ್ಲಿ ನೂತನ "ನೋಕಿಯಾ 6" ಸ್ಮಾರ್ಟ್‌ಪೋನ್ 16,750 ರೂಪಾಯಿಗೆ ಬಿಡುಗಡೆಗೊಂಡಿದೆ. ಇನ್ನು . ಭಾರತದಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಾಗಲಿದೆ ಎಂದು ರೂಮರ್‌ ಆಗಲೇ ಹರಿದಾಡಿದೆ.!!

ಓದಿರಿ:ಇದೇ 13ಕ್ಕೆ ನೋಕಿಯಾ ಆಂಡ್ರಾಯ್ಡ್ ಮಾರುಕಟ್ಟೆಗೆ!!.ಏಕೆ ಖರೀದಿಸಲೇಬೇಕು ಗೊತ್ತಾ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Nokia 6, Nokia 5, and Nokia 3 India launch confirmed for June 13
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot