Subscribe to Gizbot

ಭರ್ಜರಿ ಪೈಪೋಟಿ ನೀಡಲು ಆಗಮಿಸುತ್ತಿದೆ ನೋಕಿಯಾದ ಹೊಸ ಡಿವೈಸ್ ನೋಕಿಯಾ 8

Posted By: Shwetha PS

ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಮಾರುಕಟ್ಟೆಗೆ ಆಗಮಿಸಿದಾಗ ಎಚ್‌ಎಮ್‌ಡಿ ಗ್ಲೋಬಲ್ ಲಾಂಚ್ ಮಾಡಲಿರುವ ಮುಂದಿನ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಆಗಲೇ ಚರ್ಚೆ ಜೋರಾಗಿತ್ತು. ಈಗ ದುಬಾರಿ ಬೆಲೆಯ ನೋಕಿಯಾ 9 ಲಾಂಚ್‌ಗೆ ಸಜ್ಜುಗೊಳ್ಳುತ್ತಿದ್ದು ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ನೀಡುತ್ತಿರುವ ಆಪಲ್, ಸ್ಯಾಮ್‌ಸಂಗ್ ಮತ್ತು ಗೂಗಲ್‌ಗೆ ನೋಕಿಯಾ ಪೈಪೋಟಿಯನ್ನು ನೀಡಲಿದೆ.

ಭರ್ಜರಿ ಪೈಪೋಟಿ ನೀಡಲು ಆಗಮಿಸುತ್ತಿದೆ ನೋಕಿಯಾದ ಹೊಸ ಡಿವೈಸ್ ನೋಕಿಯಾ 8

ಈಗ ಇನ್ನೊಂದು ಡಿವೈಸ್ ನೋಕಿಯಾ 8 ಅನ್ನು ಎಚ್‌ಎಮ್‌ಡಿ ಗ್ಲೋಬಲ್ ಲಾಂಚ್ ಮಾಡಲಿದ್ದು ಇದು ಕೂಡ ದುಬಾರಿ ಹ್ಯಾಂಡ್‌ಸೆಟ್ ಎಂದೆನಿಸಲಿದೆ. ಮೂಲಗಳ ಪ್ರಕಾರ ಈ ಹ್ಯಾಂಡ್‌ಸೆಟ್ ಜುಲೈ 31 ರಂದು ಆಗಮಿಸಲಿದ್ದು ಇದರ ಬೆಲೆ ರೂ 44,000 ಆಗಿದೆ.

Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!
ನೋಕಿಯಾ ಸ್ಮಾರ್ಟ್‌ಫೋನ್ ಮಾಡೆಲ್ ಸಂಖ್ಯೆ TA 1004 ಎಂದಾಗಿದ್ದು ನೋಕಿಯಾದ ದುಬಾರಿ ಫೋನ್ ಅನ್ನು ನೋಕಿಯಾ 8 ಎಂಬುದಾಗಿ ಪರಿಚಯಿಸಲಾಗಿದೆ. ಮೂಲಗಳು ಹೇಳುವಂತೆ ನೋಕಿಯಾ 8 ನ ಕೆಲವೊಂದು ಫೀಚರ್‌ಗಳು ದೊರಕಿದ್ದು ಇದು 5.7 ಇಂಚಿನ 2 ಕೆ ಡಿಸ್‌ಪ್ಲೇಯನ್ನು ಹೊಂದಿದೆ. ಓಕ್ಟಾ ಕೋರ್ 2.45GHZ ಸ್ನ್ಯಾಪ್‌ಡ್ರ್ಯಾಗನ್ 835 ಸಾಕ್ ಅನ್ನು ಹೊಂದಿದೆ. 4ಜಿಬಿ RAM ಅನ್ನು ಫೋನ್ ಹೊಂದಿದ್ದು 64 ಜಿಬಿ ಮೆಮೊರಿ ಸಾಮರ್ಥ್ಯ ಇದರಲ್ಲಿದೆ.

ನೋಕಿಯಾ 8 ಆಂಡ್ರಾಯ್ಡ್ 7.1.1 ನಾಗಟ್ ಅನ್ನು ಹೊಂದಿದ್ದು ಡ್ಯುಯಲ್ ರಿಯರ್ ಕ್ಯಾಮೆರಾ ಇದರಲ್ಲಿದೆ ಮತ್ತು 13 ಎಮ್‌ಪಿ ಸೆನ್ಸಾರ್‌ಗಳನ್ನು ಇದು ಪಡೆದಿದೆ. ಎಲ್‌ಇಡಿ ಫ್ಲ್ಯಾಶ್ ಅನ್ನು ಡಿವೈಸ್ ಒಳಗೊಂಡಿದೆ. ಈ ಹಿಂದೆ ಬಂದಿರುವ ಸುದ್ದಿಯ ಪ್ರಕಾರ ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದರಲ್ಲಿದ್ದು, 3.5 ಎಮ್‌ಎಮ್ ಆಡಿಯೋ ಜಾಕ್, ಸಾಮರ್ಥ್ಯವುಳ್ಳ ಬ್ಯಾಟರಿ ಮತ್ತು ತ್ವರಿತ ಚಾರ್ಜ್ 3.0 ಅನ್ನು ಇದು ಬೆಂಬಲಿಸಲಿದೆ.

ನೋಕಿಯಾ 8 ರ ಇನ್ನಷ್ಟು ಫೀಚರ್‌ಗಳನ್ನು ನಾವು ತಿಳಿಸಲಾಗುವುದಿಲ್ಲ. ಅಂತೂ ನಾವು ಜುಲೈ 31 ರವರೆಗೆ ಇನ್ನಷ್ಟು ಹೊಸ ಫೀಚರ್‌ಗಾಗಿ ಕಾಯಲೇಬೇಕು.

Read more about:
English summary
Nokia 8 is rumored to be launched on July 31 and likely to be priced around Rs. 44,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot