Subscribe to Gizbot

ನೋಕಿಯಾದ ಮೊದಲ ಆಂಡ್ರಾಯ್ಡ್ 'ನೋಕಿಯಾ 6' ಖರೀದಿಸಿದ್ದವರಿಗೆ ಸಿಹಿಸುದ್ದಿ!!

Written By:

ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ 'ನೋಕಿಯಾ 6 ' ಖರೀದಿಸಿದ್ದವರಿಗೆ ಸಿಹಿಸುದ್ದಿ ದೊರೆತಿದೆ.! ನೋಕಿಯಾ ಆಂಡ್ರಾಯ್ಡ್ ನಿರ್ಮಾತೃ ಕಂಪೆನಿ ಹೆಚ್‌ಎಮ್‌ಡಿ ಗ್ಲೋಬಲ್ ನೋಕಿಯಾ 6ಗೆ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ನೀಡಲು ಮುಂದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಓರಿಯೋ ಸೇವೆ ನೋಕಿಯಾ 6 ಬಳಕೆದಾರರಿಗೆ ಸಿಗಲಿದೆ.!!

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ 'ನೋಕಿಯಾ 6'!!

ಹೌದು, ನೋಕಿಯಾ 6 ಸ್ಮಾರ್ಟ್‌ಫೋನ್‌ಗೆ 1.5GB ಗಾತ್ರ ಹೊಂದಿರುವ ಆಂಡ್ರಾಯ್ಡ್ 8.0 ಓರಿಯೋ ನವೀಕರಣವು ಬೀಟಾ ಅವೃತ್ತಿಯ ನಂತರ ಕೆಲವು ವಾರಗಳ ನಂತರ ಸಿಗಲಿದ್ದು, ಜಾಗತಿಕವಾಗಿ ಟಿಎ -1003 ಆವೃತ್ತಿಯಲ್ಲಿ ಆಂಡ್ರಾಯ್ಡ್ 8.0 ಅನ್ನು ಅಪ್‌ಡೇಟ್ ಮಾಡಬಹುದು ಎಂದು ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ತಿಳಿಸಿದೆ.!!

ನೋಕಿಯಾದ ಮೊದಲ ಆಂಡ್ರಾಯ್ಡ್ 'ನೋಕಿಯಾ 6' ಖರೀದಿಸಿದ್ದವರಿಗೆ ಸಿಹಿಸುದ್ದಿ!!

ಇನ್ನು ಆಂಡ್ರಾಯ್ಡ್ ಓರಿಯೋ ಫೋನಿನ ರಿಫ್ರೆಶ್ಡ್ ಸೆಟ್ಟಿಂಗ್ಸ್‌ಗಳು, ವರ್ಧಿತ ಚಾರ್ಜ್ ಉಳಿಕೆ ಹಾಗೂ ಬ್ಯಾಕ್‌ಗ್ರೌಂಡ್ ಆಕ್ಟಿವಿಟಿ ಎಲ್ಲವನ್ನು ಬದಲಾವಣೆ ಮಾಡಲಿದ್ದು,!!ಹಾಗಾದರೆ, ನೋಕಿಯಾ 6 ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಮಾಡುವುದು ಹೇಗೆ? ಓರಿಯೋ ಅಪ್‌ಡೇಟ್‌ನಿಂದ ಗ್ರಾಹಕರಿಗೆ ಸಿಗುವ ಅನುಕೂಲಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಹೇಗೆ?

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಹೇಗೆ?

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಕೂಡ ಸಾಮಾನ್ಯ ಅಪ್‌ಡೇಟ್‌ನಂತೆಯೇ ಇರಲಿದೆ.! ನೋಕಿಯಾ 6 ಫೋನಿನಲ್ಲಿ ಸೆಟ್ಟಿಂಗ್ಸ್ ತೆರೆದು ಅಲ್ಲಿ 'ಅಬೌಟ್ ಫೋನ್" ಆಯ್ಕೆಯನ್ನು ತೆರೆದರೆ ನಿಮಗೆ 'ಸಿಸ್ಟಮ್ ಅಪ್‌ಡೇಟ್ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಪ್‌ಡೇಟ್ ಮಾಡಬಹುದು.!! ( ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಕಾಣಿಸಿದ ನಂತರ)

ಅಪ್‌ಡೇಟ್ ಮಾಡುವ ಮುನ್ನ ಎಚ್ಚರವಿರಲಿ!!

ಅಪ್‌ಡೇಟ್ ಮಾಡುವ ಮುನ್ನ ಎಚ್ಚರವಿರಲಿ!!

1.5GB ಗಾತ್ರ ಹೊಂದಿರುವ ಆಂಡ್ರಾಯ್ಡ್ 8.0 ಅನ್ನು ನೋಕಿಯಾ 6 ಸ್ಮಾರ್ಟ್‌ಫೋನ್‌ಗೆ ಅಪ್‌ಡೇಟ್ ಮಾಡುವ ಮುನ್ನ ಎಚ್ಚರವಿರಲಿ. ಅಪ್‌ಡೇಟ್‌ಗೂ ಮುನ್ನ ನಿಮ್ಮ ಫೋನಿನಲ್ಲಿ ಹೆಚ್ಚು ಮೆಮೊರಿ ಖಾಲಿ ಇರಲಿ.! ಮತ್ತು ನಿಮ್ಮ ಫೋನಿನಲ್ಲಿ ಇರುವ ಎಲ್ಲಾ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಿಕೊಳ್ಳಿ.!!

ಬ್ಯಾಕ್ ಗ್ರೌಂಡ್ ಆಪ್ ಕ್ಲಿಯರ್!!

ಬ್ಯಾಕ್ ಗ್ರೌಂಡ್ ಆಪ್ ಕ್ಲಿಯರ್!!

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚಿನ RAM ಅನ್ನು ಬೇಡುತ್ತಿದ್ದದ್ದು ಹಿಂಭಾಗದಲ್ಲಿ ರನ್ ಆಗುವ ಆಪ್ ಗಳು. ಇದು ಹೆಚ್ಚಿನ ಬ್ಯಾಟರಿಯನ್ನು ಸಹ ಖಾಲಿ ಮಾಡುತ್ತಿತ್ತು. ಈ ಹಿನ್ನಲೆಯಲ್ಲಿ ನೂತನ ಆಂಡ್ರಾಯ್ಡ್ ನಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಆಂಡ್ರಾಯ್ಡ್ ಓರಿಯೋ ಮುಂದಾಗಿದೆ. ಹೊಸ ಆಂಡ್ರಾಯ್ಡ್ ನಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಆಪ್ ಗಳು ತನ್ನಂತಾನೆ ಕ್ಲಿಯರ್ ಆಗಲಿದ್ದು, ಇದರಿಂದ ನಿಮ್ಮ ಫೋನಿನ ಬ್ಯಾಟರಿಯು ಉಳಿಯಲಿದೆ.!!

ಆಟೋ ಫಿಲ್ ನೀಡಲಿದೆ ಅಪ್‌ಡೇಟ್!!

ಆಟೋ ಫಿಲ್ ನೀಡಲಿದೆ ಅಪ್‌ಡೇಟ್!!

ಕ್ರೋಮ್ ಮಾದರಿಯಲ್ಲಿ ಆಂಡ್ರಾಯ್ಡ್ ಓರಿಯೋ ಸಹ ಕಾರ್ಯನಿರ್ವಹಿಸಲಿದ್ದು, ನಿಮ್ಮ ಆನ್‌ಲೈನ್ ಆಕೌಂಟ್ ಗಳನ್ನು ಇದು ನಿರ್ವಹಿಸಲಿದೆ. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಳನ್ನು ಇದು ಸ್ಟೋರ್ ಮಾಡಿಟ್ಟುಕೊಳ್ಳಲಿದೆ. ಇದರಿಂದ ನೀವು ಪ್ರತಿ ಬಾರಿ ಪಾಸ್ ವರ್ಡ್ ನೆನಪಿಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ.

ಪಾಸ್‌ವರ್ಡ್ಗಳೂ ಸೆಕ್ಯೂರ್!!

ಪಾಸ್‌ವರ್ಡ್ಗಳೂ ಸೆಕ್ಯೂರ್!!

ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಳನ್ನು ಇದು ಸ್ಟೋರ್ ಮಾಡಿಟ್ಟುಕೊಳ್ಳಲಿರುವ ಆಂಡ್ರಾಯ್ಡ್ ಓರಿಯೋ ನಿಮ್ಮ ಸಮಯವನ್ನು ಉಳಿಸಲಿದೆ. ಜೊತೆಗೆ ಪಾಸ್‌ವರ್ಡ್‌ಗಳನ್ನು ಹೆಚ್ಚು ಸೆಕ್ಯೂರ್ ಆಗಿ ಇಡುವುದರಿಂದ ನಿಮ್ಮ ಖಾಸಾಗಿ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ತೀರಾ ಕಡಿಮೆ ಇರಲಿದೆ.!!

ಓದಿರಿ:ಶಿಯೋಮಿ ರೆಡ್‌ ಮಿ ನೋಟ್ 4 ಫೋನ್ ಬೆಲೆ ಮತ್ತೆ ಇಳಿಕೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HMD Global released the Android 8.0 Oreo update for its new iteration of Nokia 6 that was launched earlier this month.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot