ಭಾರತದಲ್ಲಿ 'ನೋಕಿಯಾ 7.1' ಭರ್ಜರಿ ಬಿಡುಗಡೆ!..ಮೊಬೈಲ್ ಪ್ರಿಯರಿಗೆ ಸುಗ್ಗಿ!!
ಕೇವಲ ಒಂದು ವಾರದ ಒಳಗೆ ರೆಡ್‌ಮಿ ನೋಟ್ 6 ಪ್ರೊ, ರಿಯಲ್‌ಮಿ ಯು1 ಹಾಗೂ ಹಾನರ್ 7 ಸಿ ಸ್ಮಾರ್ಟ್‌ಪೋನ್‌ಗಳ ಬಿಡುಗಡೆ ಕಂಡಿದ್ದ ಭಾರತದ ಮೊಬೈಲ್ ಮಾರುಕಟ್ಟೆಗೆ ಈ ವಾರ ಮೊಬೈಲ್ ಸುಗ್ಗಿ ಎನ್ನಬಹುದು. ಏಕೆಂದರೆ, ವಿಶ್ವ ಮೊಬೈಲ್ ಪ್ರಿಯರ ಮನಗೆದ್ದಿರುವ ಬಜೆಟ್ ಬೆಲೆಯ ನೋಕಿಯಾ 7.1 ಸ್ಮಾರ್ಟ್‌ಫೋನ್ ಇಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ.
ಹೌದು, ಜನಪ್ರಿಯ ನೋಕಿಯಾ ಬ್ರ್ಯಾಂಡ್ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆ ಭಾರತದಲ್ಲಿಂದು ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ನೋಕಿಯಾ 7.1' ಬಿಡುಗಡೆ ಮಾಡಿ ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಈಗಾಗಲೇ ವಿಶ್ವದೆಲ್ಲೆಡೆ ಮೊಬೈಲ್ ಪ್ರಿಯರ ಮನಗೆದ್ದಿರುವ ನೋಕಿಯಾ 7.1 ಭಾರತದ ಮೊಬೈಲ್ ಮಾರುಕಟ್ಟೆಗೆ ಮಧ್ಯಮ ಬೆಲೆಯಲ್ಲಿ ಪ್ರವೇಶಿಸಿದೆ.

ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ಮತ್ತು 4GB RAM+64GB ಸ್ಟೋರೇಜ್ ವೇರಿಯಂಟ್‌ನಲ್ಲಿ ದೇಶ ಮಾರುಕಟ್ಟೆಗೆ ಕಾಲಿಟ್ಟಿರುವ ನೋಕಿಯಾ 7.1 ಸ್ಮಾರ್ಟ್‌ಫೋನ್ ಬೆಲೆ ಕೇವಲ 19,999 ರೂ.ಗೆ ನಿಗದಿಯಾಗಿದೆ. ಹಾಗಾದರೆ, ಇಂದಷ್ಟೇ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ 'ನೋಕಿಯಾ 7.1' ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ನೋಕಿಯಾ 7.1' ವಿನ್ಯಾಸ ಹೇಗಿದೆ?
ನೋಡಲು ನೋಕಿಯಾ 6.1 ಪ್ಲಸ್ ನಂತೆಯೇ ಕಾಣುವ 'ನೋಕಿಯಾ 7.1' ಫೋನ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿರುವುದರಲ್ಲಿ ಎರಡು ಮಾತಿಲ್ಲ. ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ ಜೊತೆಗೆ ಡಿಸ್‌ಪ್ಲೇ ನೋಚ್, ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು.

'ನೋಕಿಯಾ 7.1' ಡಿಸ್‌ಪ್ಲೇ!
'ನೋಕಿಯಾ 7.1' ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಬಗ್ಗೆ ಹೇಳುವುದಾದರೆ, 19:9 ಅನುಪಾತದಲ್ಲಿ 5.84-ಇಂಚಿನ FHD+ (2280x1080 ಪಿಕ್ಸಲ್) ಅತ್ಯುತ್ತಮ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿರುವುದನ್ನು ನೋಡಬಹುದು. ಮೇಲ್ಬಾಗದಲ್ಲಿ ನೋಚ್ ಅನ್ನು ಹೊಂದಿರುವ ಈ ಪ್ಯೂರ್ ಡಿಸ್‌ಪ್ಲೇ 2.5ಡಿ ಸ್ಕ್ರೀನ್ ಗೋರಿಲ್ಲಾ ಗ್ಲಾಸ್ 3 ನಲ್ಲಿ ಪ್ರೊಟೆಕ್ಟ್ ಆಗಿದೆ ಎಂದು ಕಂಪೆನಿ ತಿಳಿಸಿದೆ.

ಪ್ರೊಸೆಸರ್ ಮತ್ತು RAM!
ಮೊದಲೇ ಹೇಳಿದಂತೆ 'ನೋಕಿಯಾ 7.1' ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ 4GB RAM+64GB ಸ್ಟೋರೇಜ್ ವೇರಿಯಂಟ್‌ನಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 400 ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?
ನೋಕಿಯಾ 7.1' ಸ್ಮಾರ್ಟ್‌ಫೋನಿನಲ್ಲಿ 3060 ಎಂಎಎಚ್ ಬ್ಯಾಟರಿಯನ್ನು ನೀಡಲಾಗಿದ್ದು, 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ 4G LTE, Wi-Fi 802.11ac, ಬ್ಲೂಟೂತ್ v5.0, GPS/ A-GPS, GLONASS, NFC, USB Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್, 149.7x71.19x7.99mm ಆಯಾಮದ ಫೋನ್ 159 ಗ್ರಾಂ ಭಾರವಿದೆ.

ಬೆಲೆ ಮತ್ತು ಲಭ್ಯತೆ?
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ 7.1' ಸ್ಮಾರ್ಟ್‌ಫೋನಿನ ಬೆಲೆ ಕಡಿಮೆಯಾಗಿದೆ. ಕೇವಲ 19,999 ರೂ.ಗಳಿಗೆ ದೇಶದ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 7 ರಿಂದ ಮಾರಾಟಕ್ಕೆ ಬರಲಿದೆ. ಏರ್‌ಟೆಲ್‌ನಿಂದ ಚಾಲ್ತಿಯಲ್ಲಿರುವ 199 ರೂ. ಪ್ಲ್ಯಾನ್ ಮೇಲೆ ಪ್ರಿಪೇಯ್ಡ್ ಗ್ರಾಹಕರಿಗಾಗಿ 1ಟಿಬಿ 4ಜಿ ಡೇಟಾ ನಿಡಲಾಗಿದೆ.


Click it and Unblock the Notifications








