Home
ಸುದ್ದಿಜಾಲ

ಹೊಸ ವರ್ಷಕ್ಕೆ ನೋಕಿಯಾದಿಂದ ಹೊಸ ಫೋನ್ ಲಾಂಚ್..!

By Lekhaka

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿರುವ ನೋಕಿಯಾ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಪರಿಚಯ ಮಾಡುವ ಸನಿಹದಲ್ಲಿದೆ. HMD ಗ್ಲೊಬಲ್ ಸಂಸ್ಥೆಯೂ ಈ ಬಾರಿ ಹೊಸ ವರ್ಷದ ಅಂಗವಾಗಿ ನೋಕಿಯಾ ಮಾಡಲ್ ನಂಬರ್ TA-1041 ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಮೊದಲಿಗೆ ಈ ಫೋನ್ ಚೀನಾದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಇತರೆ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ.

ಹೊಸ ವರ್ಷಕ್ಕೆ ನೋಕಿಯಾದಿಂದ ಹೊಸ ಫೋನ್ ಲಾಂಚ್..!

ಆದರೆ ಮೂಲಗಳ ಪ್ರಕಾರ ಇದನ್ನು ನೋಕಿಯಾ 7 ಎಂದು ಕರೆಯಲಾಗುತ್ತಿದೆ. ಇದೇ ಅಕ್ಟೋಬರ್ ನಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಮಾಡುವುದಾಗಿ ತಿಳಿಸಿತ್ತು, ಆದರೂ ಲಾಂಚ್ ಆಗಿರಲಿಲ್ಲ. ಈಗ ಹೊಸ ವರ್ಷದ ಅಂಗವಾಗಿ ನೋಕಿಯಾ 7 ಲಾಂಚ್ ಆಗಲಿದೆ. ಇದರೊಂದಿಗೆ ಹೊಸ ಆವೃತ್ತಿಯ ನೋಕಿಯಾ 6 ಸಹ ಲಾಂಚ್ ಆಗಲಿದೆ ಎನ್ನಲಾಗಿದೆ.

ಇದೇ ಜನವರಿ 19ರಂದು ಗ್ಲೊಬಲ್ ಇವೆಂಟ್ ವೊಂದನ್ನು ಆಯೋಜಿಸಿರುವ HMD, ಅಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದಲ್ಲದೇ ಈ ಕಾರ್ಯಕ್ರಮದಲ್ಲಿ ನೋಕಿಯಾ 9 ಸ್ಮಾರ್ಟ್ ಫೋನ್ ಸಹ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನುವ ರೂಮರ್ ಸಹ ಕೇಳಿಬಂದಿದೆ.

ಮೂಲಗಳ ಪ್ರಕಾರ ನೋಕಿಯಾ 7 ಭಾರತದಲ್ಲಿ ಲಾಂಚ್ ಆಗುವುದು ಡೌಟ್ ಎನ್ನಲಾಗಿದೆ. ಚೀನಾ ಮಾರುಕಟ್ಟೆಯನ್ನು ಗುರಿಯಾಗಿ ಇಟ್ಟು ಕೊಂಡು ಈ ಸ್ಮಾರ್ಟ್ ಫೋನ್ ವಿನ್ಯಾಸ ಮಾಡಲಾಗಿದ್ದು, ಸ್ವಲ್ಪ ದಿನದ ನಂತರದಲ್ಲಿ ಭಾರತಕ್ಕೆ ಕಾಲಿಟ್ಟರೇ ಆಶ್ಚರ್ಯವಿಲ್ಲ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.

ನೋಕಿಯಾ 7 ಸ್ಮಾರ್ಟ್ ಫೋನ್ ನಲ್ಲಿ 5.2 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಸ್ನಾಪ್ ಡ್ರಾಗನ್ 630 ಪ್ರೊಸೆಸರ್, ಆಂಡ್ರಾಯ್ಡ್ 7.1.1 ಮತ್ತು 4GB/6GB RAM ಅನ್ನು ಈ ಫೋನಿನಲ್ಲಿ ಕಾಣುವ ಸಾಧ್ಯತೆ ಇದೆ. 3000mAh ಬ್ಯಾಟರಿ ಸಹ ಇದರಲ್ಲಿದೆ ಎನ್ನಲಾಗಿದ್ದು, ಬೆಲೆ ರೂ.25,000ಕ್ಕಿಂತಲೂ ಹೆಚ್ಚಿರಲಿದೆ.

Best Mobiles in India

English summary
According to latest rumors coming out of China, it seems HMD Global is set to launch Nokia 7 globally in early 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+