ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೋಕ್ಕೋ ಈಗ ಭಾರತದಲ್ಲಿ ಪ್ರಿ-ಆರ್ಡರ್ ಗೆ ಲಭ್ಯ

By Tejaswini P G
|

ನೋಕಿಯಾ ಬ್ರ್ಯಾಂಡ್ ನ ಫೋನ್ ಗಳ ತಯಾರಕರಾದ HMD ಗ್ಲೋಬಲ್ ಸಂಸ್ಥೆಯು ಈ ತಿಂಗಳ ಆದಿಯಲ್ಲಿ ಭಾರತದಲ್ಲಿ ನೋಕಿಯಾ 6(2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೋಕ್ಕೋ ಫೋನ್ಗಳನ್ನು ಲಾಂಚ್ ಮಾಡಿತ್ತು.

ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೋಕ್ಕೋ ಈಗ ಭಾರತದಲ್ಲಿ ಪ್ರಿ-ಆರ್ಡರ್ ಗೆ ಲಭ್


ನೋಕಿಯಾ 6(2018) ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಮಿಕ್ಕ ಎರಡು ಫೋನ್ಗಳು ಶೀಘ್ರದಲ್ಲಿ ಪ್ರೀ-ಆರ್ಡರ್ ಗೆ ಲಭ್ಯವಾಗಲಿದೆ. ಈ ಎರಡೂ ಸ್ಮಾರ್ಟ್ಫೋನ್ಗಳು ಏಪ್ರಿಲ್ 20ರಿಂದ ಪ್ರೀ-ಆರ್ಡರ್ ಗೆ ಲಭ್ಯವಾಗಲಿದ್ದು , ಏಪ್ರಿಲ್ 30 ರಿಂದ ಖರೀದಿಗೆ ಲಭ್ಯವಾಗಲಿದೆ. ನೋಕಿಯಾ 7 ಪ್ಲಸ್ ಅಮೇಜಾನ್ ಇಂಡಿಯಾ, ನೋಕಿಯಾ ಮೊಬೈಲ್ ಶಾಪ್ ಮತ್ತು ಇತರ ರೀಟೈಲರ್ ಗಳ ಬಳಿ ಖರೀದಿಗೆ ಲಭ್ಯವಾಗಲಿದ್ದು ಬೆಲೆ ರೂ 25,999 ನಿಗದಿಪಡಿಸಲಾಗಿದೆ.

ಇನ್ನು ನೋಕಿಯಾ 8 ಸಿರೋಕ್ಕೋ ಫ್ಲಿಪ್ಕಾರ್ಟ್, ನೋಕಿಯಾ ಮೊಬೈಲ್ ಶಾಪ್ ಮತ್ತು ಕೆಲವು ಆಯ್ದ ರೀಟೈಲರ್ಗಳ ಬಳಿ ಮಾತ್ರ ಲಭ್ಯವಾಗಲಿದೆ. ಈ ಫ್ಲ್ಯಾಗ್ಶಿಪ್ ಮೊಬೈಲ್ ನ ಬೆಲೆ ರೂ 49,999 ಎಂದು ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ ಏರ್ಟೆಲ್ ನೋಕಿಯಾ ದ ಸಹಯೋಗದಲ್ಲಿ ನೋಕಿಯಾ 7 ನ ಖರೀದಿಯೊಂದಿಗೆ ರೂ 2000 ದಷ್ಟು ಕ್ಯಾಶ್ಬ್ಯಾಕ್ ನೀಡಲಿದೆ. ಇನ್ನು ಏರ್ಟೆಲ್ ಕನೆಕ್ಶನ್ ಹೊಂದಿರುವವವರು ನೋಕಿಯಾ 8 ಸಿರೋಕ್ಕೋ ಖರೀದಿಸಿದರೆ ರೂ 199 ಅಥವಾ ರೂ 349 ರ ಪ್ರೀಪೇಯ್ಡ್ ರೀಚಾರ್ಜ್ ಮಾಡಿದರೆ 6 ತಿಂಗಳ ಕಾಲ 20GB ಅಧಿಕ ಡೇಟಾ ಪಡೆಯಲು ಅರ್ಹರಾಗಿರುತ್ತಾರೆ. ಇನ್ನು ಪೋಸ್ಟ್ಪೇಯ್ಡ್ ಗ್ರಾಹಕರೂ ಕೂಡ ರೂ 399 ಅಥವಾ ರೂ 499 ರ ರೀಚಾರ್ಜ್ ನೊಂದಿಗೆ 20GB ಹೆಚ್ಚಿನ ಡೇಟಾ ಪಡೆಯಬಹುದಾಗಿದೆ.

ನೋಕಿಯಾ 7 ಪ್ಲಸ್ ಸ್ಪೆಸಿಫಿಕೇಶನ್ಗಳು

ನೋಕಿಯಾ 7 ಪ್ಲಸ್ 6-ಇಂಚ್ IPS LCD ಡಿಸ್ಪ್ಲೇ ಹೊಂದಿದ್ದು 2160X1080 ಪಿಕ್ಸೆಲ್ಗಳ ರೆಸೊಲ್ಯೂಶನ್ ಮತ್ತು 18:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 660 ಒಕ್ಟಾ-ಕೋರ್ SoC ಪ್ರಾಸೆಸರ್ ಹೊಂದಿದ್ದು ಜೊತೆಗೆ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಹೊಂದಿದೆ. ಇದರ ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋSD ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

ಇನ್ನು ಇದರ ಕ್ಯಾಮೆರಾ ಕುರಿತು ಹೇಳುವುದಾದರೆ ಇದು ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಎರಡು 12MP ಕ್ಯಾಮೆರಾ ಸೆನ್ಸರ್ಗಳನ್ನು ಹೊಂದಿದೆ. ಇದರ ಪ್ರೈಮರಿ ಸೆನ್ಸರ್ f/1.75 ಅಪರ್ಚರ್ ಹೊಂದಿದ್ದು ಸೆಕೆಂಡರಿ ಸೆನ್ಸರ್ f/2.6 ಅಪರ್ಚರ್ ಹೊಂದಿದೆ. ಈ ಎರಡೂ ಸೆನ್ಸರ್ಗಳೂ ಕಾರ್ಲ್-ಝೇಯ್ಸ್ ಆಪ್ಟಿಕ್ಸ್ ಗಳಾಗಿದ್ದು, ಸೆಕೆಂಡರಿ ಸೆನ್ಸರ್ 2X ಆಪ್ಟಿಕಲ್ ಝೂಮ್ ಸಾಮರ್ಥ್ಯ ಹೊಂದಿದೆ.

ಇನ್ನು ನೋಕಿಯಾ 7 ಪ್ಲಸ್ ಮುಂಭಾಗದಲ್ಲಿ 16-MP ಫ್ರಂಟ್ ಕ್ಯಾಮೆರಾ ಹೊಂದಿದ್ದು ಇದು ಕಾರ್ಲ್-ಝೇಯ್ಸ್ ಆಪ್ಟಿಕ್ಸ್ ಮತ್ತು 1080 ವೀಡಿಯೋ ರೆಕಾರ್ಡಿಂಗ್ ಫೀಚರ್ ಹೊಂದಿದೆ. ನೋಕಿಯಾ 7 ಪ್ಲಸ್ ಗೂಗಲ್ ನ ಆಂಡ್ರಾಯ್ಡ್ ಒನ್ ಬ್ರ್ಯಾಂಡಿಂಗ್ ನ ಆಂಡ್ರಾಯ್ಡ್ ಓರಿಯೋ ಓಎಸ್ ಹೊಂದಿದೆ. ಫೋನ್ ನ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದೆ. ಈ ನೋಕಿಯಾ ಸ್ಮಾರ್ಟ್ಫೋನ್ 3800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು USB-ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹೊಂದಿದೆ.

ನೋಕಿಯಾ 8 ಸಿರೋಕ್ಕೋ ಸ್ಪೆಸಿಫಿಕೇಶನ್ಗಳು

ನೋಕಿಯಾ 8 ಸಿರೋಕ್ಕೋ 5.5 ಇಂಚ್ OLED ಡಿಸ್ಪ್ಲೇ ಹೊಂದಿದ್ದು 2560X1440 ಪಿಕ್ಸೆಲ್ ಗಳ ಕ್ವಾಡ್ HD ರೆಸೊಲ್ಯೂಶನ್ ಹೊಂದಿದೆ. ಇದು 16:9 ರ ಆಸ್ಪೆಟ್ ಅನುಪಾತ ಹೊಂದಿದೆ. ನೋಕಿಯಾ 8 ಸಿರೋಕ್ಕೋ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 835 ಒಕ್ಟಾ-ಕೋರ್ SoC ಪ್ರಾಸೆಸರ್ ಹೊಂದಿದ್ದು ಜೊತೆಗೆ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ಹೊಂದಿದೆ.

ಇದು ಕೂಡ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 12MP ಮತ್ತು 13MP ಕ್ಯಾಮೆರಾ ಸೆನ್ಸರ್ಗಳನ್ನು ಹೊಂದಿದೆ. ಮುಂಭಾಗದಲ್ಲಿ 5 MP ಫ್ರಂಟ್ ಫೇಸಿಂಗ್ ಸೆಲ್ಫೀ ಕ್ಯಾಮೆರಾ ಇದ್ದು ಜೊತೆಗೆ ಫ್ಲ್ಯಾಶ್ ಕೂಡ ಇದೆ.

How to Send a WhatsApp Message Without Saving the Contact in Your Phone - GIZBOT KANNADA

ಫೇಸ್‌ಬುಕ್‌ನಲ್ಲಿನ ಎಲ್ಲಾ ಹಳೇ ಪೋಸ್ಟ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?!ಫೇಸ್‌ಬುಕ್‌ನಲ್ಲಿನ ಎಲ್ಲಾ ಹಳೇ ಪೋಸ್ಟ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?!

ಇದು ಕೂಡ ಆಂಡ್ರಾಯ್ಡ್ ಒನ್ ಬೆಂಬಲದ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ನೋಕಿಯಾ 8 ಸಿರೋಕ್ಕೋ ದ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಇದ್ದು, ಐಪಿ67 ಡಸ್ಟ್ & ವಾಟರ್ ರೆಸಿಸ್ಟೆನ್ಸ್, 3260 mAh ಸಾಮರ್ಥ್ಯದ ಬ್ಯಾಟರಿ ವೈರ್ಲೆಸ್ ಚಾರ್ಜಿಂಗ್ ಸಹಿತ ಮೊದಲಾದ ಫೀಚರ್ಗಳು ಇದರಲ್ಲಿವೆ.

Best Mobiles in India

Read more about:
English summary
HMD Global has launched the Nokia 7 Plus and Nokia 8 Sirocco smartphone earlier this month in India, along with the Nokia 6 (2018). Both the smartphone will go on pre-order from 20 April. he Nokia 7 Plus will go on sale with a price tag of Rs 25,999 and Nokia 8 Sirocco is priced at Rs 49,999. Airtel is offering a cashback of Rs 2,000 on the purchase of Nokia 7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X