'ನೋಕಿಯಾ 8.1' ರಿಲೀಸ್: ಫೀಚರ್ಸ್, ಬೆಲೆ ಮತ್ತು ತಿಳಿಯಬೇಕಾದ ವಿಷಯಗಳು!

|

ನೋಕಿಯಾ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ನೋಕಿಯಾ 8.1' ವಿಶ್ವ ಮೊಬೈಲ್ ಮಾರುಕಟ್ಟೆಗೆ ಬುಧವಾರ ಕಾಲಿಟ್ಟಿದೆ. ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ ನೋಕಿಯಾ ಎಕ್ಸ್7 ರೂಪಾಂತರದ ಸ್ಮಾರ್ಟ್‌ಫೋನ್ ಇದಾಗಿದ್ದು, ದುಬೈನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಯಾಗಿ ಮಾರುಕಟ್ಟೆಯ ಗಮನಸೆಳೆದಿದೆ.

ನೋಕಿಯಾ 7 ಪ್ಲಸ್‌ ಉತ್ತರಾಧಿಕಾರಿಯಾಗಿ ಎಚ್ಎಂಡಿ ಗ್ಲೋಬಲ್ ಅನಾವರಣಗೊಳಿಸಿರುವ 'ನೋಕಿಯಾ 8.1' ಸ್ಮಾರ್ಟ್‌ಫೋನ್ HDR10 ಬೆಂಬಲದೊಂದಿಗೆ 6.18-ಇಂಚಿನ ಪ್ಯೂರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಒನ್ ಪ್ರೋಗ್ರಾಂ, ಸ್ನ್ಯಾಮ್‌ಪ್ಡ್ರಾಗನ್ 710 ಪ್ರೊಸೆಸರ್, ಆಂಡ್ರಾಯ್ಡ್ 9 ಪೈ ನಂತರ ಹಲವು ನೂತನ ವಿಶೇಷತೆಗಳನ್ನು ಹೊತ್ತು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

'ನೋಕಿಯಾ 8.1' ರಿಲೀಸ್: ಫೀಚರ್ಸ್, ಬೆಲೆ ಮತ್ತು ತಿಳಿಯಬೇಕಾದ ವಿಷಯಗಳು!

ಬ್ಲೂ, ಸಿಲ್ವರ್, ಸ್ಟೀಲ್, ಕಾಪರ್, ಐಯಾನ್ ಸ್ಟೀಲ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ನೋಕಿಯಾ 8.1' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಹಾಗಾದರೆ, ನೆನ್ನೆಯಷ್ಟೇ ಬಿಡುಗಡೆ ಕಂಡಿರುವ ನೋಕಿಯಾ 8.1' ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನಿನ ವಿಶೇಷತೆಗಳು ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ನೋಕಿಯಾ 8.1' ಡಿಸ್‌ಪ್ಲೇ!

'ನೋಕಿಯಾ 8.1' ಡಿಸ್‌ಪ್ಲೇ!

'ನೋಕಿಯಾ 8.1' ಸ್ಮಾರ್ಟ್‌ಫೋನ್ 18.7:9 ಆಕಾರ ಅನುಪಾತದಲ್ಲಿ 6.18-ಇಂಚಿನ ಪೂರ್ಣ ಹೆಚ್‌ಡಿ + (1080x2244 ಪಿಕ್ಸೆಲ್ಗಳು) ಡಿಸ್‌ಪ್ಲೇನನ್ನು ಹೊಂದಿದ್ದು, ಶೇ. 81.5 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, ಹೆಚ್‌ಡಿಆರ್ 10 ಬೆಂಬಲ, 500 ಎನ್ಟಿಟಿಗಳ ಗರಿಷ್ಟ ಹೊಳಪು ಮತ್ತು 96 ಪ್ರತಿಶತ ಬಣ್ಣದ ಗ್ಯಾಮಟ್ ಸಾಮರ್ಥ್ಯವನ್ನು ಹೊಂದಿರುವಂತಹ ಅದ್ಬುತ ಡಿಸ್‌ಪ್ಲೇ ಇದಾಗಿದೆ.

'ನೋಕಿಯಾ 8.1' ಪ್ರೊಸೆಸರ್!

'ನೋಕಿಯಾ 8.1' ಪ್ರೊಸೆಸರ್!

ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ 2.2GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 soc ಪ್ರೊಸೆಸರ್ ಅನ್ನು ಹೊಂದಿದೆ. ಇದು 4GB LPDDR4x RAM ಮತ್ತು 64GB ಅಂತರ್ಗತ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವುದನ್ನು ನೋಡಬಹುದಾಗಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ 400 ಜಿಬಿ ವರೆಗಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಲಭ್ಯವಿದೆ.

'ನೋಕಿಯಾ 8.1' ಕ್ಯಾಮೆರಾ!

'ನೋಕಿಯಾ 8.1' ಕ್ಯಾಮೆರಾ!

Zeiss ಆಪ್ಟಿಕ್ಸ್, 1.4-ಮೈಕ್ರಾನ್ ಪಿಕ್ಸೆಲ್ಸ್, ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಒಳಗೊಂಡ 12-ಮೆಗಾಪಿಕ್ಸೆಲ್ ಮತ್ತು ಡೆಪ್ತ್ ಚಿತ್ರಗಳಿಗಾಗಿ ಮಾಧ್ಯಮಿಕ 13-ಮೆಗಾಪಿಕ್ಸೆಲ್ ಸ್ಥಿರ-ಫೋಕಸ್ ಲೆನ್ಸ್ ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು 0.9-ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವಿದ್ದು, ಕ್ಯಾಮೆರಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ನೋಕಿಯಾ 8.1 ಸ್ಮಾರ್ಟ್‌ಪೋನ್ 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ 3,500mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಪೈ, 4G ವೋಲ್ಟ್, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, 3.5mm ಹೆಡ್‌ಫೋನ್ ಜ್ಯಾಕ್, USB Type-C ಪೋರ್ಟ್‌ನಂತರ ಇತ್ತೀಚಿನ ಫೀಚರ್ಸ್‌ಗಳನ್ನು ಹೊಂದಿದ್ದು, ಒಟ್ಟು 178 ಗ್ರಾಂ ಭಾರವಿದೆ.

'ನೋಕಿಯಾ 8.1' ಬೆಲೆ ಎಷ್ಟು?

'ನೋಕಿಯಾ 8.1' ಬೆಲೆ ಎಷ್ಟು?

ದುಬೈನಲ್ಲಿ ನೆನ್ನೆ ಬಿಡುಗಡೆಯಾಗಿರುವ 'ನೋಕಿಯಾ 8.1' ಸ್ಮಾರ್ಟ್‌ಪೋನ್ ಭಾರತದಲ್ಲಿ ಇದೇ ಡಿಸೆಂಬರ್ 10ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ದುಬೈನಲ್ಲಿ ಬಿಡುಗಡೆಯಾಗಿರುವ ನೋಕಿಯಾ 8.1' ಸ್ಮಾರ್ಟ್‌ಪೋನ್ ಬೆಲೆ 399 ಯುರೋಗಳಾಗಿವೆ. ಭಾರತದ ರೂ. ಲೆಕ್ಕದಲ್ಲಿ ಅಂದಾಜು 31,900 ರೂಪಾಯಿಗಳಾಗಿರಬಹುದು.

Best Mobiles in India

English summary
On Wednesday, HMD Global officially announced the Nokia 8.1. The company said at an event in Dubai that the Nokia 8.1 is the direct. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X