ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದೆ ನೋಕಿಯಾ 7 ಸ್ಮಾರ್ಟ್ ಫೋನ್..!
HMD ಗ್ಲೊಬಲ್ ಸಂಸ್ಥೆಯೂ ಮುಂದಿನ ತಿಂಗಳು ನಡೆಯಲಿರುವ ಮೊಬೈಲ್ ವರ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಹೊಸ ಹೊಸ ನೋಕಿಯಾ ಫೋನ್ ಗಳನ್ನು ಲಾಂಚ್ ಮಾಡಲಿದ ಎನ್ನಲಾಗಿದೆ. ಇದಕ್ಕಾಗಿಯೇ ಭರ್ಜರಿ ತಯಾರಿಯನ್ನು ನಡೆಸಲು ಶುರುಮಾಡಿದೆ. ಇದೇ ಹಿನ್ನಲೆಯಲ್ಲಿ ನೋಕಿಯಾ 7 ಸ್ಮಾರ್ಟ್ ಫೋನ್ ಅನ್ನು ಇದೇ ಕಾರ್ಯಕ್ರಮದಲ್ಲಿ ಲಾಂಚ್ ಮಾಡಲಿದ್ದು, ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಮುಂದಿನಂತೆ ಇದೆ.

ಮೂಲಗಳ ಪ್ರಕಾರ ಈಗಾಗಲೇ ನೋಕಿಯಾ 7 ಸ್ಮಾರ್ಟ್ ಫೋನ್ ಉತ್ಪಾದನೆಯನ್ನು ನೋಕಿಯಾ ಶುರು ಮಾಡಿದ್ದು, ಲಾಂಚ್ ಆದ ನಂತರದಲ್ಲಿ ನೇರಾವಾಗಿ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎನ್ನಲಾಗಿದೆ. ನೋಕಿಯಾ 7 ಟಾಪ್ ಎಂಡ್ ಸರಣಿಯ ಪೋನ್ ಆಗಿರಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಫುಲ್ ಸ್ಕ್ರಿನ್ ಡಿಸ್ ಪ್ಲೇ:
ನೋಕಿಯಾ 7 ಸ್ಮಾರ್ಟ್ ಪೋನ್ ಫುಲ್ ಸ್ಕ್ರಿನ್ ಡಿಸ್ ಪ್ಲೇ ಯನ್ನು ಹೊಂದಿದ್ದು, ಬ್ರೆಜಿಲ್ ಲೈಸ್ ವಿನ್ಯಾಸ ದಿಂದ ಕೂಡಿದೆ. ಅಲ್ಲದೇ ಇದು 18:9 ಅನುಪಾತದಾಗಿರಲಿದೆ. ಇದು ನೋಕಿಯಾದ ಮೊದಲ ಫುಲ್ ಸ್ಕ್ರಿನ್ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಆಗಲಿದೆ. ಇದರಲ್ಲಿ ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವವು ಉತ್ತಮವಾಗಿರಲಿದೆ.

4GB RAM:
ಇದಲ್ಲೇ ನೋಕಿಯಾ 7 ಸ್ಮಾರ್ಟ್ ಫೋನಿನಲ್ಲಿ 4GB RAM ಮತ್ತು ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದು ಫೋನ್ ವೇಗವಾಗಿ ಕಾರ್ಯನಿರ್ವಹಿಸಲು ಸಹಾಯವನ್ನು ಮಾಡಲಿದೆ. ಉತ್ತಮ ಗೇಮಿಂಗ್ ಅನುಭವನ್ನು ನೀಡಲಿದೆ.

ಉತ್ತಮ ಕ್ಯಾಮೆರಾ:
ಇದಲ್ಲದೇ ನೋಕಿಯಾ 7 ಸ್ಮಾರ್ಟ್ ಫೋನಿನಲ್ಲಿ ಉತ್ತಮ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಡ್ಯುಯಲ್ ಕ್ಯಾಮೆರಾ ಸೆಪಟ್ ಅನ್ನು ಇಲ್ಲವೇ ಸಿಂಗಲ್ ಕ್ಯಾಮೆರಾವನ್ನು ಅಳವಡಿಸುವ ಸಾಧ್ಯತೆ ಎನ್ನಲಾಗಿದೆ.


Click it and Unblock the Notifications








